ಬೆಂಗಳೂರು: ನಗರದ ಕೆ.ಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 19 ಜನರನ್ನು ಪೊಲೀಸರು ವಿಚಾರಣೆ ನಡೆಸಿದ್ದು, 14 ಜನರನ್ನು ಬಂಧಿಸಿದ್ದಾರೆ.
ನಗರದ 19 ಕಡೆ ದಾಳಿ ನಡೆಸಿ, ಜನರನ್ನು ವಿಚಾರಣೆ ನಡೆಸಿ 14 ಜನರನ್ನು ಬಂಧಿಸಿದ್ದಾರೆ ಪೊಲೀಸರು. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ೧೪ ಆರೋಪಿಗಳನ್ನ ವಶಕ್ಕೆ ಪಡೆಯಲಾಗಿತ್ತು. ಇಂದು 14ಜನರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆದಿದ್ದಾರೆ. ಇನ್ನು 14 ಜನರ ಮೆಡಿಕಲ್ ಟೆಸ್ಟ್ ಮಾಡಿಸಿದ್ದಾರೆ.
ಇನ್ನು ಎನ್ ಐಎ ಅಧಿಕಾರಿಗಳು ರಾಜ್ಯದ ಕೆಲವೆಡೆ ಗುರುವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದೆ. ಈ ವೇಳೆ ಮೋಸ್ಟ್ ವಾಂಟೆಡ್ ಶಂಕಿತ ಉಗ್ರ ಯಾಸಿರ್ ಅರಾಫತ್ ಅಲಿಯಾಸ್ ಯಾಸಿರ್ ಹಸ್ಸನ್ ಕೂಡ ಬಂಧಿಸಿದ್ದಾರೆ.