ರಾಮನಗರ: ಮಠ ಬಿಟ್ಟು ಪ್ರೀತಿಸಿದ ಹುಡುಗಿ ಜೊತೆಗೆ ಸ್ವಾಮಿಜಿಯೊಬ್ಬರು ಎಸ್ಕೇಪ್ ಆಗಿರೋ ಘಟನೆ ಮಾಗಡಿ ತಾಲೂಕಿನ ಸೋಲೂರಿನಲ್ಲಿ ನಡೆದಿದೆ. “ನಾನು ಮಠ ಬಿಟ್ಟು ಹೋಗುತ್ತಿದ್ದೇನೆ. ಮತ್ತೆ ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ’ ಎಂದು ಮಾಗಡಿ ತಾಲೂಕಿನ ಸೋಲೂರಿನ ಗದ್ದುಗೆ ಮಠದ ಶಿವಮಹಂತ ಸ್ವಾಮೀಜಿ ಪತ್ರ ಬರೆದು ಹೋಗಿದ್ದಾರೆ ಎನ್ನಲಾಗಿದೆ.
ಒಂದೂವರೆ ತಿಂಗಳಾಗಿದ್ದ ಯುವತಿ ಒಬ್ಬಳ ಜೊತೆಗೆ ಸ್ವಾಮೀಜಿ ಓಡಿ ಹೋಗಿದ್ದಾರೆ ಎನ್ನಲಾಗಿದ್ದು, ಸ್ವಾಮೀಜಿ ಮಠದಿಂದ ತೆರಳುವ ಮುನ್ನ ಪತ್ರವೊಂದನ್ನು ಬರೆದಿರುವುದು ಈಗ ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ಪತ್ರದಲ್ಲಿ ಇರೋದು ಏನು
ನಾನು ನನ್ನ ಸ್ವಾಮೀಜಿ ಜೀವನ ತ್ಯಜಿಸುತ್ತಿದ್ದೇನೆ. ಕಾರಣ ನನ್ನ ಜೀವನದಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಈ ಕಾರಣಕ್ಕಾಗಿ ನಾನು ಇದನ್ನೆಲ್ಲಾ ಬಿಟ್ಟು ದೂರ ಹೋಗುತ್ತಿದ್ದೇನೆ. ನನಗೆ ಈ ಜೀವನ ಜಿಗುಪ್ಸೆ ಉಂಟು ಮಾಡಿದೆ. ಈ ಕಾರಣ ನಿಮಗೆಲ್ಲ ಗೊತ್ತಿದೆ ಅಂತ ಭಾವಿಸುತ್ತೇನೆ. ದಯವಿಟ್ಟು ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ. ನಾನು ಕಾವಿ ಬಟ್ಟೆಯನ್ನು ತ್ಯಜಿಸಿದ ಮೇಲೆ ಮತ್ತೆಂದೂ ತೊಡುವುದಿಲ್ಲ. ಹಾಗೇನಾದರೂ ನನ್ನನ್ನು ಹುಡುಕುವ ಪ್ರಯತ್ನ ಮಾಡಿದರೆ ನನ್ನ ಹೆಣವನ್ನು ನೀವು ನೋಡುತ್ತೀರಿ.
ನಾನು ಕೇಳುವುದು ಏನೇಂದ್ರೆ ನನ್ನನ್ನ ನನ್ನ ಪಾಡಿಗೆ ಬಿಟ್ಟು ಬಿಡಿ. ಎಲ್ಲೂ ಹೇಗೋ ನೆಮ್ಮದಿಯಗಿ ಇರುತ್ತೇನೆ. ಆದರೆ ಮತ್ತೆ ನನ್ನ ಈ ಜೀವನಕ್ಕೆ ತರಬೇಡಿ ತಂದಿದ್ದೇ ಆದರೆ ನೀವು ನನ್ನ ಸಾವನ್ನು ನೋಡಬೇಕಾಗುತ್ತದೆ