‘ಅಣ್ಣಾಮಲೈ ಅವರ ಮತ್ತೊಂದು ಮುಖ ಬಹಿರಂಗ ಪಡಿಸುವಂತಹ ವಿಡಿಯೋ & ಆಡಿಯೋ ನನ್ನ ಬಳಿಯಿದೆ ಎಂದು, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ವಿರುದ್ಧ ತಮಿಳು ನಟಿಯೊಬ್ಬರು ಗಂಭೀರ ಆರೋಪಿದ ವಿಚಾರ ಬೆಳಕಿಗೆ ಬಂದಿದೆ
ಇದೀಗ ಮುಂದಿನ ಚುನಾವಣೆಗೆ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಭಾರೀ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಅಣ್ಣಾಮಲೈ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮದೇ ಆದ ರೀತಿಯ ಪಕ್ಷವನ್ನು ಕಟ್ಟುತ್ತಿದ್ದಾರೆ. ಈ ಬೆನ್ನಲ್ಲೆ ತಮಿಳು ನಟಿ ಗಾಯತ್ರಿ ರಘುರಾಮ್ ಎಂಬವರು ಎರಡು ದಿನಗಳ ಹಿಂದೆ ಟ್ವೀಟ್ ಮಾಡುವ ಮೂಲಕ ಕರ್ನಾಟಕದಲ್ಲಿ ಸಿಂಗಂ ಎಂದೇ ಖ್ಯಾತರಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಮೇಲೆ ಆರೋಪ ಮಾಡಿದ್ದಾರೆ.
ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕಳಪೆ ವ್ಯಕ್ತಿತ್ವವನ್ನು ಹೊಂದಿದರು. ಅಣ್ಣಾಮಲೈ ನಾಯಕತ್ವದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ . ಆ ಕುರಿತ ವಿಡಿಯೋ ಮತ್ತು ಆಡಿಯೋ ನನ್ನ ಬಳಿ ಇವೆ. ಅವುಗಳನ್ನು ಪೊಲೀಸರಿಗೆ ನೀಡಲು ನಾನು ಸಿದ್ದನಿದ್ದೇನೆ. ಈ ಎಲ್ಲಾ ಕಾರಣದಿಂದಾಗಿಯೇ ನಾನು ಬಿಜೆಪಿಯನ್ನೂ ತೊರೆಯುತ್ತಿರುವುದಾಗಿ ಗಂಭೀರ ಆರೋಪ ಮಾಡಿದ್ದಾರೆ.