ಚಿಕ್ಕಮಗಳೂರು : ಗೋಮಾಳ, ಕಾನು ಪ್ರದೇಶವನ್ನು ಅರಣ್ಯಕ್ಕೆ ಸೇರಿಸುವ ಪ್ರಯತ್ನ ನಡೆದಿದೆ ಎಂದು ಶೃಂಗೇರಿ ಭಾಗದ ಜನರು ಆತಂಕಗೊಂಡಿದ್ದಾರೆ, ಒಂದು ವೇಳೆ ಜಾಗಅರಣ್ಯಕ್ಕೆ ಸೇರಿದರೆ ಕೊಲೆ ಮಾಡುವುದಾಗಿ ನನಗೆ ಬೆದರಿಕೆ ಹಾಕಿದ್ದಾರೆ ಎಂದು ಶಾಸಕ ಟಿ.ಡಿ ರಾಜೇಗೌಡ ಹೇಳಿದ್ದಾರೆ.
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಈ ಕುರಿತು ಮಾತನಾಡಿದ್ದಾರೆ. ಜನರ ಬದುಕಿಗೆ ಆತಂಕ ಎದುರಾಗಿರುವುದರಿಂದಅನಿವಾರ್ಯವಾಗಿ ಬೆದರಿಕೆ ಹಾಕಿದ್ದಾರೆ. ಸರ್ಕಾರ ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು, ಆಗ ಮಾತ್ರ ಪರಿಹಾರ ಸಿಗುತ್ತದೆ, ನಮಗೆ ಯಾವ ಬೆದರಿಕೆ ಕೂಡ ಬರೋದಿಲ್ಲ ಎಂದರು.
ನನಗೆ ಜೀವ ಬೆದರಿಕೆಯಿದೆ. ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ, ಬೆದರಿಕೆ ಹಾಕಿದವರ ಹೆಸರು ಹೇಳಲ್ಲಅವರ ವಿರುದ್ಧ ದೂರು ಕೂಡ ದಾಖಲಿಸಲ್ಲ ಎಂದರು.
ಶೃಂಗೇರಿ ತಾಲೂಕಿನ ಹಾದಿಕೆರೂರು ಸರ್ವೆ ನಂಬರ್ 11 ರಲ್ಲಿ 1090 ಎಕರೆ ಪ್ರದೇಶದಲ್ಲಿ 726 ಎಕರೆ ಅರಣ್ಯ, 328 ಎಕರೆ ಗೋಮಾಳವಿದೆ. ಹಾದಿ ಗ್ರಾಮದ ಸರ್ವೆ ನಂಬರ್ 2 ರಲ್ಲಿ 971 ಎಕರೆ ಪ್ರದೇಶದಲ್ಲಿ 734 ಎಕರೆ ಕಾಡು, 234 ಎಕರೆ ಕಾನು ಇದೆ. ತಹಶೀಲ್ದಾರ್ ಅವರು ಮೋಜಣಿ ಮತ್ತುಅರಣ್ಯ ಇಲಾಖೆಯವರಿಗೆ ಪತ್ರ ಬರೆದಿದ್ದಾರೆ. ಆದರೆ ಇದುವರೆಗೆ ಮೋಜಣಿ ಮಾಡಿಲ್ಲ. ಗೋಮಾಳ, ಕಾನು ಪ್ರದೇಶವನ್ನು ಅರಣ್ಯಕ್ಕೆ ಸೇರಿಸುವ ಪ್ರಯತ್ನ ನಡೆದಿದೆ ಎಂದು ಶೃಂಗೇರಿ ಭಾಗದ ಜನರು ಆತಂಕಗೊಂಡಿದ್ದಾರೆ ಎಂದು ರಾಜೇಗೌಡರು ಹೇಳಿದರು.
ಬೆಂಗಳೂರು ಜನತೆಗೆ ಗುಡ್ ನ್ಯೂಸ್ : ಟ್ರಾಫಿಕ್ ಕಿರಿಕಿರಿಗೆ ‘ಗುಡ್ ಬೈ’ ಹೇಳಿ ಹೆಲಿಕಾಪ್ಟರ್ ನಲ್ಲೇ ಹಾರಾಡಿ..!