ನಾಸಿಕ್: ಐಟಿ ದೈತ್ಯ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನಾಸಿಕ್ ಶಾಖೆಯ ಉದ್ಯೋಗಿಯೊಬ್ಬರು ತಮ್ಮ ಮ್ಯಾನೇಜರ್ ವಿರುದ್ಧ ಮಾಡಿರುವ ಲೈಂಗಿಕ ಮತ್ತು ಮಾನಸಿಕ ಕಿರುಕುಳದ ಆರೋಪಗಳು ಈಗ ಇಡೀ ಕಾರ್ಪೊರೇಟ್ ವಲಯದಲ್ಲಿ ತಲ್ಲಣ ಮೂಡಿಸಿವೆ. ರಜೆ ಕೇಳಿದ ಸಂದರ್ಭದಲ್ಲಿ ಮ್ಯಾನೇಜರ್ ನೀಡಿದ್ದಾರೆ ಎನ್ನಲಾದ ಅಶ್ಲೀಲ ಪ್ರತಿಕ್ರಿಯೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಾಧಿತ ಉದ್ಯೋಗಿಯು ತನಗೆ ಮಗು ಬೇಕಾಗಿದ್ದು, ಅದಕ್ಕಾಗಿ ಪತ್ನಿಯೊಂದಿಗೆ ವೈದ್ಯಕೀಯ ಚಿಕಿತ್ಸೆ ಪಡೆಯಲು ರಜೆ ನೀಡುವಂತೆ ಮ್ಯಾನೇಜರ್‌ಗೆ ವಿನಂತಿಸಿದ್ದರು. ಈ ವೇಳೆ ಮ್ಯಾನೇಜರ್ ಅತ್ಯಂತ ಕೆಟ್ಟದಾಗಿ ವರ್ತಿಸಿ, ಅಮಾನವೀಯ ಮಾತುಗಳನ್ನಾಡಿದ್ದಾರೆ ಎಂದು ಉದ್ಯೋಗಿ ದೂರಿದ್ದಾರೆ.
ಉದ್ಯೋಗಿಯು ತನ್ನ ದೂರಿನಲ್ಲಿ ಮ್ಯಾನೇಜರ್ ಆಡಿದ ಮಾತನ್ನು ಈ ರೀತಿ ಉಲ್ಲೇಖಿಸಿದ್ದಾರೆ:
”ನಿನಗೆ ಮಗು ಬೇಕಿದ್ದರೆ ನಿನ್ನ ಹೆಂಡತಿಯನ್ನು ನನ್ನ ಹತ್ತಿರ ಕಳುಹಿಸು, ನಾನು ಅವಳಿಗೆ ಮಗು ನೀಡುತ್ತೇನೆ.”
ಈ ಮಾತಿನಿಂದ ತೀವ್ರ ಆಘಾತಕ್ಕೊಳಗಾದ ಉದ್ಯೋಗಿ, ಕಳೆದ ಒಂದು ವರ್ಷದಿಂದ ತಾನು ಅನುಭವಿಸುತ್ತಿರುವ ಕಿರುಕುಳವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ದೂರಿನಲ್ಲಿರುವ ಇತರ ಪ್ರಮುಖ ಅಂಶಗಳು:
ಮ್ಯಾನೇಜರ್ ತನ್ನ ವಿರುದ್ಧ ಜಾತಿನಿಂದನೆ ಮಾಡುತ್ತಿದ್ದಾರೆ ಮತ್ತು ಪದೇ ಪದೇ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ ಎಂದು ಉದ್ಯೋಗಿ ಆರೋಪಿಸಿದ್ದಾರೆ.ರಜೆ ನೀಡದೆ ಇರುವುದು, ಕೆಲಸದ ವಿಚಾರದಲ್ಲಿ ಅನಗತ್ಯ ಒತ್ತಡ ಹೇರುವುದು ಮತ್ತು ಸಾರ್ವಜನಿಕವಾಗಿ ಅವಮಾನ ಮಾಡುವುದು ಮ್ಯಾನೇಜರ್ ಚಾಳಿಯಾಗಿದೆ ಎಂದು ದೂರಿದ್ದಾರೆ.
ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಟಿಸಿಎಸ್ ಸಂಸ್ಥೆ, “ನಾವು ಇಂತಹ ವರ್ತನೆಯನ್ನು ಸಹಿಸುವುದಿಲ್ಲ. ಆಂತರಿಕ ತನಿಖಾ ಸಮಿತಿ (ICC) ಈಗಾಗಲೇ ತನಿಖೆ ಆರಂಭಿಸಿದೆ,” ಎಂದು ತಿಳಿಸಿದೆ.








