ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಬಿದನಗೆರೆ ಕ್ರಾಸ್ ಬಳಿಯಲ್ಲಿ ನಡು ರಸ್ತೆಯಲ್ಲಿಯೇ ನೋಡ ನೋಡುತ್ತಿದ್ದಂತೇ ಟೆಂಪೋ ಟ್ರಾವೆಲ್ ಒಂದು ಧಗಧಗಿಸಿ ಹೊತ್ತಿ ಉರಿದಿದೆ. ಚಾಲಕನ ಸಮಯ ಪ್ರಜ್ಞೆಯಿಂದಾಗಿ ಅದರಲ್ಲಿದ್ದಂತ 10 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಬಿದನಗೆರೆ ಕ್ರಾಸ್ ಬಳಿಯಲ್ಲಿ ಟೆಂಪೋ ಟ್ರಾವೆಲ್ ಒಂದರ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ಗಮನಿಸಿದಂತ ಚಾಲಕ ನಡು ರಸ್ತೆಯಲ್ಲೇ ವಾಹನ ನಿಲ್ಲಿಸಿ, ಅದರಲ್ಲಿದ್ದಂತ ಪ್ರಾಯಾಣಿಕರನ್ನು ಕೆಳಗೆ ಇಳಿಸಿದ್ದಾರೆ.
SSLC ಪುನರಾವರ್ತಿತ ವಿದ್ಯಾರ್ಥಿಗಳೇ ಗಮನಿಸಿ: ಪರೀಕ್ಷೆಗೆ ನೊಂದಣಿಗೆ ದಿನಾಂಕ ವಿಸ್ತರಣೆ
ಟಿಟಿ ವಾಹನದಲ್ಲಿದ್ದಂತ 10 ಮಂದಿ ಕೆಳಗೆ ಇಳಿಯುತ್ತಿದ್ದಂತೇ ವಾಹನ ನಡು ರಸ್ತೆಯಲ್ಲಿಯೇ ಧಗಧಗಿಸಿ ಹೊತ್ತಿ ಉರಿದಿದೆ. ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಹೇಗೆ ಎನ್ನುವುದು ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆಯನ್ನು ಆಗ್ನಿಶಾಮಕ ಸಿಬ್ಬಂದಿ ನಡೆಸುತ್ತಿದ್ದಾರೆ.
‘BBMP’ ಶಾಲಾ ಶಿಕ್ಷಕರಿಗೆ ಗುಡ್ ನ್ಯೂಸ್ : 100 % ರಿಸಲ್ಟ್ ಬಂದ್ರೆ ‘ಫಾರಿನ್ ಟ್ರಿಪ್’ ಭಾಗ್ಯ |Foreign Trip