ಹೈದರಾಬಾದ್: ಬಾಲಕನೊಬ್ಬ ತಾನು ಸಾಯುವ ದಿನಾಂಕವನ್ನು ನಿಗಧಿಪಡಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಇಲ್ಲಂಡು ಪಟ್ಟಣದಲ್ಲಿ ನಡೆದಿದೆ.
ಇಲ್ಲಂಡು ಪಟ್ಟಣದ 9ನೇ ವಾರ್ಡ್ನ ಶಿವಲೋಕೇಶ್ (14) ಅಲಿಯಾಸ್ ಸೋನು ಸಾವಿಗೆ ಶರಣಾಗುದ್ದಾನೆ. ಈತ 10ನೇ ತರಗತಿ ವಿದ್ಯಾರ್ಥಿ. ತಂದೆ ರವಿ ಸ್ಥಳೀಯವಾಗಿ ಟೆಂಟ್ ಹೌಸ್ ನಡೆಸುತ್ತಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣುಬಿಗಿದುಕೊಂಡಿದ್ದಾನೆ. ಇದನ್ನು ಕಂಡ ಅಜ್ಜ ಕೂಡಲೇ ಶಿವಲೋಕೇಶ್ ಫ್ಯಾನ್ಗೆ ನೇಣು ಬಿಗಿದುಕೊಂಡಿರುವದನ್ನು ಕೂಡಲೇ ಸ್ಥಳೀಯರ ನೆರವಿನಿಂದ ಬಾಲಕನನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ, ಬಾಲಕ ಈಗಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯನಾಗಿದ್ದ ಲೋಕೇಶ್ ಆತ್ಮಹತ್ಯೆಗೂ ಮುನ್ನ ಗೆಳೆಯ ಗೌತಮ್ಗೆ ಇನ್ಸ್ಟಾಗ್ರಾಂನಲ್ಲಿ ಹುಟ್ಟು ಹಬ್ಬಕ್ಕೆ ವಿಶ್ ಮಾಡಿದ್ದಾನೆ. ಸ್ವಲ್ಪ ಸಮಯದ ನಂತರ ಶಿವಲೋಕೇಶ್ ಸಾವನ್ನಪ್ಪಿದ್ದಾನೆ ಎಂಬ ಸುದ್ದಿ ಕೇಳಿದ ಸ್ನೇಹಿತರಿಗೆ ಆಘಾತವುಂಟಾಗಿದೆ.
ಶಿವಲೋಕೇಶ್ ಕಳಿಸಿದ ಮೆಸೇಜ್ ನೋಡುತ್ತಾ ಅಳುತ್ತಿದ್ದ ಸ್ನೇಹಿತರಿಗೆ ಶಾಕ್ ಕಾದಿತ್ತು. ಹೌದು, ಶಿವಲೋಕೇಶ್ ಮೊದಲೇ Instagram ಬಯೋದಲ್ಲಿ ಅವನ ಸಾವಿನ ದಿನಾಂಕ ಜುಲೈ 20 ಎಂದು ಬರೆದಿರುವುದನ್ನು ನೋಡಿದ ಅವನ ಸ್ನೇಹಿತರು ಒಂದು ಕ್ಷಣ ಆಘಾತಕ್ಕೊಳಗಾದರು. ʻಶಿವಲೋಕೇಶ್ ತಾನು ಸಾಯಲೇ ಬೇಕು ಎಂದು ಮೊದಲೇ ನಿರ್ಧರಿಸಿ, ಅದಕ್ಕೆ ಡೇಟ್ ಫಿಕ್ಸ್ ಮಾಡಿಕೊಂಡಿದ್ದ. ಈ ವಿಷಯವನ್ನು Instagramನಲ್ಲಿ ಬರೆದುಕೊಂಡಿದ್ದʼ. ಇದನ್ನು ನೋಡಿದವರಿಗೆ ಆಘಾತ ಸೃಷ್ಟಿಸಿತ್ತು.
ಆದರೆ, ಬಾಲಕನ ಆತ್ಮಹತ್ಯೆಗೆ ನಿಖರ ಕಾರಣಗಳು ತಿಳಿದುಬಂದಿಲ್ಲ. ಆದರೆ, ಬಾಲಕ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಕ್ರಿಯಾಶೀಲನಾಗಿರುವುದರಿಂದ ಸೆಲ್ ಫೋನ್ ಖರೀದಿಸದಿರುವುದು ಆತನ ಸಾವಿಗೆ ಕಾರಣ ಎಂದು ಸ್ಥಳೀಯರು ಶಂಕಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕೇರಳ ನೀಟ್ ಪರೀಕ್ಷೆ ಪ್ರಕರಣ : ಮತ್ತಿಬ್ಬರು ಶಿಕ್ಷಕರ ಬಂಧನ | Kerala NEET controversy
BIGG BREAKING NEWS : ದೇಶದಲ್ಲಿ ಮತ್ತೆ ಏರಿಕೆ ಕಂಡ ಕೊರೊನಾ : 24 ಗಂಟೆಯಲ್ಲಿ 21,566 ಕೇಸ್ ಪತ್ತೆ