ನವದೆಹಲಿ : ಇಂದು ಸುಪ್ರೀಂ ಕೋರ್ಟ್ ನಿಂದ ( Supreme Court ) ಪೆನ್ನಾರ (ದಕ್ಷಿಣ ಪಿನಾಕಿನಿ) ನದಿಯ ಕಣಿವೆ ಕುರಿತಂತೆ ಸಲ್ಲಿಕೆಯಾಗಿದ್ದಂತ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿತು. ಈ ಬಳಿಕ ವಿಚಾರಣೆಯನ್ನು ಡಿಸೆಂಬರ್ 14, 2022ಕ್ಕೆ ಮುಂದೂಡಿಕೆ ಮಾಡಿದೆ.
ಮೊದಲ ಬಾರಿಗೆ ‘ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ’ಗೆ ‘ರೋಬೊಟಿಕ್ ತಂತ್ರಜ್ಞಾನ’ ಪರಿಚಯಿಸಿದ ‘ಫೋರ್ಟಿಸ್ ಆಸ್ಪತ್ರೆ’
ಪೆನ್ನಾರ್ ನದಿಯ ಕಣಿವೆಯಲ್ಲಿ ಕರ್ನಾಟಕ ರಾಜ್ಯವು ಕೈಗೊಂಡಿರುವ ಮಾರ್ಕಾಂಡೇಯ ನದಿಗೆ ಅಡ್ಡಲಾಗಿ ಚೆಕ್ ಡ್ಯಾಂ, ಯಲ್ಲಮಲ್ಲಪ್ಪ ಚೆಟ್ಟಿ ಕೆರೆಯಿಂದ ಹೊಸಕೋಟೆ ಕೆರೆಯವರೆಗೆ ಕಾಮಗಾರಿ ಚಟುವಟಿಕೆ, ಬ್ಯಾಳಹಳ್ಳಿ ಗ್ರಾಮದ ಹತ್ತಿರ ಪೊನ್ನೆಯಾರ್ ನದಿಯಿಂದ ನೀರು ಹರಿಸುವ ಕಾಮಗಾರಿ ಇತ್ಯಾದಿಗಳಿಗೆ ಸಂಬಂಧಿಸಿದಂತೆ ತಮಿಳುನಾಡು ರಾಜ್ಯವು ಕರ್ನಾಟಕ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ದಿನಾಂಕ:18.05.2018ರಂದು ಸರ್ವೋಚ್ಛ ನ್ಯಾಯಾಲಯದಲ್ಲಿ ಮೂಲದಾವೆ ಸಲ್ಲಿಸಲಾಗಿರುತ್ತದೆ. ಈ ದಾವೆಗೆ ಸಂಬಂಧಿಸಿದಂತೆ ಕರ್ನಾಟಕವು ತನ್ನ ಲಿಖಿತ ಆಕ್ಷೇಪಣೆಗಳ ಹೇಳಿಕೆಯನ್ನು ದಾಖಲಿಸಿದೆ. ಇದಕ್ಕೆ ಪ್ರತ್ಯುತ್ತರವಾಗಿ ತಮಿಳುನಾಡು ರಾಜ್ಯವು ಸಲ್ಲಿಸಿದ ಪ್ರತಿ ಹೇಳಿಕೆಗೆ (Rejoinder) ಕರ್ನಾಟಕವು ತನ್ನ ಮರು ಪ್ರತ್ಯುತ್ತರವನ್ನು ಸಲ್ಲಿಸಿತ್ತು.
ಇಂದು ಈ ಪ್ರಕರಣವು ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿತ್ತು. ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಶ್ರೀಮತಿ ಐಶ್ವರ್ಯಾ ಭಟ್ ಅವರು ದಕ್ಷಿಣ ಪಿನಾಕಿನಿ ನದಿಯ ಪೆನ್ನಾರ್ ಕಣಿವೆಗೆ ಸಂಬಂಧಪಟ್ಟಂತೆ ಚರ್ಚಿತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾತುಕತೆಗೆ ಸಮಿತಿಗೆ (Negotiation Committee) ಒಪ್ಪಿಸಲಾಗಿದ್ದು, ಟ್ರಿಬ್ಯುನಲ್ ರಚನೆ ಕುರಿತಂತೆ ಕೇಂದ್ರ ಸರ್ಕಾರವು ಅಂತಿಮ ನಿರ್ಣಯ ಕೈಗೊಳ್ಳಬೇಕಾಗಿರುವುದರಿಂದ ನಾಲ್ಕು ವಾರಗಳ ಕಾಲಾವಕಾಶ ಕೇಳಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಕರಣ ವಿಚಾರಣೆಯನ್ನು 14.12.2022ಕ್ಕೆ ಸರ್ವೋಚ್ಛ ನ್ಯಾಯಾಲಯ ಮುಂದೂಡಿಕೆ ಮಾಡಿದೆ.
‘ಟಿಕೆಟ್ ನೀಡದಿದ್ದರೂ, ಕಾರ್ಯಕರ್ತನಾಗಿ ನಿಷ್ಠೆಯಿಂದ ಪಕ್ಷಕ್ಕೆ ದುಡಿಯುತ್ತೇನೆ’ : ಮಾಜಿ ಸಚಿವ K.S ಈಶ್ವರಪ್ಪ
ಈಗಾಗಲೇ ಈ ಸಮಿತಿಯು ಎರಡು ಸಭೆಗಳನ್ನು ನಡೆಸಿದ್ದು, ಈ ಪ್ರಕರಣದಲ್ಲಿ ನ್ಯಾಯಾಧೀಕರಣ ರಚನೆಯ ಅವಶ್ಯಕತೆ ಇಲ್ಲವೆಂದು, ಕೇಂದ್ರ ಸರ್ಕಾರದ ಸಮಿತಿಯ ಮುಂದೆ ಕರ್ನಾಟಕವು ತನ್ನ ನಿಲುವನ್ನು ಪ್ರತಿಪಾದಿಸಿದೆ. ಈ ನಿಲುವನ್ನೇ ರಾಜ್ಯವು ಮುಂದುವರೆಸುತ್ತದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.