ಕೊಳ್ಳೇಗಾಲ: ಮೈಸೂರಲ್ಲಿ 9 ವರ್ಷದ ಬಾಲಕಿ ಕೊಲೆ ಪ್ರಕರಣದ ಶಂಕಿತ ಆರೋಪಿಯನ್ನು ಕೊಳ್ಳೇಗಾಲದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
9 ವರ್ಷದ ಬಾಲಕಿಯನ್ನು ಕೊಲೆ ಮಾಡಿದ್ದ ಬಳಿಕ ಮೈಸೂರಿನಿಂದ ಕೊಳ್ಳೇಗಾಲಕ್ಕೆ ಆರೋಪಿ ಕಾರ್ತಿಕ್ ಹೋಗಿದ್ದನು. ಸಿಸಿಟಿವಿ ದೃಶ್ಯ ಆಧರಿಸಿ ವಶಕ್ಕೆ ಪೊಲೀಸರು ಪಡೆದಿದ್ದಾರೆ. ಮೈಸೂರಿನ ಸಿದ್ದಲಿಂಗಪುರ ನಿವಾಸಿ ಕಾರ್ತಿಕ್ ಬಂಧಿತ ಆರೋಪಿಯಾಗಿದ್ದಾನೆ.
ಮಂಡ್ಯದಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಆರೋಪಿ ಕಾರ್ತಿಕ್ ಯತ್ನಿಸಿದ್ದನು. ಅತ್ಯಾಚಾರಕ್ಕೆ ಯತ್ನಿಸಿ ಆರೋಪಿ ಕಾರ್ತಿಕ್ ಸಿಕ್ಕಿಬಿದ್ದಿದ್ದನು. ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದನು. ಶಂಕಿತ ಆರೋಪಿ ಕಾರ್ತಿಕ್ ಮದ್ಯವ್ಯಸನಿಯಾಗಿದ್ದನು.
CRIME NEWS: ವಿಜಯಪುರದಲ್ಲಿ SBI ಬ್ಯಾಂಕ್ ದರೋಡೆ ಪ್ರಕರಣದ ಮೂವರು ಆರೋಪಿಗಳು ಅರೆಸ್ಟ್