ಹುಬ್ಬಳ್ಳಿ: ಇತ್ತೀಚಿನ ದಿನಲ್ಲಿ ನಗರದಲ್ಲಿ ಸುಲಿಗೆ ,ದರೋಡೆ, ಕೊಲೆ, ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ. ಸಣ್ಣ ಸಣ್ಣ ವಿಚಾರಗಳಿಗೂ ಹತ್ಯೆ ನಡೆಯುತ್ತಿದೆ.ಕಾನೂನು ಸುವ್ಯವಸ್ಥೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಇಂಹದ್ದೇ ಒಂದು ಘಟನೆ ಹುಬ್ಬಳ್ಳಿಯಲ್ಲಿ ಸಣ್ಣ ವಿಚಾರಕ್ಕೆ ಹಲ್ಲೆ ನಡೆದಿದೆ.
ಹೌದು ಹುಬ್ಬಳ್ಳಿಯಲ್ಲಿ ಬುದ್ಧಿ ಹೇಳಲು ಹೋದಾ ಕಾಂಗ್ರೆಸ್ ಮುಖಂಡನಿಗೆ ಚಾಕು ಇರಿದ್ದಾರೆ. ಹುಬ್ಬಳ್ಳಿಯ ಸೋನಿಯಾ ಗಾಂಧಿ ನಗರದಲ್ಲಿ ತಡರಾತ್ರಿ ನಡೆದಿದೆ. ಕಾಂಗ್ರೆಸ್ ಮುಖಂಡ ತೌಸಿಫ್ ಗೆ ದುಷ್ಕರ್ಮಿಗಳು ಚಾಕು ಇರಿದ್ದಾರೆ. ಗಾಯಾಳು ತೌಸಿಫ್ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಗಳ ತೆಗೆದು ಇಸ್ಮಾಯಿಲ್ ಅಂಡ್ ಟೀಮ್ ಚಾಕು ಇರಿದಿದ್ದಾರೆ. ಈ ವೇಳೆ ತೌಸಿಫ್ ಗೆ ಕಾಲು , ಬೆನ್ನಿಗೆ ಚಾಕು ಹಾಕಿ ಹಲ್ಲೆ ಮಾಡಿದ್ದಾರೆ. ಈಘಟನೆ ಸಂಬಂಧಿಸಿ ಇಸ್ಮಾಯಿಲ್ ಅಂಡ್ ಟೀಮ್ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.