ಸಂಭಾಲ್(ಯುಪಿ): ಇನ್ನೇನು ತಾಳಿ ಕಟ್ತೀನಿ ಅನ್ನೋ ಖುಷಿಲಿದ್ದ ವರನಿಗೆ ಆಘಾತ ಎದುರಾದ ಘಟನೆ ಸಂಭಾಲ್ನಲ್ಲಿ ನಡೆದಿದೆ.
ಡಿಸೆಂಬರ್ 7ರಂದು ಅಸ್ಮೋಲಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯಲ್ಲಿ, ಐಂಚೋಡ ಕಾಂಬೋಹ್ ಪೊಲೀಸ್ ಠಾಣೆ ವ್ಯಾಪ್ತಿಯ ಯುವಕರ ಮದುವೆಯ ಮೆರವಣಿಗೆ ಬುಧವಾರ ಮಧ್ಯಾಹ್ನ ಬಂದಿತ್ತು. ಮೆರವಣಿಗೆಯನ್ನು ಸ್ವಾಗತಿಸಲು ಸಿದ್ಧತೆಗಳು ನಡೆದಿವೆ. ಇದೇ ವೇಳೆ ಮಹಿಳೆಯೊಬ್ಬರು ವರನ ಮೂಗು ಚಪ್ಪಟೆಯಾಗಿದೆ ಎಂದು ವಧುವಿಗೆ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ವಧು ಈ ಯುವಕನನ್ನು ಮದುವೆಯಾಗುವುದಿಲ್ಲ ಎಂದು ಕುಟುಂಬಸ್ಥರಿಗೆ ಹೇಳಿದ್ದಾಳೆ.
ಸ್ವಲ್ಪ ಸಮಯದಲ್ಲೇ ವರನ ಮೂಗು ಚೆನ್ನಾಗಿಲ್ಲ ಎಂಬುದು ವಧುವಿನ ಮನೆಯಲ್ಲಿದ್ದ ಜನರಲ್ಲಿ ಚರ್ಚೆಗೆ ಗ್ರಾಸವಾಯಿತು. ಇದರಿಂದ ಕೋಪಗೊಂಡ ವಧು ಈ ಯುವಕನನ್ನು ಮದುವೆಯಾಗುವುದಿಲ್ಲ ಎಂದು ಕುಟುಂಬಸ್ಥರಿಗೆ ಹೇಳಿದ್ದಾಳೆ. ಸಂಬಂಧಿಕರು ಮನವೊಲಿಸಲು ಪ್ರಯತ್ನಿಸಿದರು. ಆದರೆ, ಯಾವುದೇ ಪ್ರಯೋಜನವಾಗಿಲ್ಲ.
ನಂತ್ರ, ವರನ ಸಂಬಂಧಿಕರು ಪಂಚಾಯ್ತಿ ಮಾಡಿದರು. ಸುಮಾರು ಮೂರು ಗಂಟೆಗಳ ಕಾಲ ಗ್ರಾಮದ ಜವಾಬ್ದಾರಿಯುತರು ವಧುವಿನ ಮನವೊಲಿಸಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ. ಹೀಗಾಗಿ, ಊಟವನ್ನೂ ಮಾಡದೇ, ವಧು ಇಲ್ಲದೇ ವರನ ಮೆರವಣಿಗೆ ವಾಪಸ್ ಮನೆಗೆ ಮರಳಿದೆ.
BIG NEWS : ಒಬ್ಬ ಅಭ್ಯರ್ಥಿಯನ್ನು ನೇಮಿಸಿಕೊಳ್ಳಲು ಕಂಪನಿಯು 32 ದಿನ ತೆಗೆದುಕೊಳ್ಳುತ್ತದೆ: ಅಧ್ಯಯನ
BIGG NEWS : ರಾಜ್ಯ ಸರಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ : ನೋಂದಣಿಗೆ ಡಿ. 20 ಕೊನೆಯ ದಿನ
BIG NEWS : ಒಬ್ಬ ಅಭ್ಯರ್ಥಿಯನ್ನು ನೇಮಿಸಿಕೊಳ್ಳಲು ಕಂಪನಿಯು 32 ದಿನ ತೆಗೆದುಕೊಳ್ಳುತ್ತದೆ: ಅಧ್ಯಯನ