ಬೆಂಗಳೂರು: ನಡು ರಸ್ತೆಯಲ್ಲೇ ಲಾಂಗ್ ಹಿಡಿದು ಪಂಡಾಟ ಮೆರೆದಿದ್ದಂತ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿರುವಂತ ಘಟನೆ ಬೆಂಗಳೂರಲ್ಲಿ ನಡೆದಿದೆ.
ಬೆಂಗಳೂರಿನ ಪುಲಕೇಶಿನಗರ ಠಾಣೆಯ ವ್ಯಾಪ್ತಿಯಲ್ಲಿ ಗೂಡ್ಸ್ ವಾಹನ ಚಾಲಕನ ಮೇಲೆ ಲಾಂಗ್ ಬೀಸಿ ಗಾಜನ್ನು ಒಡದಿದ್ದಂತ ಘಟನೆ ನಡೆದಿತ್ತು. ಆಗಸ್ಟ್.29ರಂದು ಲಿಂಗರಾಜಪುರ ಪ್ಲೈಓವರ್ ಕೆಳಗೆ ಈ ಘಟನೆ ನಡೆದಿತ್ತು.
ಸೈಡ್ ಬಿಡಲಿಲ್ಲ ಎಂಬ ಆರೋಪದಿಂದ ಬೈಕ್ ಸವಾರ ಶರತ್ ನಿಂದ ಕಿರಿಕ್ ತೆಗೆದು ಈ ಕೃತ್ಯ ಎಸಗಲಾಗಿತ್ತು. ಈ ವೇಳೆ ಗಲಾಟೆ ಬಿಡಿಸಲು ಹೋದವರ ಜೊತೆಯೂ ಕಿರಿಕ್ ಮಾಡಿದ್ದನು. ಅಲ್ಲದೇ ಕೈಯಲ್ಲಿ ಲಾಂಗ್ ಬೀಸುತ್ತಾ ಸಾರ್ವಜನಿಕ ಸ್ಥಳದಲ್ಲಿ ಭಯ ಹುಟ್ಟಿಸಿದ್ದನು.
ಎಪಿ 03, ಸಿಎ 3739 ಸಂಖ್ಯೆಯ ಬೈಕ್ ನ ಹಿಂಬದಿ ಸವಾರ ಶರತ್ ನಿಂದ ಈ ಕೃತ್ಯ ಎಸಗಲಾಗಿತ್ತು. ಈ ಹಿನ್ನಲೆಯಲ್ಲಿ ನಡು ರಸ್ತೆಯಲ್ಲೇ ಲಾಂಗ್ ಹಿಡಿದು ಹುಚ್ಚಾಟ ಮೆರೆದಂತ ಶರತ್(33) ಎಂಬಾತನನ್ನು ಪುಲಕೇಶಿನಗರ ಠಾಣೆಯ ಪೊಲೀಸರು ಕೊನೆಗೂ ಬಂದಿಸಿದ್ದಾರೆ.
ಇನ್ಮುಂದೆ ರಾಜ್ಯದಲ್ಲಿನ ವೈದ್ಯಕೀಯ ಸಂಸ್ಥೆ, ವೈದ್ಯರು ಹೀಗೆ ಮಾಡಿದ್ರೆ 1 ಲಕ್ಷದವರೆಗೆ ದಂಡ ಫಿಕ್ಸ್
ಸಾಗರ ತಾಲ್ಲೂಕನ್ನು ನೂತನ ಜಿಲ್ಲೆಯಾಗಿ ಮಾಡಿ: ಸಿಎಂ ಸಿದ್ಧರಾಮಯ್ಯಗೆ ಶಾಸಕ ಗೋಪಾಲಕೃಷ್ಣ ಬೇಳೂರು ಪತ್ರ