ಬೆಂಗಳೂರು: ರಾಜ್ಯದ ದೈಹಿಕ ಶಿಕ್ಷಣ, ವೃತ್ತಿ ಶಿಕ್ಷಣ, ಚಿತ್ರಕಲಾ ಶಿಕ್ಷಕರು ಹಾಗೂ ಸಂಗೀತ, ನೃತ್ಯ, ನಾಟಕ ವೃಂದದ ಶಿಕ್ಷಕರುಗಳಿಗೆ ಸಂಬಂಧ ಪಟ್ಟ ಎಲ್ಲಾ ಸೇವಾ, ಆಡಳಿತಾತ್ಮಕ ವಿಷಯಗಳ ನಿರ್ವಹಣೆಯನ್ನು, ಉರ್ದು ಮತ್ತು ಇತರೆ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯಕ್ಕೆ ಹಸ್ತಾಂತರಿಸಿ, ಶಿಕ್ಷಣ ಇಲಾಖೆ ಆದೇಶಿದೆ.
BIGG NEWS : ಯಾರೇ ರಾಜಕಾಲುವೆ ಒತ್ತುವರಿ ಮಾಡಿದ್ರೂ ತೆರವು ಮಾಡ್ತೇವೆ : ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ
ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ( School Education Department ) ಆಯುಕ್ತರಾದಂತ ಡಾ.ವಿಶಾಲ್ ಆರ್ ಅವರು ಆದೇಶ ಹೊರಡಿಸಿದ್ದು, ಈ ತಕ್ಷಣದಿಂದ ಜಾರಿಗೆ ಬರುವಂತೆ, ದೈಹಿಕ ಶಿಕ್ಷಣ, ವೃತ್ತಿ ಶಿಕ್ಷಣ, ಚಿತ್ರಕಲಾ ಶಿಕ್ಷಕರು ಹಾಗೂ ಸಂಗೀತ, ನೃತ್ಯ, ನಾಟಕ ವಿಷಯಗಳ ಮತ್ತು ವೃಂದದ ಶಿಕ್ಷಕರುಗಳಿಗೆ ಸಂಬಂಧ ಪಟ್ಟ ಎಲ್ಲಾ ಸೇವಾ, ಆಡಳಿತಾತ್ಮಕ ವಿಷಯಗಳ ನಿರ್ವಹಣೆಯನ್ನು ನಿರ್ದೇಶಕರು, ಉರ್ದು ಮತ್ತು ಇತರೆ ಅಲ್ಪ ಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯವರು ನಿರ್ವಹಿಸತಕ್ಕದ್ದು ಎಂದಿದ್ದಾರೆ.
‘ಐಟಿ-ಬಿಟಿ ಕಂಪನಿ’ಗಳ ವಿರುದ್ಧ ಗುಡುಗಿದ ‘ಸಚಿವ ಆರ್.ಅಶೋಕ್’ | Bangalore Rain
ಇನ್ನೂ ಜಂಟಿ ನಿರ್ದೇಶಕರು, ದೈಹಿಕ ಶಿಕ್ಷಣ ವಿಭಾಗದಲ್ಲಿ ನಿರ್ವಹಣೆಯಾಗುತ್ತಿರುವ ವಿಷಗಳು ಸಹ ಉರ್ದು ಮತ್ತು ಇತರೆ ಅಲ್ಪ ಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ ವ್ಯಾಪ್ತಿಗೆ ಕಾರ್ಯನಿರ್ವಹಕ ಸಹಿತವಾಗಿ ಹಸ್ತಾಂತರಿಸಿದೆ ಎಂದಿದ್ದಾರೆ.
BIGG NEWS : ಭಾರತದ ‘ಹಾಲು ಉತ್ಪಾದನೆ’ ಬೆಳವಣಿಗೆ ಜಾಗತಿಕ ಸರಾಸರಿಗಿಂತ ‘3 ಪಟ್ಟು’ ಹೆಚ್ಚಳ ; ಪ್ರಧಾನಿ ಮೋದಿ
ಈ ಹಿನ್ನಲೆಯಲ್ಲಿ ಉರ್ದು ಮತ್ತು ಇತರೆ ಅಲ್ಪ ಸಂಖ್ಯಾತ ಭಾಷಆ ಶಾಲೆಗಳ ನಿರ್ದೇಶನಾಲಯದ ನಿರ್ದೇಶಕರು, ಪ್ರೌಢ ಶಿಕ್ಷಣ ವಿಭಾಗದಿಂದ ವಿಷಯಕ್ಕೆ ಸಂಬಂಧ ಪಟ್ಟ ಕಡತಗಳನ್ನು ತಕ್ಷಣವೇ ಹಸ್ತಾಂತರಿಸುವಂತೆ ಸೂಚಿಸಿದ್ದಾರೆ.