ಬೆಂಗಳೂರು: ರಾಜ್ಯದಲ್ಲಿ ಧರ್ಮ ದಂಗಲ್ ಕಿಚ್ಚು ಜೋರಾಗಿದೆ. ಬಿಜೆಪಿ ಕಾಂಗ್ರೆಸ್ ಮಧ್ಯೆ ದೇವಸ್ಥಾನ ವರ್ಸಸ್ ದರ್ಗಾ ವಾರ್ ಶುರುವಾದಂತೆ ಆಗಿದೆ.
BIGG NEWS: ಮಂಗಳೂರಿನಲ್ಲಿ ಅಕ್ರಮ ಕಸಾಯಿ ಖಾನೆಗೆ ಹಿಂದೂ ಜಾಗರಣಾ ವೇದಿಕೆ ದಾಳಿ; ಆರೋಪಿ ಪೊಲೀಸರ ವಶಕ್ಕೆ
ಹುಬ್ಬಳ್ಳಿ – ಧಾರವಾಡ ದೇವಸ್ಥಾನಗಳ ತೆರವಾದಾಗ ಸುಮ್ಮನಿದ್ದ ಸಿದ್ದರಾಮಯ್ಯ ದರ್ಗಾ ತೆರವಿನ ಬಗ್ಗೆ ಸಿಡಿದಿದ್ದೇಕೆ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಬಿಜೆಪಿ ಪ್ರಶ್ನೆ ಮಾಡಿದೆ.ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಸರಣಿ ಪೋಸ್ಟ್ ಮಾಡಲಾಗಿದೆ. ಹುಬ್ಬಳ್ಳಿ-ಧಾರವಾಡ ದೇವಸ್ಥಾನಗಳ ತೆರವಾದಾಗ ಸುಮ್ಮನಿದ್ದ ಸಿದ್ದರಾಮಯ್ಯ ದರ್ಗಾ ತೆರವಿನ ಬಗ್ಗೆ ಸಿಡಿದಿದ್ದೇಕೆ? ಜನರಿಗೆ ಇದೆಲ್ಲ ಸ್ಪಷ್ಟವಾಗಿ ಗೋಚರವಾಗಿದ್ದಕ್ಕೆ ನಿಮ್ಮನ್ನು ಮನೆಯಲ್ಲಿ ಕೂರಿಸಿದ್ದಾರೆ ಅಂತಾ ಕುಟುಕಿದ್ದಾರೆ.
ಹಿಂದೂ ದೇವಾಲಯಗಳ ಮೇಲೆ ಸರ್ಕಾರದ ನಿಯಂತ್ರಣ ಸಾಧಿಸುವ, ದತ್ತಿ ತಿದ್ದುಪಡಿ ಮಸೂದೆಯನ್ನು ಮಂಡಿಸಲು ಹೊರಟವರು ಸಿದ್ದರಾಮಯ್ಯ. ಹಿಂದೂಗಳನ್ನು ದಮನಿಸಲು ಹವಣಿಸಿದ್ದಕ್ಕೇ ಅಲ್ಲವೇ ನಿಮಗಿನ್ನೂ ಭದ್ರ ನೆಲೆ ಸಿಗದಿರುವುದು? ಎಂದು ಹೇಳಿದೆ.
ಹಿಂದೂ ಕಾರ್ಯಕರ್ತರ ವಿರುದ್ಧ ಹೋರಾಡಿ ಎಂದವರು @siddaramaiah. ಇವರ ಬೆಂಬಲದಿಂದ ದೇಶದ್ರೋಹಿ ಪಿಎಫ್ಐ ಸದಸ್ಯರು, ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡಿದರು. ಪಿಎಫ್ಐ ಕಾರ್ಯಕರ್ತರ ಬಗ್ಗೆ ಮೃದು ಧೋರಣೆ ತಳೆದು ಪ್ರಕರಣಗಳನ್ನು ಕೈ ಬಿಟ್ಟಿದ್ದಕ್ಕೇ ಅಲ್ಲವೇ ಇನ್ನೂ ಕುಕ್ಕರ್ ಬ್ಲಾಸ್ಟ್ ಆಗಿದ್ದು?#AntiHinduCongress
5/6— BJP Karnataka (@BJP4Karnataka) December 24, 2022