ಶಿವಮೊಗ್ಗ: ಇಂಜಿನ್ ನಲ್ಲಿ ಉಂಟಾದಂತ ತಾಂತ್ರಿಕ ದೋಷದಿಂದಾಗಿ ತಾಳಗುಪ್ಪ-ಮೈಸೂರು ರೈಲು ಭದ್ರಾವತಿಯ ಬಳಿಯಲ್ಲಿ ಕೆಟ್ಟು ನಿಂತಿರುವುದಾಗಿ ತಿಳಿದು ಬಂದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪದಿಂದ ಹೊರಟಂತ ಮೈಸೂರು-ತಾಳಗುಪ್ಪ ರೈಲು ಭದ್ರಾವತಿಯ ಬಳಿಯ ಕಡದಕಟ್ಟೆಯಲ್ಲಿ ತಾಂತ್ರಿಕ ದೋಷದಿಂದ ಕೆಟ್ಟು ನಿಂತಿರೋದಾಗಿ ತಿಳಿದು ಬಂದಿದೆ.
ಈ ಬಗ್ಗೆ ಕನ್ನಡ ನ್ಯೂಸ್ ನೌ ರೈಲ್ವೆ ಇಲಾಖೆಯ ಮೈಸೂರು ವಿಭಾಗವನ್ನು ಸಂಪರ್ಕಿಸಿದಾಗ, ರೈಲ್ವೆ ಇಂಜಿನ್ ನಲ್ಲಿ ತಾಂತ್ರಿಕ ತೊಂದರೆಯ ಕಾರಣ ಭದ್ರಾವತಿ ಬಳಿಯ ಕಡದಕಟ್ಟೆಯಲ್ಲಿ 20ಕ್ಕೂ ಹೆಚ್ಚು ನಿಮಿಷ ನಿಲ್ಲುವಂತೆ ಆಗಿತ್ತು.ಈ ಬಳಿಕ ಮತ್ತೊಂದು ಇಂಜಿನ್ ಮೂಲಕ ಪ್ರಯಾಣವನ್ನು ಆರಂಭಿಸಿದೆ ಎಂದು ತಿಳಿಸಿದೆ.
ಅಂದಹಾಗೇ ಏಳೂವರೆ ಸುಮಾರಿಗೆ ಭದ್ರಾವತಿ ರೈಲ್ವೆ ನಿಲ್ದಾಣವನ್ನು ತಾಳಗುಪ್ಪ-ಮೈಸೂರು ರೈಲು ಆಗಮಿಸಿತ್ತು. ಇಲ್ಲಿಂದ ಹೊರಟ ಕೆಲವೇ ನಿಮಿಷಗಳ ಬಳಿಕ ಇಂಜಿನ್ ನಲ್ಲಿ ತಾಂತ್ರಿಕ ತೊಂದರೆ ಉಂಟಾಗಿ ಕಡದಕಟ್ಟೆ ಬಳಿಯಲ್ಲಿ ಕೆಟ್ಟು ನಿಂತಿತ್ತು ಎನ್ನಲಾಗಿದೆ.
ಶಿವಮೊಗ್ಗ: ಸೊರಬ ತಾಲೂಕಿನಲ್ಲೇ ದಾಖಲೆ ಬರೆದ ‘ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರ’ದಲ್ಲಿ ನಡೆದ ‘ರಕ್ತದಾನ ಶಿಬಿರ’