Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ವಿದ್ಯಾರ್ಥಿಗಳ ಆತ್ಮಹತ್ಯೆಗಳು ಸಾಂಸ್ಥಿಕ ವೈಫಲ್ಯದ ಸಂಕೇತ: ಸುಪ್ರೀಂ ಕೋರ್ಟ್ ಸಮಿತಿಯ ಗಂಭೀರ ಅಭಿಪ್ರಾಯ!

SHOCKING : ಮನೆಯ ಮೇಲಿನ ನೀರಿನ ಟ್ಯಾಂಕ್‌ ನಲ್ಲಿ 27 ಹಾವಿನ ಮರಿಗಳು ಪತ್ತೆ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ : ಬಸ್ ಪ್ರಯಾಣಕ್ಕಾಗಿ ಶೀಘ್ರವೇ ಉಚಿತ `ಶಕ್ತಿ ಸ್ಮಾರ್ಟ್ ಕಾರ್ಡ್’ ವಿತರಣೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಆರ್ ಸಿಬಿಗೆ ‘49’ರ ಟ್ರೋಲ್ ಟ್ರೋಲ್ ಮಾಡಿದ್ದೇ ಕೊನೆ : ಅಂದು ಬಿದ್ದ ಪಂಜಾಬ್, ಇಂದು ಎದ್ದಿಲ್ಲ!
SPORTS

ಆರ್ ಸಿಬಿಗೆ ‘49’ರ ಟ್ರೋಲ್ ಟ್ರೋಲ್ ಮಾಡಿದ್ದೇ ಕೊನೆ : ಅಂದು ಬಿದ್ದ ಪಂಜಾಬ್, ಇಂದು ಎದ್ದಿಲ್ಲ!

By kannadanewsnow57

ಬೆಂಗಳೂರು: ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಮಹಾಸಮರವು ಲೀಗ್ ಹಂತದ ಅಂತ್ಯಕ್ಕೆ ಬಂದು ತಲುಪಿದೆ. ಟಾಪ್-4 ಸ್ಥಾನ ಗಿಟ್ಟಿಸಿಕೊಂಡು ಯಾವ ತಂಡಗಳು ಪ್ಲೇಆಫ್ ಪ್ರವೇಶಿಸಲಿವೆ ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ, ಲೀಗ್ನ ಮೊದಲಾರ್ಧದಲ್ಲಿ ಅಜೇಯರಾಗಿ ಮೆರೆದಿದ್ದ ಪಂಜಾಬ್ ಕಿಂಗ್ಸ್ (PBKS) ತಂಡದ ಸದ್ಯದ ಪರಿಸ್ಥಿತಿ ಮಾತ್ರ ‘ನಗಬೇಕೋ ಅಥವಾ ಅಳಬೇಕೋ’ ಎನ್ನುವಂತಾಗಿದೆ.

ಸುಮ್ಮನೆ ಕೂರದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಕೆಣಕಿದ ಪಂಜಾಬ್ ಕಿಂಗ್ಸ್, ಆ ಬಳಿಕ ಒಂದೇ ಒಂದು ಪಂದ್ಯವನ್ನೂ ಗೆಲ್ಲಲಾಗದೆ ಮಕಾಡೆ ಮಲಗಿದೆ!

ಅಜೇಯ ಹಾದಿಯಲ್ಲಿತ್ತು ಪಂಜಾಬ್ ಕಿಂಗ್ಸ್!

ಟೂರ್ನಿಯ ಮೊದಲಾರ್ಧದಲ್ಲಿ ಪಂಜಾಬ್ ಕಿಂಗ್ಸ್ ಅಕ್ಷರಶಃ ಅಬ್ಬರಿಸಿತ್ತು. ಆಡಿದ ಮೊದಲ 7 ಪಂದ್ಯಗಳಲ್ಲಿ ತಂಡ ಒಂದೂ ಸೋಲನ್ನು ಕಂಡಿರಲಿಲ್ಲ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ 1 ಅಂಕ ಹಾಗೂ ಉಳಿದ 6 ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿ, ಒಟ್ಟು 13 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಸಿಂಹಾಸನ ಏರಿ ಕುಳಿತಿತ್ತು. “ಇನ್ನೊಂದು ಎರಡು ಪಂದ್ಯ ಗೆದ್ದರೆ ಸಾಕು, ಪಂಜಾಬ್ ಆರಾಮಾಗಿ ಪ್ಲೇಆಫ್ ತಲುಪಲಿದೆ” ಎಂದು ಕ್ರಿಕೆಟ್ ಪಂಡಿತರು ಭವಿಷ್ಯ ನುಡಿದಿದ್ದರು. ಆದರೆ ವಿಧಿ ಆಟವೇ ಬೇರೆಯಾಗಿತ್ತು.

ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡ ಅಡ್ಮಿನ್!

ರಾಜಸ್ಥಾನ್ ರಾಯಲ್ಸ್ ವಿರುದ್ಧದ 8ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಸೋಶಿಯಲ್ ಮೀಡಿಯಾ ಅಡ್ಮಿನ್ ಮಾಡಿದ ಒಂದು ಟ್ವೀಟ್ ಇಡೀ ತಂಡದ ಹಣೆಬರಹವನ್ನೇ ಬದಲಿಸಿತು. ಪಂದ್ಯದ ವೇಳೆ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 4.3 ಓವರ್ಗಳಲ್ಲಿ 49 ರನ್ ದಾಟಿದ ತಕ್ಷಣ, ಅಡ್ಮಿನ್ ಅತಿರೇಕದ ಉತ್ಸಾಹದಲ್ಲಿ ಆರ್ಸಿಬಿ ಐಪಿಎಲ್ ಇತಿಹಾಸದಲ್ಲಿ ದಾಖಲಿಸಿರುವ ಅತಿ ಕಡಿಮೆ ಮೊತ್ತವಾದ (49 ರನ್) ರನ್ನನ್ನು ಉಲ್ಲೇಖಿಸಿ ಟ್ರೋಲ್ ಮಾಡಿದ್ದ. “ನಿಮ್ ಥರ ನಾವು 49ಕ್ಕೆ ಆಲ್ಔಟ್ ಆಗಿಲ್ಲ” ಎಂಬ ಧಾಟಿಯಲ್ಲಿ ಕೆಣಕಿದ್ದ.

ಇದರಿಂದ ಕೆರಳಿದ ಆರ್ಸಿಬಿ ಅಭಿಮಾನಿಗಳು ಪಂಜಾಬ್ ಅಡ್ಮಿನ್ಗೆ ಸಾಮಾಜಿಕ ಜಾಲತಾಣದಲ್ಲೇ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದರು. ಆ ಪಂದ್ಯದಲ್ಲಿ ಪಂಜಾಬ್ 222 ರನ್ಗಳ ಬೃಹತ್ ಮೊತ್ತ ಕಲೆಹಾಕಿದರೂ, ರಾಜಸ್ಥಾನ್ ಆ ಮೊತ್ತವನ್ನು ಯಶಸ್ವಿಯಾಗಿ ಚೇಸ್ ಮಾಡಿ ಪಂಜಾಬ್ಗೆ ಮೊದಲ ಸೋಲಿನ ರುಚಿ ತೋರಿಸಿತು.

ಅಂದು ಬಿದ್ದ ಪಂಜಾಬ್, ಇಂದು ಎದ್ದಿಲ್ಲ!
ಆರ್ಸಿಬಿಗೆ ಶಾಪ ಹಾಕಿದ ಬೆನ್ನಲ್ಲೇ ಪಂಜಾಬ್ ಕಿಂಗ್ಸ್ ತಂಡದ ಗ್ರಹಚಾರವೇ ಬದಲಾದಂತಿದೆ. ರಾಜಸ್ಥಾನ್ ವಿರುದ್ಧ ಸೋತ ಬಳಿಕ ಪಂಜಾಬ್ ಚೇತರಿಸಿಕೊಳ್ಳಲೇ ಇಲ್ಲ.

ಗುಜರಾತ್ ಟೈಟನ್ಸ್ ವಿರುದ್ಧ ಸೋಲು

ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು

ಮುಂಬೈ ಇಂಡಿಯನ್ಸ್ ವಿರುದ್ಧ ಸೋಲು

ಮೇ 17ರಂದು ನಡೆದ ಪಂದ್ಯದಲ್ಲಿ ಅದೇ ಆರ್ಸಿಬಿ ವಿರುದ್ಧ 23 ರನ್ಗಳ ಹೀನಾಯ ಸೋಲು!

ಹೀಗೆ ಸತತವಾಗಿ 6 ಪಂದ್ಯಗಳಲ್ಲಿ ಸೋಲುವ ಮೂಲಕ ಪಂಜಾಬ್ ತಂಡ ಹಿನಾಯ ಸ್ಥಿತಿ ತಲುಪಿದೆ. ಆರ್ಸಿಬಿಯನ್ನು ಅನಗತ್ಯವಾಗಿ ಟ್ರೋಲ್ ಮಾಡಲು ಹೋಗಿ ಸದ್ಯ ಸೋತು ಸುಣ್ಣವಾಗಿದೆ.

ಪ್ಲೇಆಫ್ ಕನಸು ನುಚ್ಚುನೂರು?
ಸದ್ಯ ಪಂಜಾಬ್ ಕಿಂಗ್ಸ್ಗೆ ಲೀಗ್ ಹಂತದಲ್ಲಿ ಇನ್ನು ಕೇವಲ ಒಂದೇ ಒಂದು ಪಂದ್ಯ ಬಾಕಿ ಉಳಿದಿದೆ. ಆ ಪಂದ್ಯವನ್ನು ಭಾರಿ ರನ್ ರೇಟ್ನಿಂದ ಗೆದ್ದರೂ ಸಹ, ಇತರ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗಬೇಕಿರುವುದರಿಂದ ಪಂಜಾಬ್ ಪ್ಲೇಆಫ್ ಪ್ರವೇಶಿಸುವುದು ಬಹುತೇಕ ಅಸಾಧ್ಯ ಎನ್ನಲಾಗುತ್ತಿದೆ.

Bye Bye Punjab👋

As a cuban kid always said, here we meet once again in the next IPL😭 https://t.co/pNZXwR7RcI pic.twitter.com/pmwqS6AXQd

— Sree Harsha (@AapathBandhava) May 17, 2026

The '49' troll for RCB is the last thing they did: Punjab fell that day they haven't risen today!
Share. Facebook Twitter LinkedIn WhatsApp Email

Related Posts

BREAKING : ಕೊಹ್ಲಿ ಅಭಿಮಾನಿಗಳಿಗೆ ಬಿಗ್ ಶಾಕ್ : ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ `ವಿರಾಟ್’ ಔಟ್

1 Min Read

Lalit Modi : ಸುಶ್ಮಿತಾ ಸೇನ್ ಗೋಲ್ಡ್ ಡಿಗ್ಗರ್ ಅಲ್ಲ ನಾನು ಡೈಮಂಡ್ ಡಿಗ್ಗರ್ : ಲಲಿತ್ ಮೋದಿ

4 Mins Read
Lanka Premier League 2026

Lanka Premier League 2026 : ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇಂಪ್ಯಾಕ್ಟ್ ಸಬ್ಸ್ ಮತ್ತು ಕಡ್ಡಾಯ ಯುವ ಆಟಗಾರರ ನಿಯಮ ಜಾರಿ

4 Mins Read
Recent News

​ವಿದ್ಯಾರ್ಥಿಗಳ ಆತ್ಮಹತ್ಯೆಗಳು ಸಾಂಸ್ಥಿಕ ವೈಫಲ್ಯದ ಸಂಕೇತ: ಸುಪ್ರೀಂ ಕೋರ್ಟ್ ಸಮಿತಿಯ ಗಂಭೀರ ಅಭಿಪ್ರಾಯ!

SHOCKING : ಮನೆಯ ಮೇಲಿನ ನೀರಿನ ಟ್ಯಾಂಕ್‌ ನಲ್ಲಿ 27 ಹಾವಿನ ಮರಿಗಳು ಪತ್ತೆ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ : ಬಸ್ ಪ್ರಯಾಣಕ್ಕಾಗಿ ಶೀಘ್ರವೇ ಉಚಿತ `ಶಕ್ತಿ ಸ್ಮಾರ್ಟ್ ಕಾರ್ಡ್’ ವಿತರಣೆ

​ಲಂಡನ್ ನಲ್ಲಿ 36ನೇ ಮಹಡಿಯಿಂದ ಬಿದ್ದು ಭಾರತೀಯ ಮೂಲದ ದಂಪತಿ ಮತ್ತು 9 ವರ್ಷದ ಬಾಲಕ ಸಾವು!

State News
KARNATAKA

ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ : ಬಸ್ ಪ್ರಯಾಣಕ್ಕಾಗಿ ಶೀಘ್ರವೇ ಉಚಿತ `ಶಕ್ತಿ ಸ್ಮಾರ್ಟ್ ಕಾರ್ಡ್’ ವಿತರಣೆ

By kannadanewsnow57 KARNATAKA 2 Mins Read

ಬೆಂಗಳೂರು: ರಾಜ್ಯದ ನೂತನ ಸಾರಿಗೆ ಸಚಿವರಾಗಿ ಬೈರತಿ ಸುರೇಶ್ ಅವರು ಸೋಮವಾರ ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು.…

Rent Agreement: ಬಾಡಿಗೆ ಒಪ್ಪಂದ ಕೇವಲ 11 ತಿಂಗಳಿಗೆ ಮಾತ್ರ ಏಕೆ? 12 ತಿಂಗಳು ಏಕಿಲ್ಲ? ಇಲ್ಲಿದೆ ಅಸಲಿ ರಹಸ್ಯ.!

ಚೆಕ್ ಬೌನ್ಸ್ ಆದರೆ ಜೈಲು ಗ್ಯಾರಂಟಿಯೇ? ಕಾನೂನು ಏನು ಹೇಳುತ್ತದೆ? ಇಂದೇ ತಿಳಿದುಕೊಳ್ಳಿ!

Rain Alert : ರಾಜ್ಯಾದ್ಯಂತ ಮುಂದಿನ 3 ದಿನ `ನೈಋತ್ಯ ಮುಂಗಾರು’ ಆರ್ಭಟ: ಈ ಜಿಲ್ಲೆಗಳಿಗೆ `ರೆಡ್ ಅಲರ್ಟ್’ ಘೋಷಣೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.