ಬೆಂಗಳೂರು: ದೇಶದ ಪ್ರತಿಷ್ಠಿತ ಎಜುಕೇಷನ್ ಟುಡೇ ಸಂಸ್ಥೆಯು ಪ್ರತಿವರ್ಷ ಕೊಡಮಾಡುವ “ ಕ್ರಿಯಾಶೀಲ ಪ್ರಾಂಶುಪಾಲರು” ಎಫೆಕ್ಟಿನ್ ಪ್ರಿನ್ಸಿಪಾಲ್ಸ್ ((EFFECTIVE PRIINCIPALS) ಪ್ರಶಸ್ತಿಗೆ ಈ ವರ್ಷ ಬೆಂಗಳೂರಿನ ಖ್ಯಾತ ಶಿಕ್ಷಣ ತಜ್ಱ ಹಾಗೂ ಪ್ರತಿಷ್ಠಿತ ನಿಸರ್ಗ ವಿದ್ಯಾನಿಕೇತನ ಶಾಲೆಯ ಪ್ರಾಂಶುಪಾಲ ಕೆ. ಉದಯ ರತ್ನಕುಮಾರ್ ( Udaya Rathna Kumar K ) ಅವರಿಗೆ ಸಂದಿದೆ.
ರಾಷ್ಟ್ರೀಯ ಮಟ್ಟದಲ್ಲಿ ಶೈಕ್ಷಣಿಕ ವಲಯದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಪ್ರಾಂಶುಪಾಲರನ್ನು ಗುರುತಿಸಿ, ಎಜುಕೇಷನ್ ಟುಡೇ ಸಂಸ್ಥೆಯು ನೀಡುವ ಪ್ರತಿಷ್ಠಿತ ಪ್ರಶಸ್ತಿಗೆ ಪ್ರಾಂಶುಪಾಲ ಕೆ. ಉದಯ ರತ್ನಕುಮಾರ್ ಪಾತ್ರರಾಗಿದ್ದಾರೆ.
ಮತ್ತೊಂದು ಹಿರಿಮೆ ಸಂಗತಿ ಎಂದರೆ, ಕೆ. ಉದಯ ರತ್ನಕುಮಾರ್ ಅವರು ಕಾರ್ಯನಿರ್ವಹಿಸುವ ಬೆಂಗಳೂರಿನ ಹೆಸರಘಟ್ಟ ರಸ್ತೆ, ಸಂಪಂಗಿರಾಮಯ್ಯ ಲೇಔಟ್ ನಲ್ಲಿರುವ ನಿಸರ್ಗ ವಿದ್ಯಾನಿಕೇತನ ಶಾಲೆಯು 2022-23ನೇ ಸಾಲಿನ “ ಇಂಡಿಯಾ ಮೆರಿಟ್ ಅವಾರ್ಡ್ “ ಗೆ (( INDIA SCHOOL MERIT AWARDS) ಪಾತ್ರವಾಗಿದೆ. ಇಂಡಿಯಾದ ಟಾಪ್ ಸ್ಟೇಟ್ ಬೋರ್ಡ್ ಗಳಲ್ಲಿ ನಿಸರ್ಗ ವಿದ್ಯಾನಿಕೇತನ ಶಾಲೆಯು ಅಗ್ರಸ್ಥಾನ ಪಡೆದಿದೆ.