ಬೆಂಗಳೂರು: ಆತ ವೈದ್ಯನಾಗಿ, ವೈದಕೀಯ ಸೇವೆಯನ್ನು ಸ್ವಚ್ಛಂದವಾಗಿ ಮಾಡಬೇಕಾಗಿದ್ದವನು ಮಾತ್ರ, ಕ್ಲಿನಿಕ್ ನಲ್ಲಿ ಮಾಡುತ್ತಿದ್ದದ್ದು ವಿಚಿತ್ರವೇ ಆಗಿತ್ತು. ಕ್ಲಿನಿಕ್ ಗೆ ಬರುತ್ತಿದ್ದಂತ ಮಹಿಳೆಯರ ಅಂಗಾಂಗವನ್ನು ಇಲ್ಲ ಸಲ್ಲದ ನೆಪದಲ್ಲಿ ಮುಟ್ಟುತ್ತಿದ್ದಂತ ಈ ವೈದ್ಯ, ಅದರಲ್ಲಿಯೇ ವಿಕೃತ ಸುಖಾನುಭವ ಪಡೆಯುತ್ತಿದ್ದನಂತೆ. ಇದಷ್ಟೇ ಅಲ್ಲದೇ ಮಹಿಳೆಯರ ವೀಡಿಯೋ ಕೂಡ ಚಿತ್ರೀಕರಿಸಿಕೊಳ್ಳುತ್ತಿದ್ದನಂತೆ. ಹೀಗೆ ವಿಚಿತ್ರವಾಗಿ ವಿಕೃತಿ ಮೆರೆಯುತ್ತಿದ್ದಂತ ವೈದ್ಯನಿಗೆ ಮುಂದೆ ಏನಾಯ್ತು ಅನ್ನೋ ಬಗ್ಗೆ ಮುಂದೆ ಓದಿ.
ಮೊದಲ ಬಾರಿಗೆ ‘ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ’ಗೆ ‘ರೋಬೊಟಿಕ್ ತಂತ್ರಜ್ಞಾನ’ ಪರಿಚಯಿಸಿದ ‘ಫೋರ್ಟಿಸ್ ಆಸ್ಪತ್ರೆ’
ಬೆಂಗಳೂರಿನ ಯಶವಂತಪುರದ ಬಳಿಯಲ್ಲಿನ ಮತ್ತೀಕೆರೆಯಲ್ಲಿ ತಮ್ಮ ನಿವಾಸದ ಬಳಿಯಲ್ಲಿಯೇ, ನ್ಯಾಚುರೋಪತಿ ಹಾಗೂ ಆಕ್ಯೂಪಂಚರ್ ಚಿಕಿತ್ಸೆಯ ಕ್ಲಿನಿಕ್ ಅನ್ನು ವೈದ್ಯ ವೆಂಕಟರಮಣ ಎಂಬುವರು ನಡೆಸುತ್ತಿದರು. ಇಲ್ಲಿಗೆ ಚಿಕಿತ್ಸೆಗೆಂದು ಬರುತ್ತಿದ್ದ ಮಹಿಳೆಯರಿಗೆ, ಚಿಕಿತ್ಸೆ ನೀಡುವ ನೆಪದಲ್ಲಿ ಬಟ್ಟೆಯನ್ನು ಬಿಚ್ಚುತ್ತಿದ್ದನಂತೆ.
ಇನ್ನೂ ಇದಷ್ಟೇ ಅಲ್ಲದೇ ಮಹಿಳೆಯರ ಅಂಗಾಂಗವನ್ನು ಇಲ್ಲ ಸಲ್ಲದ ನೆಪದಲ್ಲಿ ಮುಟ್ಟುತ್ತಿದ್ದಂತ ವೈದ್ಯ ವೆಂಕಟರಮಣ, ಅದರಲ್ಲಿಯೇ ವಿಕೃತ ಸುಖಾನುಭವ ಪಡೆಯುತ್ತಿದ್ದನಂತೆ.
ಬೆಂಗಳೂರು ತಂತ್ರಜ್ಞಾನ ಸಮಾವೇಶ: ಎಲೆಕ್ಟ್ರಾನಿಕ್ ವಲಯದಲ್ಲಿ 36 ಸಾವಿರ ಕೋಟಿ ರೂ.ಗೂ ಹೆಚ್ಚು ಹೂಡಿಕೆ
ವೆಂಕಟರಮಣ ತನ್ನ ಚಪಲ ಚೆನ್ನಿಗರಾಯನ ಆಟವನ್ನೆಲ್ಲಾ ಗೌಪ್ಯವಾಗಿ ವೀಡಿಯೋ ಚಿತ್ರೀಕರಣ ಮಾಡಿಕೊಳ್ಳುತ್ತಾ ಇದ್ದನಂತೆ. ಈ ಬಗ್ಗೆ ಅರಿತಂತ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದೇ ತಡ, ಈತನ ಕರಾಳ ಮುಖವೇ ಹೊರ ಬಿದ್ದಿದ್ದೆ.
ಈ ಸಂಬಂಧ ಸಿಸಿಬಿ ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿದ್ದಂತೇ, ವೆಂಕಟರಮಣ ಆಂಧ್ರ ಪ್ರದೇಶದ ಊರು ಗುತ್ತಿ ಬಳಿಗೆ ಪರಾರಿಯಾಗದ್ದನು. ಈ ಮಾಹಿತಿ ಆಧರಿಸಿ, ಇಂದು ಸಿಸಿಬಿ ಪೊಲೀಸರು ವಿಕೃತ ಕಾಮಿ ವೈದ್ಯ ವೆಂಕಟರಮಣನನ್ನು ಬಂಧಿಸಿದ್ದಾರೆ.
ಅಂದಹಾಗೇ ನ್ಯಾಚುರೋಪತಿ, ಆಕ್ಯೂಪಂಚರ್ ಕ್ಲಿನಿಕ್ ನಡೆಸೋ ಜೊತೆಗೆ, ಮಾರತಹಳ್ಳಿಯ ಬಳಿಯ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿಯೂ ವೆಂಕಟರಮಣ ಕೆಲಸ ಮಾಡುತ್ತಿದ್ದನಂತೆ. ಇನ್ನೂ ಅಚ್ಚರಿಯೆಂದರೇ ದ್ವಿತೀಯ ಪಿಯುಸಿ ಓದಿದ್ದಂತ ಈತ ಕ್ಲಿನಿಕ್ ತೆರೆದಿದ್ದು ಹೇಗೆ ಎನ್ನುವುದೇ ಆಗಿದೆ.