ನರಸೀಪಟ್ಟಣಂ (ಆಂಧ್ರಪ್ರದೇಶ): ಆಂಧ್ರಪ್ರದೇಶದ ಮಾಜಿ ಸಚಿವ ಮತ್ತು ತೆಲುಗು ದೇಶಂ ಪಕ್ಷದ ನಾಯಕ ಅಯ್ಯಣ್ಣ ಪತ್ರುಡು ಮತ್ತು ಅವರ ಪುತ್ರ ರಾಜೇಶ್ ಅವರ ಮನೆಯಲ್ಲಿ ಗೋಡೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ಗೆ ನಕಲಿ ದಾಖಲೆಗಳನ್ನು ಸಲ್ಲಿಸಿದ ಆರೋಪದ ಮೇಲೆ ಗುರುವಾರ ಮುಂಜಾನೆ ಅವರ ನಿವಾಸದಿಂದ ಬಂಧಿಸಲಾಗಿದೆ.
ಇಬ್ಬರನ್ನು ಅಪರಾಧ ತನಿಖಾ ವಿಭಾಗ (ಸಿಐಡಿ) ಪೊಲೀಸರು ಇಂದು ಮುಂಜಾನೆ ಬಂಧಿಸಿ ಏಲೂರು ಜಿಲ್ಲೆಗೆ ಕರೆದೊಯ್ಯಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ಮನೆ ಗೋಡೆ ಕೆಡವುವ ವಿಷಯಕ್ಕೆದಂತೆ ಹೈಕೋರ್ಟ್ಗೆ ನಕಲಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ನೀರಾವರಿ ಅಧಿಕಾರಿಗಳ ದೂರಿನ ಮೇರೆಗೆ ಸಿಐಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು ಎಂದು ವರದಿಯಾಗಿದೆ. ಇವರಿಬ್ಬರು ರಾವಣಪಲ್ಲಿ ನೀರಾವರಿ ಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಅಯ್ಯಣ್ಣ ಪತ್ರುಡು ಮತ್ತು ರಾಜೇಶ್ ಅವರನ್ನು ಸರ್ಕಾರ ಪೂರ್ವ ಮಾಹಿತಿ ಇಲ್ಲದೆ ಬಂಧಿಸಿದೆ ಎಂದು ಅಯ್ಯಣ್ಣ ಅವರ ಪತ್ನಿ ಪದ್ಮಾವತಿ ಆರೋಪಿಸಿದ್ದಾರೆ. ಅಯ್ಯಣ್ಣ ಬಂಧನ ವಿರೋಧಿಸಿ ತೆಲುಗು ದೇಶಂ ಪಕ್ಷದ ಕಾರ್ಯಕರ್ತರು ನರಸೀಪಟ್ಟಣ ಬಂದ್ಗೆ ಕರೆ ನೀಡಿದ್ದಾರೆ.
ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಅಯ್ಯಣ್ಣ ಅವರ ಬಂಧನದ ವೀಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಬಂಧನವನ್ನು ಖಂಡಿಸಿದ್ದಾರೆ ಮತ್ತು ಇದು ಹಿಂದುಳಿದ ವರ್ಗಗಳ ನಾಯಕರ ಧ್ವನಿಯನ್ನು ದಮನ ಮಾಡುವ ಪ್ರಯತ್ನ ಎಂದು ಕರೆದಿದ್ದಾರೆ.
రాష్ట్ర ముఖ్యమంత్రి జగన్ రెడ్డి ఒక సిఎం లా కాకుండా రాక్షసుడిలా వ్యవహరిస్తున్నాడు. గోడలు దూకి, తలుపులు పగల గొట్టి నర్సీపట్నంలో మాజీ మంత్రి, బిసి నేత అయ్యన్న పాత్రుడి ని అరెస్టు చెయ్యడం దిగ్ర్బాంతి కలిగించింది.(1/3)#WeStandWithAyyanna pic.twitter.com/R2NTLXFbGO
— N Chandrababu Naidu (@ncbn) November 3, 2022
BREAKING NEWS: BMTC ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು: ಸಾರ್ವಜನಿಕರಿಂದ ಚಾಲಕನಿಗೆ ಬಿತ್ತು ಗೂಸಾ