ಬೆಂಗಳೂರು: ಏಪ್ರಿಲ್ 26ರ ಇಂದು ಬೆಳಗ್ಗೆ 7.00 ರಿಂದ ಸಂಜೆ 6.00 ಗಂಟೆಯವರೆಗೆ ಮತದಾನ ನಡೆಯಿತು. ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯಿತು. ಅದಕ್ಕಿಂತ ಮುಂಚಿತವಾಗಿ ಬೆಳಗ್ಗೆ 5.30ಕ್ಕೆ ಅಣುಕು ಮತದಾನ ಪ್ರಾರಂಭವಾಯಿತು. 7.00 ಗಂಟೆಯೊಳಗಾಗಿ ಪೂರ್ಣಗೊಂಡಿತು. ಮತಗಟ್ಟೆಗಳಲ್ಲಿ ಮತದಾರರಿಗೆ ಯಾವುದೇ ಸಮಸ್ಯೆ ಆಗದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿತ್ತು. ಇದರ ನಡುವೆ ನಡೆದಂತ ಮತದಾನ ಇದೀಗ ಅಂತ್ಯಗೊಂಡಿದೆ.
ಎಲ್ಲಾ ಮಸ್ಟರಿಂಗ್ ಕೇಂದ್ರಗಳಿಂದ ಬ್ಯಾಲೆಟ್ ಯುನಿಟ್(ಇವಿಎಂ), ಕಂಟ್ರೋಲ್ ಯುನಿಟ್(ಸಿಯು), ವಿವಿ ಪ್ಯಾಟ್ ಗಳನ್ನು ಮತಗಟ್ಟೆಗಳಿಗೆ ಮತದಾನಕ್ಕೂ ಮುನ್ನಾ ದಿನವೇ ತಲುಪಿಸಲಾಗಿತ್ತು. ಅಣುಕು ಮತದಾನದ ವೇಳೆ ಇವಿಎಂ ನಲ್ಲಿ ಲೋಪದೋಷಗಳು ಕಂಡುಬಂದರೆ ಸೆಕ್ಟರ್ ಅಧಿಕಾರಿ ಮೂಲಕ ಕನಿಷ್ಠ 10 ಮತಗಟ್ಟೆಗಳಿಗೆ ನಿಯೋಜನೆ ಮಾಡಿರುವಂತಹ ಮಾರ್ಗ ಅಧಿಕಾರಿಯು(Route Officer) ಪರ್ಯಾಯ ವ್ಯವಸ್ಥೆ ಮಾಡೋದಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಚುನಾವಣಾ ಆಯೋಗದ ಸಕಲ ವ್ಯವಸ್ಥೆಯ ನಡುವೆ, ಇಂದು ಶಾಂತಿಯುತವಾಗಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯಿತು. ಸಂಜೆ 5 ಗಂಟೆಯವರೆಗೆ ದೊರೆತಂತ ಮತದಾನದ ಶೇಕಡಾವಾರು ಪ್ರಮಾಣದಂತೆ ಬೆಂಗಳೂರು ನಗರದಲ್ಲಿ ಅತೀ ಕಡಿಮೆ ಮತದಾನವಾಗಿದ್ದರೇ, ಮಂಡ್ಯದಲ್ಲಿ ಅತಿ ಹೆಚ್ಚು ಮತದಾನವಾಗಿರೋದಾಗಿ ತಿಳಿದು ಬಂದಿದೆ.
ಇಂದು ನಡೆದಂತ ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಮೊದಲ ಹಂತದ ಮತದಾನದ ಅವಧಿ ಮುಕ್ತಾಯಗೊಂಡಿದೆ. ಕೇವಲ ಸರದಿ ಸಾಲಿನಲ್ಲಿ ನಿಂತವರಿಗೆ ಮಾತ್ರವೇ ಮತದಾರರು ಮತ ಚಲಾಯಿಸೋವರೆಗೂ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.
ಇಲ್ಲಿದೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳ 5 ಗಂಟೆಯವರೆಗೆ ನಡೆದಂತ ಮತದಾನದ ಶೇಕಡಾವಾರು ಪ್ರಮಾಣ
‘SC, ST, OBC’ ಹಕ್ಕುಗಳನ್ನ ಕಸಿದುಕೊಳ್ಳಲು ಕಾಂಗ್ರೆಸ್ ಪಿತೂರಿ : ಪ್ರಧಾನಿ ಮೋದಿ