ಬೆಂಗಳೂರು: ಶಿವಮೊಗ್ಗದ ತೀರ್ಥಹಳ್ಳಿಯಲ್ಲಿರುವ ಗೃಹ ಸಚಿವರ ಮನೆಯ ಸುತ್ತಮುತ್ತಲೇ ಉಗ್ರರು ಅಡಗಿದ್ದಾರೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
BIGG NEWS: ಮಂಡ್ಯದಲ್ಲಿ ಆರ್ಕೇಸ್ಟ್ರಾದಲ್ಲಿ ಫ್ಲೆಕ್ಸ್ ಹಾಕಿಸೋ ವಿಚಾರಕ್ಕೆ ಜಗಳ: ಕೊಲೆಯಲ್ಲಿ ಅಂತ್ಯ
ನಗರದಲ್ಲಿ ಮಾತನಾಡಿದ ಅವರು, ಪಿಎಫ್ಐ ಸಂಘಟನೆ ಬ್ಯಾನ್ ಮಾಡಿದ್ರೂ, ಮಾನಸಿಕತೆ ಬ್ಯಾನ್ ಆಗಿಲ್ಲ. ಕರಾವಳಿ ಭಾಗದಲ್ಲಿ ಉಗ್ರರ ಕೃತ್ಯ ಹೆಚ್ಚಾಗುತ್ತಿದೆ. ಅಲ್ಲಿಗೆ ವಿಶೇಷ ಪಡೆಯ ಅಗತ್ಯ ಕರಾವಳಿ ಭಾಗಕ್ಕೆ ಅಗತ್ಯವಿದೆ. ಪಿಎಫ್ಐ ಮಾತ್ರವಲ್ಲ ಎಸ್ಡಿಪಿಐ ಕೂಡ ಬ್ಯಾನ್ ಆಗ್ಬೇಕು. ಇವರು ಬ್ಯಾನ್ ಆದ್ರೂ ಬಾಲ ಬಿಚ್ಚೋದು ಕಡಿಮೆಯಾಗಿಲ್ಲ. ಹೀಗಾಗಿ ಪೊಲೀಸರು ಇದನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.
BIGG NEWS: ಮಂಡ್ಯದಲ್ಲಿ ಆರ್ಕೇಸ್ಟ್ರಾದಲ್ಲಿ ಫ್ಲೆಕ್ಸ್ ಹಾಕಿಸೋ ವಿಚಾರಕ್ಕೆ ಜಗಳ: ಕೊಲೆಯಲ್ಲಿ ಅಂತ್ಯ
ಮಂಗಳೂರಿನ ಈ ಪ್ರಕರಣ ಭಟ್ಕಳಕ್ಕೂ ಲಿಂಕ್ ಇದೆ. ತೀರ್ಥಹಳ್ಳಿ ಗೃಹ ಸಚಿವರ ಮನೆ ಸುತ್ತಮುತ್ತಲೇ ಉಗ್ರರು ಅಡಗಿ ಕುಳಿತಿದ್ದಾರೆ. ಗೃಹ ಮಂತ್ರಿಗಳ ತವರೇ ಉಗ್ರರ ಸೆಂಟರ್ ಆಗಿದೆ. ಈ ಹಿಂದೆ ಕಾಂಗ್ರೆಸ್ ಅವಧಿಯಲ್ಲೂ ಹಿಂದೂ ಹುಡುಗಿಯ ಅತ್ಯಾಚಾರ, ಹತ್ಯೆಯಾಗಿದೆ. ಆ ಪ್ರಕರಣವನ್ನೂ ರೀ ಓಪನ್ ಮಾಡಿ ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.