ತಮಿಳುನಾಡು: ಜ್ಯೋತಿಷಿ ಕೊಟ್ಟ ಸಲಹೆಯಿಂದ ರೈತನೊಬ್ಬ ತನ್ನ ನಾಲಿಗೆ ಕಳೆದುಒಂಡಿರುವ ಘಟನೆ ತಮಿಳುನಾಡಿನಲ್ಲಿ ಈರೋಡ್ನಲ್ಲಿ ನಡೆದಿದೆ.
ಕಾಪಿಚೆಟ್ಟಿಪಾಳ್ಯಂನ 54 ವರ್ಷದ ರಾಜಾ ಎಂಬ ವ್ಯಕ್ತಿಗೆ ಆಗಾಗ್ಗೆ ಕನಸಿನಲ್ಲಿ ಹಾವು ಕಾಣಿಸಿಕೊಳ್ಳುತ್ತಿತ್ತು. ಹೀಗಾಗಿ, ರಾಜಾ ಜ್ಯೋತಿಷಿಯನ್ನು ಸಂಪರ್ಕಿಸಿದ್ದಾನೆ. ಇದಕ್ಕೆ ಪರಿಹಾರವೆಂಬಂತೆ, ಜ್ಯೋತಿಷಿಯು ರಾಜನಿಗೆ ಹಾವಿನ ದೇವಸ್ಥಾನಕ್ಕೆ ಹೋಗಿ ಕೆಲವು ಆಚರಣೆಗಳನ್ನು ಮಾಡಿ ಕೆಟ್ಟ ಕನಸುಗಳಿಗೆ ಪರಿಹಾರವಾಗಿ ಸಲಹೆ ನೀಡಿದರು. ಜ್ಯೋತಿಷಿ ಸಲಹೆಯಂತೆ, ರಾಜ ದೇವಸ್ಥಾನಕ್ಕೆ ಹೋಗಿ ವಿಧಿವಿಧಾನಗಳನ್ನು ಪೂರೈಸಿದನು. ಇದೇ ವೇಳೆ, ರಾಜ ಕೊಳಕು ಮಂಡಲ ಹಾವಿನ ಮುಂದೆ ಮಂಡಿಯೂರಿ ಮೂರು ಬಾರಿ ತನ್ನ ನಾಲಿಗೆಯನ್ನು ಮುಂದಕ್ಕೆ ಚಾಚಿದ್ದಾನೆ. ಈ ವೇಳೆ, ಈ ವಿಷಕಾರಿ ಹಾವು ಅವನ ನಾಲಿಗೆಯನ್ನು ಕ್ಷಣಾರ್ಧದಲ್ಲಿ ಕಚ್ಚಿದೆ.
ಇದನ್ನು ಕಂಡ ದೇವಸ್ಥಾನದ ಅರ್ಚಕರು ಕೂಡಲೇ ನಾಲಿಗೆಯನ್ನು ಕತ್ತರಿಸಿ ಈರೋಡ್ ಮಣಿಯನ್ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವಾಗ ರಾಜ ಪ್ರಜ್ಞೆ ತಪ್ಪಿ ಬಿದ್ದಿದ್ದ.
ಮಣಿಯನ್ ಮೆಡಿಕಲ್ ಸೆಂಟರ್ನ ವ್ಯವಸ್ಥಾಪಕ ನಿರ್ದೇಶಕ ಸೆಂಥಿಲ್ ಕುಮಾರನ್ ಮಾತನಾಡಿ, ವೈದ್ಯರು ರಾಜಾ ಅವರ ನಾಲಿಗೆ ಕತ್ತರಿಸಿದ ಕಾರಣ ಚಿಕಿತ್ಸೆ ಮತ್ತು ದೇಹದಲ್ಲಿದ್ದ ಹಾವಿನ ವಿಷಕ್ಕೆ ಚಿಕಿತ್ಸೆ ನೀಡಲಾಗಿದೆ ಎಮದು ಮಾಹಿತಿ ನೀಡಿದ್ದಾರೆ.
ಗ್ರಾಹಕರೇ ಗಮನಿಸಿ: ಡಿಸೆಂಬರ್ 1 ರಿಂದ ಬದಲಾಗಲಿವೆ ಈ ನಿಯಮಗಳು | New Rule From December 1st
ʻಪಂಜಾಬ್ ನ್ಯಾಷನಲ್ ಬ್ಯಾಂಕ್ʼ ಗ್ರಾಹಕರ ಗಮನಕ್ಕೆ: ಡಿ. 12 ರೊಳಗೆ KYC ಅಪ್ಡೇಟ್ ಮಾಡುವಂತೆ ಸೂಚನೆ
ಅಸ್ಸಾಂ: ʻಐರನ್ ಫೋಲಿಕ್ ಆಸಿಡ್ ಮಾತ್ರೆʼ ಸೇವಿಸಿ 50 ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು
ಗ್ರಾಹಕರೇ ಗಮನಿಸಿ: ಡಿಸೆಂಬರ್ 1 ರಿಂದ ಬದಲಾಗಲಿವೆ ಈ ನಿಯಮಗಳು | New Rule From December 1st