ಬೆಂಗಳೂರು: ರಾಜ್ಯದಲ್ಲಿ ಹವಾಮಾನ ಏರುಪೇರು ಆಗುತ್ತ ಇದೆ. ಹೀಗಾಗಿ ಜನರಿಗೆ ಸಾಕಷ್ಟು ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಇದೀಗ ತೇವಾಂಶದ ಹೆಚ್ಚಳದಿಂದ ಉಸಿರಾಟದ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ವೈದ್ಯರು ಹೇಳಿದ್ದಾರೆ.
BIGG NEWS: ಕೊಪ್ಪಳದಲ್ಲಿ ಬಲವಂತದ ಮತಾಂತರ ಪ್ರಕರಣ; ಮೂವರ ವಿರುದ್ಧ ದೂರು ದಾಖಲು
ಉಸಿರುಕಟ್ಟುವುದು, ಶೀತ ಹಾಗೂ ಗಂಟಲು ನೋವು ಕಾಣಿಸಿಕೊಳ್ಳಬಹುದು, ಮ್ಯಾಂಡಸ್ ಚಂಡಮಾರುತದಿಂದಾಗಿ ಡಿಸೆಂಬರ್ 12ರವರೆಗೂ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇನ್ನು ಮನೆಯಲ್ಲಿ ವೆಂಟಿಲೇಷನ್ ಬಹಳ ಅವಶ್ಯಕ.ಮನೆಯ ಎಲ್ಲಾ ಕಿಟಕಿಗಳನ್ನು ಮುಚ್ಚಿದಾಗ ಗಾಳಿಗೆ ಯಾವುದೇ ಮಾರ್ಗವಿರುವುದಿಲ್ಲ, ಯಾರಾದರೂ ಮನೆಯಲ್ಲಿ ಸೀನುತ್ತಿದ್ದರೆ , ಉಳಿದವರಿಗೂ ಕೂಡ ಸೋಂಕು ತಗುಲಿ, ಶೀತ, ಜ್ವರ ಮತ್ತಿತರೆ ಆರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆ ಇರುತ್ತದೆ ಎಂದು ಮಕ್ಕಳ ತಜ್ಞ ಡಾ. ಎಚ್ ಪರಮೇಶ್ ತಿಳಿಸಿದ್ದಾರೆ.
BIGG NEWS: ಕೊಪ್ಪಳದಲ್ಲಿ ಬಲವಂತದ ಮತಾಂತರ ಪ್ರಕರಣ; ಮೂವರ ವಿರುದ್ಧ ದೂರು ದಾಖಲು
ವೆಂಟಿಲೇಷನ್ ಕೊರತೆಯಿಂದ ಕುಟುಂಬ ಸದಸ್ಯರಲ್ಲಿ ವೇಗವಾಗಿ ಸೋಂಕು ಹರಡಲು ಕಾರಣವಾಗುತ್ತದೆ. ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಮೂಗನ್ನು ಮುಚ್ಚಿಕೊಳ್ಳಿ, ಮೇಲಾಗಿ ಹತ್ತಿ ಅಥವಾ ಕರವಸ್ತ್ರವನ್ನು ಬಳಸಿ ಮತ್ತು ನಂತರ ನಿಮ್ಮ ಕೈಗಳನ್ನು ತೊಳೆಯಿರಿ. ನಿಮ್ಮ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಿ, ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಬಳಪಡಿಸಲು ಹಣ್ಣುಗಳು, ತರಕಾರಿಗಳು ಬಹಳ ಮುಖ್ಯ ಏಕೆಂದರೆ ಅವುಗಳು ಬಹಳಷ್ಟು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ.