ವಿಜಯಪುರ : ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ ಗ್ರಾಮದಲ್ಲಿ ದಂಡಿನ ದುರ್ಗಮ್ಮದೇವಿ ಕಡೆ ಕಾರ್ತಿಕೋತ್ಸವ ದಿನ ಪ್ರಯುಕ್ತ ದಾರಿಯುದ್ದಕ್ಕೂ ಮಲಗಿಕೊಂಡ ಭಕ್ತರ ಮೇಲೆ ದಲಿತ ಇಬ್ಬರು ಪೂಜಾರಿಗಳು ನಡೆದಾಡುತ್ತಾ ಸಾಗುವ ವಿಚಿತ್ರ ಆಚರಣೆ ಬೆಳಕಿಗೆ ಬಂದಿದೆ
ದಂಡಿನ ದುರ್ಗಮ್ಮದೇವಿ ಕಡೆ ಕಾರ್ತಿಕೋತ್ಸವ ಜಾತ್ರಾಮಹೋತ್ಸವದ ದಿನವಾದ ಇಂದು ಬೆಳಗ್ಗಿ ಜಾವ 5ನ ಗಂಟೆಗೆ ಉತ್ಸವ ಮೂರ್ತಿಯನ್ನು 1.5 ಕಿ.ಮೀ. ದೂರವಿರುವ ಹೊಂಡಕ್ಕೆ ಭಜನೆ, ಮಂಗಳವಾದ್ಯಗಳೊಂದಿಗೆ ಗಂಗಾ ಪೂಜೆಗೆ ದುಗ್ಗಮ್ಮನ ಕಟ್ಟೆಗೆ ಕರೆದೊಯ್ದಲಾಗುತ್ತದೆ ಬಳಿಕ ದೇವರ ಕೇಲು ( ಪೂಜಾ ಸಾಮಾಗ್ರಿ ಉಳ್ಳ ಮಡಿಕೆ) ಹೊತ್ತ ದಲಿತ ಭಕ್ತರ ಬೆನ್ನ ಮೇಲೆ ಹೆಚ್ಚಿ ಹಾಕುವ ಆಚರಣೆಯಿಂದ ಭಕ್ತರಿಗೆ ಕೃತಜ್ಞತಾ ಭಾವ ಕಂಡು ಕೊಳ್ಳುತ್ತಾರೆ. ಇನ್ನೂ ಈ ಜಾತ್ರೋತ್ಸವಕ್ಕೆ ಬರುವ ಭಕ್ತರು ಹರಕೆ ರೂಪದಲ್ಲಿ ನೀಡುವ ಅಕ್ಕಿ, ಹಾಲು, ಮೊಸರು ಬಳಸಿ, ಪ್ರಸಾದ ತಯಾರಿಸಲಾಗುತ್ತದೆ. ದೇವಸ್ಥಾನದ ಆವರಣದಲ್ಲಿ ದುರ್ಗಿಯರ ಊಟ ಎನ್ನುವ ಭಾವನೆಯಿಂದ ಯಾವುದೇ ಭೇದಭಾವವಿಲ್ಲದೇ ಈ ಆಚರಣೆಯಲ್ಲಿ ತೊಡಗುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ