Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ವಿಶ್ವಸಂಸ್ಥೆಯ ಆಘಾತಕಾರಿ ವರದಿ: 2030 ರ ವೇಳೆಗೆ ಬರೋಬ್ಬರಿ 130 ಕೋಟಿ ಜನರ ಕುಡಿಯುವ ನೀರಿಗೆ ಕಂಟಕ ತರಲಿದೆ ‘AI’ ತಂತ್ರಜ್ಞಾನ!

​ಪ್ರಯಾಣಿಕರೇ ಎಚ್ಚರ! ಹೋಟೆಲ್ ರೂಂಗಳಲ್ಲಿ ಅಡಗಿರುವ ‘ಹಿಡನ್ ಕ್ಯಾಮೆರಾ’ ಪತ್ತೆಹಚ್ಚುವುದು ಹೇಗೆ? ನಿಮ್ಮ ಪ್ರೈವೆಸಿ ರಕ್ಷಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

ವಾಹನ ಅಪಘಾತ ಪರಿಹಾರ ವಿಲೇವಾರಿಗೆ ವಿಪರೀತ ವಿಳಂಬ: ಸುಪ್ರೀಂ ಕೋರ್ಟ್ ಕಳವಳ, ಶೀಘ್ರ ಇತ್ಯರ್ಥಕ್ಕೆ ಹೊಸ ಮಾರ್ಗಸೂಚಿ ಪ್ರಕಟ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇನ್ಮುಂದೆ ರಾಜ್ಯದಲ್ಲಿನ ವೈದ್ಯಕೀಯ ಸಂಸ್ಥೆ, ವೈದ್ಯರು ಹೀಗೆ ಮಾಡಿದ್ರೆ 1 ಲಕ್ಷದವರೆಗೆ ದಂಡ ಫಿಕ್ಸ್
KARNATAKA

ಇನ್ಮುಂದೆ ರಾಜ್ಯದಲ್ಲಿನ ವೈದ್ಯಕೀಯ ಸಂಸ್ಥೆ, ವೈದ್ಯರು ಹೀಗೆ ಮಾಡಿದ್ರೆ 1 ಲಕ್ಷದವರೆಗೆ ದಂಡ ಫಿಕ್ಸ್

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ರಾಜ್ಯ ಸರ್ಕಾರದಿಂದ ಮಹತ್ವದ ಹೆಜ್ಜೆ ಎನ್ನುವಂತೆ ಇನ್ಮುಂದೆ ರಸ್ತೆ ಅಪಘಾತ ಸೇರಿದಂತೆ ಇತರೆ ಸಂದರ್ಭಗಳಲ್ಲಿ ವೈದ್ಯಕೀಯ ಸಂಸ್ಥೆ, ವೈದ್ಯರು ಮುಂಗಡ ಹಣ ಪಾವತಿ ಬೇಡಿಕೆ ನೀಡದೇ ಸಂತ್ರಸ್ತರಿಗೆ ತುರ್ತು ಚಿಕಿತ್ಸೆ ನೀಡುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ಒಂದು ವೇಳೆ ಹಣಕ್ಕೆ ಬೇಡಿಕೆ ಇಟ್ಟರೇ 1 ಲಕ್ಷದವರೆಗೆ ದಂಡವನ್ನು ವಿಧಿಸುವುದಾಗಿ ಎಚ್ಚರಿಸಿದೆ.

ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ, ಯಾವುದೇ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು. ಸುಟ್ಟ ಗಾಯ, ವಿಷಪ್ರಾಶನ, ಹಲ್ಲೆಯಿಂದಾದ ಗಾಯ ಸೇರಿ ಇತರೆ ತುರ್ತು ಸಂದರ್ಭದಲ್ಲಿಯೂ ವೈದ್ಯಕೀಯ ಸಂಸ್ಥೆ ಅಥವಾ ವೈದ್ಯರು ಮುಂಗಡ ಹಣ ಪಾವತಿಗೆ ಬೇಡಿಕೆ ಇಡದೆ, ಸಂತ್ರಸ್ತರಿಗೆ ತುರ್ತು ಚಿಕಿತ್ಸೆ ನೀಡಬೇಕು. ಇದನ್ನು ಉಲ್ಲಂಘಿಸಿದಲ್ಲಿ ₹1 ಲಕ್ಷದವರೆಗೆ ದಂಡ ವಿಧಿಸಲಾಗುವುದು ಎಂದು ಆರೋಗ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ.

ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ, ಯಾವುದೇ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು. ಸುಟ್ಟ ಗಾಯ, ವಿಷಪ್ರಾಶನ, ಹಲ್ಲೆಯಿಂದಾದ ಗಾಯ ಸೇರಿ ಇತರೆ ತುರ್ತು ಸಂದರ್ಭದಲ್ಲಿಯೂ ವೈದ್ಯಕೀಯ ಸಂಸ್ಥೆ ಅಥವಾ ವೈದ್ಯರು ಮುಂಗಡ ಹಣ ಪಾವತಿಗೆ ಬೇಡಿಕೆ ಇಡದೆ, ಸಂತ್ರಸ್ತರಿಗೆ ತುರ್ತು ಚಿಕಿತ್ಸೆ ನೀಡಬೇಕು. ಇದನ್ನು ಉಲ್ಲಂಘಿಸಿದಲ್ಲಿ ₹1… pic.twitter.com/SueFIkfMGC

— DIPR Karnataka (@KarnatakaVarthe) September 6, 2025

ಗಾಯಗೊಂಡ ವ್ಯಕ್ತಿಯ ಆರೋಗ್ಯ ಸ್ಥಿತಿ ಸುಧಾರಿಸಲು ಪ್ರತಿಯೊಂದು ಆಸ್ಪತ್ರೆಯೂ ತಕ್ಷಣದ ವೈದ್ಯಕೀಯ ತಪಾಸಣೆ ಸೇವೆ ಮತ್ತು ಪ್ರಾಥಮಿಕ ಚಿಕಿತ್ಸೆಯನ್ನು ಉಚಿತವಾಗಿ ಹಾಗೂ ಅಗತ್ಯವೆಂದು ಪರಿಗಣಿಸಿ ಒದಗಿಸಬೇಕು. ಸೌಲಭ್ಯಗಳ ಕೊರತೆಯಿರುವ ಆಸ್ಪತ್ರೆಗಳು, ರೋಗಿಯನ್ನು ಇತರೆ ಆಸ್ಪತ್ರೆಗಳಿಗೆ ವರ್ಗಾವಣೆ ಮಾಡುವ ಮೊದಲು ಪ್ರಥಮ ಚಿಕಿತ್ಸೆ ನೀಡಬೇಕು. ವೈದ್ಯಕೀಯ ವಿವರಗಳೊಂದಿಗೆ ಸ್ಥಳಾಂತರಿಸಬೇಕು ಎಂದು ಆದೇಶಿಸಿದೆ.

ರಸ್ತೆ ಅಪಘಾತದ ಸಂತ್ರಸ್ತರು, ಅಪಘಾತದ ದಿನಾಂಕದಿಂದ ಏಳು ದಿನಗಳವರೆಗೆ ₹1.50 ಲಕ್ಷದವರೆಗೆ ಯಾವುದೇ ಗೊತ್ತುಪಡಿಸಿದ ಆಸ್ಪತ್ರೆಯಲ್ಲಿ ನಗದು ರಹಿತ ಚಿಕಿತ್ಸೆಗೆ ಅರ್ಹರಾಗಿರುತ್ತಾರೆ. ರಾಜ್ಯ ರಸ್ತೆ ಸುರಕ್ಷತಾ ಮಂಡಳಿಯು ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸಲಿದ್ದು, ಮೋಟಾರು ವಾಹನ ಅಪಘಾತ ನಿಧಿಯಿಂದ ಮರುಪಾವತಿ ಮಾಡಲಾಗುತ್ತದೆ ಎಂದು ತಿಳಿಸಿದೆ.

ಗುತ್ತಿಗೆ ನವೀಕರಣಕ್ಕೆ ಲಂಚಕ್ಕೆ ಬೇಡಿಕೆಯಿಟ್ಟ ಜವಗೊಂಡನಹಳ್ಳಿ ಆಸ್ಪತ್ರೆ ‘ವೈದ್ಯ ಡಾ.ಶ್ರೀಕೃಷ್ಣ’ ಅಮಾನತು

ಸಾಗರ ತಾಲ್ಲೂಕನ್ನು ನೂತನ ಜಿಲ್ಲೆಯಾಗಿ ಮಾಡಿ: ಸಿಎಂ ಸಿದ್ಧರಾಮಯ್ಯಗೆ ಶಾಸಕ ಗೋಪಾಲಕೃಷ್ಣ ಬೇಳೂರು ಪತ್ರ

Share. Facebook Twitter LinkedIn WhatsApp Email

Related Posts

ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಸಿಎಂ ಡಿ.ಕೆ ಶಿವಕುಮಾರ್; ಕರ್ನಾಟಕದ ಪೊಲೀಸ್ ಸಾಮರ್ಥ್ಯ ಸುಧಾರಣೆ ನೆರವಿಗೆ ಮನವಿ

3 Mins Read

ಮ್ಯಾಗಿ, ಕೆಎಫ್‌ಸಿ ಉತ್ಪನ್ನಗಳಲ್ಲಿ ಗುಣಮಟ್ಟದ ಕೊರತೆ ಆರೋಪ: ನೆಸ್ಲೆ ಇಂಡಿಯಾ ಸೇರಿದಂತೆ ಪ್ರಮುಖ ಸಂಸ್ಥೆಗಳಿಗೆ FSSAI ನೋಟಿಸ್

3 Mins Read

ಇಂದಿನಿಂದಲೇ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಆರಂಭ: KSRTC ಮಾಹಿತಿ

2 Mins Read
Recent News

​ವಿಶ್ವಸಂಸ್ಥೆಯ ಆಘಾತಕಾರಿ ವರದಿ: 2030 ರ ವೇಳೆಗೆ ಬರೋಬ್ಬರಿ 130 ಕೋಟಿ ಜನರ ಕುಡಿಯುವ ನೀರಿಗೆ ಕಂಟಕ ತರಲಿದೆ ‘AI’ ತಂತ್ರಜ್ಞಾನ!

​ಪ್ರಯಾಣಿಕರೇ ಎಚ್ಚರ! ಹೋಟೆಲ್ ರೂಂಗಳಲ್ಲಿ ಅಡಗಿರುವ ‘ಹಿಡನ್ ಕ್ಯಾಮೆರಾ’ ಪತ್ತೆಹಚ್ಚುವುದು ಹೇಗೆ? ನಿಮ್ಮ ಪ್ರೈವೆಸಿ ರಕ್ಷಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

ವಾಹನ ಅಪಘಾತ ಪರಿಹಾರ ವಿಲೇವಾರಿಗೆ ವಿಪರೀತ ವಿಳಂಬ: ಸುಪ್ರೀಂ ಕೋರ್ಟ್ ಕಳವಳ, ಶೀಘ್ರ ಇತ್ಯರ್ಥಕ್ಕೆ ಹೊಸ ಮಾರ್ಗಸೂಚಿ ಪ್ರಕಟ

BREAKING: ರೋಹಿಣಿ ಸಿಂಧೂರಿ – ಡಿ. ರೂಪಾ ನಡುವಿನ ಜಗಳಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್; ಸಂಧಾನಕ್ಕೆ ಜಡ್ಜ್ ನೇಮಕ

State News
KARNATAKA

ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಸಿಎಂ ಡಿ.ಕೆ ಶಿವಕುಮಾರ್; ಕರ್ನಾಟಕದ ಪೊಲೀಸ್ ಸಾಮರ್ಥ್ಯ ಸುಧಾರಣೆ ನೆರವಿಗೆ ಮನವಿ

By ವಸಂತ ಬಿ ಈಶ್ವರಗೆರೆ KARNATAKA 3 Mins Read

ನವದೆಹಲಿ : ಎರಡು ಹೆಚ್ಚುವರಿ ಇಂಡಿಯಾ ರಿಸರ್ವ್ ಬೆಟಾಲಿಯನ್ಸ್ (IRBs) ಸೃಷ್ಟಿ, ಪೊಲೀಸ್ ಇಲಾಖೆ ಚಟುವಟಿಕೆಗಳಿಗೆ ಸಿಎಸ್ಆರ್ ನಿಧಿ ಬಳಕೆ,…

ಮ್ಯಾಗಿ, ಕೆಎಫ್‌ಸಿ ಉತ್ಪನ್ನಗಳಲ್ಲಿ ಗುಣಮಟ್ಟದ ಕೊರತೆ ಆರೋಪ: ನೆಸ್ಲೆ ಇಂಡಿಯಾ ಸೇರಿದಂತೆ ಪ್ರಮುಖ ಸಂಸ್ಥೆಗಳಿಗೆ FSSAI ನೋಟಿಸ್

ಇಂದಿನಿಂದಲೇ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಆರಂಭ: KSRTC ಮಾಹಿತಿ

BIG NEWS: ರಾಜ್ಯದ ಗ್ರಾಮ ಪಂಚಾಯ್ತಿಯ ಎಲ್ಲ ಸರ್ಕಾರಿ ಆಸ್ತಿ ‘ಜಿಯೋಟ್ಯಾಗ್’ಗೆ ಸಚಿವ ಈಶ್ವರ ಖಂಡ್ರೆ ಸೂಚನೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.