ಅಮರಾವತಿ: ತೆಲಂಗಾಣ ರಾಜ್ಯಪಾಲೆ ತಮಿಳ್ಇಸೈ ಸೌಂದರರಾಜನ್ ಅವರು ವಿಮಾನ ಪ್ರಯಾಣದ ವೇಳೆ ವೈದ್ಯೆಯಾಗಿ ಕರ್ತವ್ಯ ನಿರ್ವಹಿಸಿ, ಅಸ್ವಸ್ಥರಾಗಿದ್ದಂತ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಪ್ರಾಣವನ್ನು ಉಳಿಸಿದ್ದಾರೆ.
ಆಂಧ್ರಪ್ರದೇಶದ ಹೆಚ್ಚುವರಿ ಡಿಜಿಪಿ ಕೃಪಾನಂದ ತ್ರಿಪಾಠಿ ಉಜೇಲಾ ಅವರು, ಶುಕ್ರವಾರ ರಾತ್ರಿ ಇಂಡಿಗೋ ವಿಮಾನದಲ್ಲಿ ದೆಹಲಿಯಿಂದ ಹೈದರಾಬಾದಿಗೆ ಪ್ರಯಾಣ ಕೈಗೊಂಡಿದ್ದರು. ಈ ವೇಳೆಯಲ್ಲಿ ಮಧ್ಯರಾತ್ರಿ ಇದ್ದಕ್ಕಿದ್ದಂತೆ ತ್ರಿಪಾಠಿ ಅವರಿಗೆ ಆರೋಗ್ಯ ಹದಗೆಟ್ಟಿತ್ತು.
ಈ ವೇಳೆ ವಿಷಯ ತಿಳಿದಂತ ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಂತ ವೈತ್ತಿಯಿಂದ ವೈದ್ಯೆಯಾಗಿದ್ದ ತೆಲಂಗಾಣ ರಾಜ್ಯಪಾಲೆ ತಮಿಳ್ಇಸೈ ಸೌದರರಾಜನ್ ಅವರು, ತ್ರಿಪಾಠಿ ಕುಳಿತಿದ್ದ ಸ್ಥಳಕ್ಕೆ ಆಗಮಿಸಿ ದೇಹವನ್ನು ಬಾಗಿಸುವಂತೆ ಮತ್ತು ದೀರ್ಘವಾಗಿ ಉಸಿರಾಡುವಂತೆ ಸೂಚಿಸಿದರು.
ತ್ರಿಪಾಠಿ ಅವರು ರಾಜ್ಯಪಾಲರ ಸಲಹೆಯಂತೆ ಮಾಡಿದರು. ಕೆಲವೇ ಕ್ಷಣದಲ್ಲಿ ಅವರ ಹೃದಯ ಬಡಿತದಲ್ಲಿ ಏರಿಕೆ ಕಂಡುಬಂದು, ಆರೋಗ್ಯದಲ್ಲಿ ಚೇತರಿಕೆ ಕಾಣುವಂತೆ ಆಯ್ತು. ವಿಮಾನದಿಂದ ಇಳಿದ ಬಳಿಕ, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಯಿತು.
ಇಂದು ದೇಶದ 15ನೇ ರಾಷ್ಟ್ರಪತಿಯಾಗಿ ‘ದ್ರೌಪತಿ ಮುರ್ಮು’ ಪ್ರಮಾಣ ವಚನ ಸ್ವೀಕಾರ | Draupadi Murmu
ಈ ಬಗ್ಗೆ ಪ್ರತಿಕ್ರಿಯಿಸಿದಂತ ಡಿಜಿಪಿ ಕೃಪಾನಂದ ತ್ರಿಪಾಠಿ ಅವರು, ರಾಜ್ಯಪಾಲರು ನನ್ನ ಹೃದಯ ಬಡಿತ ಲೆಕ್ಕಹಾಕಿದಾಗ ಅದು ಕೇವಲ 39ರಷ್ಟಿತ್ತು. ಅವರು ನನ್ನನ್ನು ಮುಂದಕ್ಕೆ ಬಾಗಿ ಉಸಿರಾಟ ಮಾಡುವಂತೆ ಹೇಳಿದ್ದರಿಂದ ನನ್ನ ಉಸಿರಾಟ ಸ್ಥಿರಗೊಂಡಿತು. ತಾಯಿಯಂತೆ ಉಪಚರಿಸಿದರು. ಅವರಿಲ್ಲದೇ ಹೋಗಿದ್ದರೇ ನಾನು ಜೀವಂತವಾಗಿರುತ್ತಿರಲಿಲ್ಲ ಎಂದು ಹೇಳಿದ್ದಾರೆ.