ದಾವಣೆಗೆರೆ: ಜಿಲ್ಲೆಯ ಚೆನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ನೈರುತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಅಭ್ಯರ್ಥಿ ಡಾ.ಕೆ.ಕೆ ಮಂಜುನಾಥ್ ಪರವಾಗಿ ಭರ್ಜರಿ ಒಲವು ಮೂಡಿದೆ. ಕ್ಷೇತ್ರದ ಶಿಕ್ಷಕರು ಡಾ.ಕೆ.ಕೆ ಮಂಜುನಾಥ್ ಗೆ ಬೆಂಬಲ ನೀಡೋದಾಗಿ ಘೋಷಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಚೆನ್ನಗಿರಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಭೆ ನಡೆಯಿತು. ಈ ಸಭೆಯಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಆಯನೂರು ಮಂಜುನಾಥ್, ಶಿಕ್ಷಕರ ಕ್ಷೇತ್ರದ ಡಾ.ಕೆ.ಕೆ ಮಂಜುನಾಥ್ ಕುಮಾರ್ ಕೂಡ ಭಾಗಿಯಾಗಿದ್ದರು.
ಚೆನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿಗಳ ಪರವಾಗಿ ಶಿಕ್ಷಕರು ಭಾರೀ ಒಲವು ತೋರಿದ್ದಾರೆ. ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಾ.ಕೆ.ಕೆ ಮಂಜುನಾಥ್ ಕುಮಾರ್ ಗೆ ಶಿಕ್ಷಕರು ಬೆಂಬಲ ಘೋಷಿಸಿರೋದಾಗಿ ತಿಳಿದು ಬಂದಿದೆ.
ಚನ್ನಗಿರಿ ವಿಧಾನಸಭಾ ಕ್ಷೇತ್ರ ವಾಪ್ತಿಯ ಮುಖಂಡರ, ಚುನಾಯಿತ ಪ್ರತಿನಿಧಿಗಳ, ಪದವೀಧರ, ಶಿಕ್ಷಕರ ಮತ್ತು ಚಿಂತಕರ ಸಭೆಯಲ್ಲಿ ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾದ ಡಾ.ಕೆ.ಕೆ ಮಂಜುನಾಥ್ ಕುಮಾರ್ ರವರು ಭಾಗವಹಿಸಿದರು.
‘ವಿಡಿಯೋ ವೈರಲ್’ ಮಾಡಬಾರದೆಂದು ‘ಯಾವ ಸೆಕ್ಷನ್’ನಲ್ಲಿ ಇದೆ?: ಸಿಎಂ ಸಿದ್ಧರಾಮಯ್ಯಗೆ ‘HDK’ ತಿರುಗೇಟು
ರಾಹುಲ್ ದ್ರಾವೀಡ್ ಬದಲಿಗೆ ʻಟೀಂ ಇಂಡಿಯಾʼದ ನೂತನ ಕೋಚ್ ಆಗಿ ʻಗೌತಮ್ ಗಂಭೀರ್ʼ ಆಸಕ್ತಿ : ವರದಿ