ನವದೆಹಲಿ: ಐಎನ್ಎಸ್ ವಿಕ್ರಾಂತ್ ನೌಕೆಯ ಬಗ್ಗೆ ಮಾಹಿತಿ ಪಡೆಯಲು ಯತ್ನಿಸಿದಂತ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಪೊಲೀಸರು ತೀವ್ರ ವಿಚಾರಣೆ ಒಳಪಡಿಸಿದ್ದಾರೆ.
ಕೇರಳದ ಕೊಚ್ಚಿಯಲ್ಲಿರುವ ನೌಕಾ ಪ್ರಧಾನ ಕಚೇರಿಗೆ ಕರೆ ಮಾಡಿದ್ದಂತ ವ್ಯಕ್ತಿಯೊಬ್ಬ ಐಎನ್ಎಸ್ ವಿಕ್ರಾಂತ್ ನೌಕಾ ನೆಲೆ ಎಲ್ಲಿ ಬರುತ್ತೆ ಎಂಬುದಾಗಿ ಮಾಹಿತಿ ಕೇಳಿದ್ದನು. ಈ ಹಿನ್ನಲೆಯಲ್ಲಿ ಕರೆ ಮಾಡಿದ್ದಂತ ಕೇರಳ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೇರಳದಲ್ಲಿ ವ್ಯಕ್ತಿಯನ್ನು ಕೇರಳ ಪೊಲೀಸರು ಬಂಧಿಸಿದ್ದು, ಬಂಧಿತ ವ್ಯಕ್ತಿಯನ್ನು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಈ ಮೂಲಕ ನೌಕಾ ಪಡೆಯ ಮಾಹಿತಿ ತಿಳಿಯೋದಕ್ಕೆ ಯತ್ನಿಸಿದಂತ ವ್ಯಕ್ತಿಗೆ ಬಿಸಿ ಮುಟ್ಟಿಸಿದ್ದಾರೆ.