ಕೊಪ್ಪಳ: ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯ ( Karnataka Assembly Election 2023 ) ಬಳಿಕ, ರಾಜ್ಯದಲ್ಲಿ ನಾನೇ ಸಿಎಂ ಆಗುತ್ತೇನೆ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ( Former CM HD Kumaraswamy ) ಹೇಳಿದ್ದರು. ಈ ಮೂಲಕ ಮುಂದೆಯೂ ಸಿಎಂ ಆಗಲಿದ್ದಾನೆ ಎಂಬುದಾಗಿ ಹೇಳಿದ್ದರು. ಈ ನಡುವೆ 2023ಕ್ಕೆ ಕುಮಾರಸ್ವಾಮಿಗೆ ಬೆಂಬಲಿಸಿ ಎಂಬುದಾಗಿ ಅಭಿಮಾನಿಯೊಬ್ಬ ಲಕ್ಷ್ಮೀ ಪೋಟೋ ಜೊತೆಗೆ ಹೆಚ್ ಡಿಕೆ ಪೋಟೋವಿಟ್ಟು ಪೂಜಿಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಐಫೋನ್ ಬಳಕೆದಾರರೇ ಎಚ್ಚರ ; ‘ಹೆಚ್ಚಿನ ಅಪಾಯ’ದ ಎಚ್ಚರಿಕೆ ನೀಡಿದೆ ಸರ್ಕಾರ ; ಏನು ಮಾಡ್ಬೇಕು.? ಇಲ್ಲಿದೆ ಮಾಹಿತಿ
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಡೇಕೊಪ್ಪ ಗ್ರಾಮದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರ ಅಭಿಮಾನಿಯಾಗಿರುವಂತ ನಿಂಗಪ್ಪ ವಿ ಜಿಗೇರಿ ಎಂಬಾತನೇ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಪೋಟೋವನ್ನು ಲಕ್ಷ್ಮೀ ಪೂಜೆ ವೇಳೆ ದೇವರ ಕೋಣೆಯಲ್ಲಿ ಇಟ್ಟು ಪೂಜಿಸಿದ್ದಾರೆ.
ರಾಜ್ಯ ಸರ್ಕಾರದಿಂದ ‘ಆಶಾ ಕಾರ್ಯಕರ್ತೆ’ಯರಿಗೆ ದೀಪಾವಳಿ ಗಿಫ್ಟ್: ‘1 ಸಾವಿರ ಗೌರವಧನ’ ಹೆಚ್ಚಳ, ಅನುದಾನ ಬಿಡುಗಡೆ
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯರ ಪೋಟೋ ಹಾಗೂ ಅದರ ಮೇಲೆ 2023ರ ಚುನಾವಣೆಯಲ್ಲಿ ಹೆಚ್ ಡಿ ಕುಮಾರಸ್ವಾಮಿಗೆ ಬೆಂಬಲಿಸುವಂತೆ ದೇವರನ್ನು ಕೋರಿಕೊಂಡಿದ್ದಾರೆ. ಅಲ್ಲದೇ ರೈತರ ಬಗ್ಗೆ ಕಾಳಜಿ ಇರುವ ಏಕೈಕ ವ್ಯಕ್ತಿ ಅಂದರೇ ಇವರು, ಎಲ್ಲಾ ಪಕ್ಷದವರಿಗೆ ಒಂದು ಬಾರಿ ಅವಕಾಶ ಮಾಡಿಕೊಟ್ಟಿದ್ದೀರಿ. ಈ ಭಾರೀ ಪ್ರಾದೇಶಿಕ ಪಕ್ಷಕ್ಕೆ ಅವಕಾಶ ಮಾಡಿಕೊಡುವಂತೆ ಪೂಜೆ ಮಾಡಿದ್ದಾರೆ.
ರೂಪಾಯಿ ಕುಸಿತಕ್ಕೆ ಕೇಜ್ರಿವಾಲ್ ಪರಿಹಾರ, ಕರೆನ್ಸಿ ನೋಟುಗಳ ಮೇಲೆ ಲಕ್ಷ್ಮಿ-ಗಣೇಶ ಮುದ್ರಿಸಲು ಮನವಿ