ಬೆಂಗಳೂರು: ಎನ್ ಐಎ ಅಧಿಕಾರಿಗಳು ರಾಜ್ಯದ ಕೆಲವೆಡೆ ಗುರುವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದೆ. ಈ ವೇಳೆ ಮೋಸ್ಟ್ ವಾಂಟೆಡ್ ಶಂಕಿತ ಉಗ್ರ ಯಾಸಿರ್ ಅರಾಫತ್ ಅಲಿಯಾಸ್ ಯಾಸಿರ್ ಹಸ್ಸನ್ ನನ್ನು ಬೇಟೆಯಾಡಿದ ಕ್ಷಣಗಳು ರೋಚಕವಾಗಿತ್ತು.
ಎನ್ ಐಎ ಅಧಿಕಾರಿಗಳು ಯಾರಿಗೂ ತಿಳಿಯದ ಹಾಗೆ ರಹಸ್ಯವಾಗಿ ಬೆಳಗಿನ ಜಾವ ಕಾರ್ಯಚರಣೆ ನಡೆಸಿತ್ತು. ಯಾಸಿರ್ ಹಸ್ಸನ್ ಮನೆಯಲ್ಲಿದ್ದ ಮಾಹಿತಿಯನ್ನು ಹಡೆದುಕೊಂಡಿದ್ದ ಎನ್ ಐಎ ಅಧಿಕಾರಿಗಳು ಆರ್.ಟಿ ನಗರ ಭೀಮಣ್ಣ ಗಾರ್ಡನ್ ನ ಲ್ಲಿ ಖಾಕಿ ಪಡೆ ಸುತ್ತುವರಿದಿತ್ತು. ಐವತ್ತಕ್ಕೂ ಹೆಚ್ಚು ಅಧಿಕಾರಿಗಳು , ಸಿಬ್ಬಂದಿಗಳು ಬೆಳಗಿನ ಜಾವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಶಂಕಿತ ಉಗ್ರ ಯಾಸಿರ್ ಅರಾಫತ್ ಮುಂಜಾನೆ ಮೂರು ಗಂಟೆಗೆ ಗಾಢ ನಿದ್ರೆಯಲ್ಲಿ ದ್ದಾಗ ಉಗ್ರನ ಮನೆಗೆ ಎನ್ ಐಎ ತಂಡ ಮನೆಗೆ ನುಗ್ಗಿತ್ತು. ಸತತ ಎರಡು ಗಂಟೆಗಳ ಕಾಲ ಮನೆಯಲ್ಲಿ ಶೋಧ ಕಾರ್ಯನಡೆಸಿ ಯಾಸಿರ್ ನನ್ನು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ. ಈ ದಾಳಿ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.