ಬೆಂಗಳೂರು: ನಾಡಿನೆಲ್ಲೆಡೆ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಜೋರಾಗಿದೆ. ಎರಡು ವರ್ಷಗಳ ಬಳಿಕ ಹಬ್ಬಕ್ಕೆ ಅದ್ಧೂರಿಯಾಗಿ ಆಚರಣೆ ಮಾಡಲು ಜನರು ತಯಾರಿಯಾಗಿದ್ದಾರೆ. ಆದರೆ ಈ ಬಾರಿ ದೀಪಾವಳಿಯಂದೇ ಸೂರ್ಯಗ್ರಹಣ ಸಂಭವಿಸಲಿದೆ.
BIGG NEWS: ದುಷ್ಕರ್ಮಿಗಳಿಂದ ನಮಗೆ ಭಯ ಹುಟ್ಟಿಸಿದೆ; ನಮಗೆ ಸೂಕ್ತ ರಕ್ಷಣೆ ಬೇಕು: ಸಹೋದರಿ ಅಶ್ವಿನಿ ಆಗ್ರಹ
ಬರೋಬ್ಬರಿ 27 ವರ್ಷಗಳ ಬಳಿಕ ದೀಪಾವಳಿಯ ದಿನ ಗ್ರಹಣ ಬಂದಿದ್ರೆ, ಇತ್ತ 3 ವರ್ಷಗಳ ಬಳಿಕ ಕೇತುಗ್ರಸ್ತ ಗ್ರಹಣ ಇಂದು ಸಂಭವಿಸಲಿದೆ. ಇನ್ನು 15 ದಿನಗಳ ಅಂತರದಲ್ಲೇ ಚಂದ್ರಗ್ರಹಣ ಕೂಡ ಇರೋದ್ರಿಂದ ಕುತೂಹಲದ ಜೊತೆಗೆ ಜನಸಾಮಾನ್ಯರಿಗೆ ಆತಂಕವೂ ಎದುರಾಗಿದೆ. ಸೂರ್ಯ ಗ್ರಹಣ ಹಿನ್ನೆಲೆ ಬೆಂಗಳೂರಿನಲ್ಲಿ ಬಹುತೇಕ ದೇವಾಲಯಗಳು ಬಂದ್ ಆಗಲಿವೆ. ಇಂದು ಬೆಳಗ್ಗೆ 6 ರಿಂದ ಬೆಳಗ್ಗೆ 8ರವರೆಗೆ ಮಾತ್ರ ದೇವಸ್ಥಾನ ಓಪನ್ ಆಗಲಿದ್ದು ಪುನಃ ಗ್ರಹಣ ಮುಗಿದ ಬಳಿಕ ಸಂಜೆ ದೇಗುಲದ ಬಾಗಿಲು ತೆರೆದು ಪೂಜೆ ಸಲ್ಲಿಸಲಾಗುತ್ತದೆ.
BIGG NEWS: ದುಷ್ಕರ್ಮಿಗಳಿಂದ ನಮಗೆ ಭಯ ಹುಟ್ಟಿಸಿದೆ; ನಮಗೆ ಸೂಕ್ತ ರಕ್ಷಣೆ ಬೇಕು: ಸಹೋದರಿ ಅಶ್ವಿನಿ ಆಗ್ರಹ
ಬೆಂಗಳೂರಿನ ಬಸವನಗುಡಿಯ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ದರ್ಶನಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ಇಂದು ಬೆಳಗ್ಗೆ 8ರಿಂದ ದೇಗುಲ ಬಂದ್ ಆಗಲಿದೆ. ಇಂದು ಕೋಲಾರದ ಮುಜರಾಯಿ ದೇವಾಲಯಗಳಲ್ಲಿ ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ಜಿಲ್ಲೆಯ ಪ್ರಮುಖ ದೇವಾಲಯಗಳಾದ ಕುರುಡುಮಲೆ ವಿನಾಯಕ, ಕೋಲಾರಮ್ಮ, ಬಂಗಾರು ತಿರುಪತಿ, ಚಿಕ್ಕತಿರುಪತಿ, ಸೋಮೇಶ್ವರ, ಹೊಲ್ಲಂಬಳ್ಳಿ ಚೌಡೇಶ್ವರಿ ದೇವಾಲಯ ಸೇರಿದಂತೆ ಎಲ್ಲಾ ಮುಜರಾಯಿ ದೇವಾಲಯಕ್ಕೆ ಮಧ್ಯಾಹ್ನ 12 ಗಂಟೆಯಿಂದ ಪ್ರವೇಶ ನಿರ್ಬಂಧಿಸಲಾಗಿದೆ. ಗ್ರಹಣ ಮೋಕ್ಷ ಕಾಲದ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತೆ ಎಂದು ತಹಶೀಲ್ದಾರ್ ನಾಗವೇಣಿ ಮಾಹಿತಿ ನೀಡಿದ್ದಾರೆ.
BIGG NEWS: ದುಷ್ಕರ್ಮಿಗಳಿಂದ ನಮಗೆ ಭಯ ಹುಟ್ಟಿಸಿದೆ; ನಮಗೆ ಸೂಕ್ತ ರಕ್ಷಣೆ ಬೇಕು: ಸಹೋದರಿ ಅಶ್ವಿನಿ ಆಗ್ರಹ
ಮಂಡ್ಯದಲ್ಲಿ ನಿಮಿಷಾಂಬ ದೇವಸ್ಥಾನ, ರಂಗನಾಥ ಸ್ವಾಮಿ ದೇಗುಲ ಬಂದ್ ಆಗಲಿದೆ. ಮಧ್ಯಾಹ್ನ 12ರಿಂದ ಸಂಜೆ 7ರವರೆಗೆ ನಿಮಿಷಾಂಬ ದೇಗುಲ ಬಂದ್ ಆಗಿರಲಿದ್ದು ಬೆಳಗ್ಗೆ 11ರಿಂದ ಸಂಜೆ 7.30ರವರೆಗೆ ರಂಗನಾಥಸ್ವಾಮಿ ದೇಗುಲ ಬಂದ್ ಆಗಿರಲಿದೆ. ಸೂರ್ಯ ಗ್ರಹಣ ಮುಗಿದ ಬಳಿಕ ಭಕ್ತರಿಗೆ ದೇಗುಲ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತೆ.
BIGG NEWS: ದುಷ್ಕರ್ಮಿಗಳಿಂದ ನಮಗೆ ಭಯ ಹುಟ್ಟಿಸಿದೆ; ನಮಗೆ ಸೂಕ್ತ ರಕ್ಷಣೆ ಬೇಕು: ಸಹೋದರಿ ಅಶ್ವಿನಿ ಆಗ್ರಹ
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಬೆಳಗ್ಗೆ ದರ್ಶನಕ್ಕೆ ಅವಕಾಶವಿದ್ದು ಮಧ್ಯಾಹ್ನ 1ರ ಬಳಿಕ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ಬಂದ್ ಆಗಲಿದೆ. ಸೂರ್ಯ ಗ್ರಹಣದ ಸಮಯದಲ್ಲಿ ದೇಗುಲದಲ್ಲಿ ವಿಶೇಷ ಪೂಜೆ ನಡೆಯಲಿದೆ.
ಸೂರ್ಯ ಗ್ರಹಣ ಹಿನ್ನಲೆ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ಇಂದು ಮತ್ತು ಬುಧವಾರ ಮಾತ್ರ ದರ್ಶನ ವ್ಯವಸ್ಥೆ ಮಾಡಲಾಗಿದೆ. ಗುರುವಾರ ಮಧ್ಯಾಹ್ನ 12 ಗಂಟೆಗೆ ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತೆ.