ಬೆಂಗಳೂರು : ಪದ್ಮಶ್ರೀ ಪುರಸ್ಕೃತ ಹಾಗೂ ವೃಕ್ಷಮಾತೆ ಎಂದು ಹೆಸರುವಾಸಿಯಾಗಿದ್ದ ಸಾಲುಮರದ ತಿಮ್ಮಕ್ಕ (114) ನಿನ್ನೆ ನಿಧನರಾಗಿದ್ದಾರೆ. ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಮಧ್ಯಾಹ್ನ 12 ಗಂಟೆಗೆ ಅವರ ಅಂತ್ಯಕ್ರಿಯೆ ನೆರವೇರಲಿದೆ. ಸಾಲುಮರದ ತಿಮ್ಮಕ್ಕ ಅವರ ಅಗಲಿಕೆ ನನಗೆ ಬಹಳ ದುಃಖ ನೋವು ತರಿಸಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಸಂತಾಪ ಸೂಚಿಸಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಅವರು, ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಇಡೀ ನಾಡಿಗೆ ಆದರ್ಶ ಆಗಿದ್ದರು. ತಿಮ್ಮಕ್ಕ ಅವರ ಅಗಲಿಕೆ ನನಗೆ ಬಹಳ ದುಃಖ, ನೋವು ತರಿಸಿದೆ. ಕೇವಲ ಪರಿಸರ ಸಂರಕ್ಷಣೆ ಮಾತಿನಲ್ಲಿ ಅಲ್ಲ ಅವರು ಕೆಲಸ ಮಾಡಿ ತೋರಿಸಿದರು. ತಿಮ್ಮಕ್ಕನವರು ಇಡೀ ಜಗತ್ತಿಗೆ ಪರಿಸರ ಕ್ಷೇತ್ರಕ್ಕೆ ಆದರ್ಶ ಆಗಿದ್ದಾರೆ.
ಪರಿಸರ ನಾಶ ಆದರೆ ಜಗತ್ತೇ ನಾಶ ಆಗುತ್ತೆ ಅಂತ ಸಸಿ ನೆಟ್ಟಿದ್ದಾರೆ. ಸಾಲುಮರದ ತಿಮ್ಮಕ್ಕ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಅವರು ಸಾಲುಮರದ ತಿಮ್ಮಕ್ಕ ಅವರ ನಿಧನಕ್ಕೆ ಸಂತಾಪ ಸೂಚಿಸಿದರು.








