ಕೆಎನ್ಎನ್ ಡಿಜಿಟಲ್ ಡೆಸ್ಕ್: ಸೋಷಿಯಲ್ ಮೀಡಿಯಾ ( Social Media ) ಇಂದು ಕ್ಷಣಾರ್ಧದಲ್ಲಿ ವೀಡಿಯೋ, ಪೋಟೋಗಳನ್ನು ವೈರಲ್ ಮಾಡಿ ಬಿಡ್ತಾ ಇದೆ. ಹೀಗೆ ವೈರಲ್ ಆದಂತ ಅನೇಕವು ಕೆಲವು ನೈಜತೆಯಿಂದ ಕೂಡಿರದೇ ಇದ್ದರೇ, ಮತ್ತೆ ಕೆಲವು ಹಾಸ್ಯಭರಿತವಾಗಿಯೂ ವೈರಲ್ ಆಗಿ ಬಿಡುತ್ತವೆ. ಇದೀಗ ಹೀಗೊಂದು ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ( Viral Video ) ಆಗಿದೆ. ಜೊತೆಗೆ ಕೋಳಿ ಬಿಡ್ರೋ ಅಂತ ನೆಟ್ಟಿಗರು ವೀಡಿಯೋ ( Video ) ಒಬ್ಬರಿಂದ ಒಬ್ಬರು ಫಾರ್ವರ್ಡ್ ಮಾಡುತ್ತಿದ್ದಾರೆ. ಆ ಬಗ್ಗೆ ಮುಂದೆ ಓದಿ..
BREAKING NEWS: KSOU ನೂತನ ಕುಲಪತಿಯಾಗಿ ಪ್ರೊ.ಶರಣಪ್ಪ ವೈದ್ಯನಾಥ್ ಹಲ್ಲೆ ನೇಮಕ
ಕರ್ನಾಟಕ ( Karnataka ) ಒಂದು ರಾಜ್ಯವಾದರೂ ಪ್ರಾದೇಶಿಕವಾಗಿ ವಿಭಿನ್ನತೆಯನ್ನು ಭಾಷೆ, ಸಂಸ್ಕೃತಿ, ಸಂಪ್ರದಾಯಗಳಲ್ಲಿ ( Karnataka One State Many World ) ಹೊಂದಿದೆ. ಪ್ರದೇಶದಿಂದ ಪ್ರದೇಶಕ್ಕೆ ಭಾಷೆಯಲ್ಲಿ ವಿಭಿನ್ನತೆಯನ್ನು ಹೊಂದಿರುವಂತ ನಮ್ಮ ರಾಜ್ಯದಲ್ಲಿ, ನಿಮ್ಮಗಳ ಭಾಷೆಗಿಂತ ಮತ್ತೊಂದು ಭಾಷೆ ( Language ) ಹೊಸದೆನಿಸುತ್ತದೆ. ಹೀಗೆ ಪ್ರಾದೇಶಿಕ ಭಾಷೆಯೊಂದರಲ್ಲಿ ಕೊಳಿ ಬಿಡ್ರೋ ಅಂತ ವ್ಯಕ್ತಿಯೊಬ್ಬ ಬೈದಿರೋ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವಂತ ವೀಡಿಯೋದಲ್ಲಿನ ವ್ಯಕ್ತಿ ಯಾರು, ಯಾವ ಊರಿನವರು ಎನ್ನುವ ಮಾಹಿತಿ ಇಲ್ಲದೇ ಹೋದರು, ಕಳೆದು ಹೋಗಿರುವಂತ ಕೋಳಿಗಾಗಿ ತನ್ನದೇ ಆದಂತ ಪ್ರಾದೇಶಿಕ ಭಾಷೆಯಲ್ಲಿ ಬೈದಿರುವಂತ ಬೈಗುಳವನ್ನು ಕೇಳಿದಂತ ನೆಟ್ಟಿಗರು, ಕೊಳಿ ಬಿಡ್ರೋ ಅಂತ ವೀಡಿಯೋ ಶೇರ್ ಮಾಡಿ ನಗೆಗಡಲಿನಲ್ಲಿ ತೇಲುತ್ತಿದ್ದಾರೆ. ಆ ವೀಡಿಯೋ ನೀವು ಒಮ್ಮೆ ನೋಡಿ..
ನೀವು ನೋಡಿದಂತ ವೀಡಿಯೋದಲ್ಲಿ ಕೋಳಿ ಕಳೆದುಕೊಂಡಿರುವಂತ ವ್ಯಕ್ತಿ, ಎಷ್ಟು ದಿನ ಬೇಕು ನನ್ನ ಕೋಳಿ ಬಿಡೋದಕ್ಕೆ. ಅಯ್ಯೋ ನಿನ್ನ ಹೆಂಡ್ತಿನ. ನಿನ್ನ ಗಂಡ್ತಿನ. ಹಾಳು ಮನೆಯಾಗ, ನನ್ನ ಕೋಳಿ ಬಿಡ್ರೋ ನಿಮ್ಮ ಮನೆಯಾಳಾಗ ಸೇರಿದಂತೆ ವಿವಿಧ ರೀತಿಯಲ್ಲಿ ಬೈದಿದ್ದಾರೆ.
BIG BREAKING NEWS: ರಾಜ್ಯದ ನೂತನ ವಿವಿಗೆ ಕುಲಪತಿ ನೇಮಕಕ್ಕೆ ಶೋಧನ ಸಮಿತಿ ರಚಿಸಿ ಸರ್ಕಾರ ಆದೇಶ