Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

JOB ALERT: ಭಾರತೀಯ ರೈಲ್ವೇ ಇಲಾಖೆಯಲ್ಲಿ 6,565 ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ |RRB Recruitment 2026

SHOCKING : ಮಹಿಳೆಯರಿಗಿಂತ ಭಾರತೀಯ ಪುರುಷರೇ `ಕ್ಯಾನ್ಸರ್’ಗೆ ಹೆಚ್ಚು ಬಲಿ : ಆಘಾತಕಾರಿ ವರದಿ ಬಹಿರಂಗ.!

ರಾಜ್ಯದ ಗ್ರಾ. ಪಂ.ಬಿಲ್ ಕಲೆಕ್ಟರ್ ಗಳಿಗೆ ನೆಮ್ಮದಿ ಸುದ್ದಿ : ಸರ್ಕಾರಿ ರಜೆ ದಿನಗಳಲ್ಲಿ ತೆರಿಗೆ ವಸೂಲಾತಿ ಕರ್ತವ್ಯಕ್ಕೆ ಆದೇಶಿಸದಂತೆ ಸರ್ಕಾರ ನಿರ್ದೇಶನ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವೃತ್ತಿಯಲ್ಲಿ ಪ್ರಾಮಾಣಿಕತೆ, ನೈತಿಕೆ ರೂಢಿಸಿಕೊಂಡರೆ ಯಶಸ್ಸು ಸಾಧ್ಯ: ಎಐಸಿಟಿಇ ಮಾಜಿ ಅಧ್ಯಕ್ಷ ಅನಿಲ್ ಸಹಸ್ರಬುಧೆ
KARNATAKA

ವೃತ್ತಿಯಲ್ಲಿ ಪ್ರಾಮಾಣಿಕತೆ, ನೈತಿಕೆ ರೂಢಿಸಿಕೊಂಡರೆ ಯಶಸ್ಸು ಸಾಧ್ಯ: ಎಐಸಿಟಿಇ ಮಾಜಿ ಅಧ್ಯಕ್ಷ ಅನಿಲ್ ಸಹಸ್ರಬುಧೆ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: “ವೃತ್ತಿ ಯಾವುದೇ ಇರಲಿ. ಮೇಲು- ಕೀಳು ಎಂಬ ಮನೋಭಾವ ಬಿಟ್ಟುಬಿಡಿ. ಪ್ರಾಮಾಣಿಕತೆ, ನೈತಿಕೆ ಉಳಿಸಿಕೊಂಡಲ್ಲಿ ವೃತ್ತಿಯಲ್ಲಿ ಯಶಸ್ಸು ಕಾಣಬಹುದು ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತಿನ (ಎಐಸಿಟಿಇ) ಮಾಜಿ ಅಧ್ಯಕ್ಷ ಅನಿಲ್ ಸಹಸ್ರಬುಧೆ ಹೇಳಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಆಯೋಜಿಸಿದ್ದ ಮಾಸಿಕ ಉಪನ್ಯಾಸ ಕಾರ್ಯಕ್ರಮದಲ್ಲಿ `ಸಾರ್ವತ್ರಿಕ ಮಾನವೀಯ ಮೌಲ್ಯ’ ವಿಷಯ ಕುರಿತು ಮಾತನಾಡಿದ ಅವರು, “ವೃತ್ತಿಯಲ್ಲಿ ಮೇಲು- ಕೀಳು ಎಂಬುದು ಇಲ್ಲ. ವೃತ್ತಿಯಾವುದೇ ಇರಲಿ ಅದಕ್ಕೆ ಗೌರವ ನೀಡುವುದನ್ನು ನೀವು ಕಲಿಯಬೇಕು. ಅದು ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯಲು ಸಹಾಯ ಮಾಡಲಿದೆ ಎಂದರು.

ವಿದ್ಯಾರ್ಥಿಗಳು ಘಟಿಕೋತ್ಸವದ ವೇಳೆ ಸತ್ಯದಿಂದ ನಡೆಯುತ್ತೇನೆ ಎಂದು ಪ್ರತಿಜ್ಞಾ ವಿಧಿ ಸ್ವೀಕರಿಸುತ್ತೀರಿ, ಇದನ್ನು ನಿಮ್ಮ ಜೀವನದಲ್ಲಿ ರೂಢಿಸಿಕೊಂಡು ಹೋಗಬೇಕು. ಅಲ್ಲದೆ, ನೀವು ಜೀವನದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಪಿ.ಎಚ್.ಡಿ ಗೆ ನಿಮ್ಮ ಕಲಿಕೆ ಮುಗಿಯಿತು ಎಂದು ಭಾವಿಸುವುದು ತಪ್ಪು. ಕಲಿಕೆ ಎಂಬುದು ಜೀವನದಲ್ಲಿ ನಿರಂತರ. ಶಿಕ್ಷಕರು ಸಹ ಪ್ರತಿನಿತ್ಯ ಅಪ್ಡೇಟ್ ಆಗಬೇಕು. ಏಕೆಂದರೆ, ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ವಿದ್ಯಾರ್ಥಿಗಳಿಗೆ ಕಾಲಕ್ಕೆ ಅನುಗುಣವಾಗಿ ಬೋಧನೆ ಮಾಡಬೇಕಾದಲ್ಲಿ ಶಿಕ್ಷಕರು ಸಹ ಅಪ್ಡೇಟ್ ಆಗಬೇಕು” ಎಂದು ಸಲಹೆ ನೀಡಿದರು.

“ನಾವು ಪ್ರಕೃತಿಗೆ ವಿರುದ್ಧವಾಗಿ ನಡೆಯಬಾರದು. ಉಚಿತವಾಗಿ ಬೆಳಕು, ನೀರು, ಗಾಳಿ ಸಿಗುತ್ತಿದೆ. ನಾವು ಪ್ರತಿಯಾಗಿ ಪ್ರಕೃತಿಗೆ ಏನು ನೀಡುತ್ತಿದ್ದೇವೆ.? ಹೀಗಾಗಿ ಕನಿಷ್ಠ ಕೊಡುಗೆ ನೀಡದೆ, ಇದ್ದರೂ, ಅದನ್ನು ಮಾಲಿನ್ಯ ಮಾಡಬಾರದು. ಸುಸ್ಥಿರ ಅಭಿವೃದ್ಧಿಗೆ ನಾವು ಕೈಜೋಡಿಸಬೇಕು” ಎಂದರು.

ವಿಟಿಯು ಬೆಂಗಳೂರು ಪ್ರಾದೇಶಿಕ ಕಚೇರಿಯ ನಿರ್ದೇಶಕ ಡಾ.ಎಚ್.ಆರ್.ಸುದರ್ಶನ ರೆಡ್ಡಿ ಮಾತನಾಡಿ, “ನಾವು ಈ ಯೂನಿರ್ವಸಲ್ ಹ್ಯೂಮನ್ ವ್ಯಾಲ್ಯೂ(ವಿಎಚ್‌ವಿ) ಸೆಲ್‌ವತಿಯಿಂದ ನಾವು 2023ರಿಂದ ಮಾಸಿಕ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದ್ದೇವೆ. ವಿಶ್ರಾಂತ ಕುಲಪತಿ, ಎಐಸಿಟಿಇ ಅಧ್ಯಕ್ಷರು, ಶಿಕ್ಷಣ ತಜ್ಞರು ಸೇರಿದಂತೆ ಸಾಕಷ್ಟು ವಿಷಯ ತಜ್ಞರಿಂದ ವಿದ್ಯಾರ್ಥಿಗಳಿಗೆ ಉಪನ್ಯಾಸ ಕಲ್ಪಿಸಿಕೊಡುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳನ್ನು ತಿಳಿಸಬೇಕೆಂಬುದು ನಮ್ಮ ಗುರಿ” ಎಂದರು.

ಈ ಕಾರ್ಯಕ್ರಮದಲ್ಲಿ ವಿಟಿಯು ಕುಲಸಚಿವ ಡಾ.ಪ್ರಸಾದ್ ಬಿ.ರಾಮ್‌ಪುರೆ, ಕುಲಸಚಿವ(ಮೌಲ್ಯಮಾಪನ) ಡಾ.ಯು.ಜಿ.ಉಜ್ವಲ್, ವಿತ್ತಾಧಿಕಾರಿ ಡಾ.ಪ್ರಶಾಂತ್ ನಾಯಕ ಇತರರು ಇದ್ದರು.

BIG NEWS: ನನ್ನ ರಕ್ತದಲ್ಲೇ ಗುಂಪುಗಾರಿಕೆ ಇಲ್ಲ, ಶಾಸಕರು ದೆಹಲಿಗೆ ಹೋದರೆ ತಪ್ಪೇನು?: ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನೆ

Share. Facebook Twitter LinkedIn WhatsApp Email

Related Posts

ರಾಜ್ಯದ ಗ್ರಾ. ಪಂ.ಬಿಲ್ ಕಲೆಕ್ಟರ್ ಗಳಿಗೆ ನೆಮ್ಮದಿ ಸುದ್ದಿ : ಸರ್ಕಾರಿ ರಜೆ ದಿನಗಳಲ್ಲಿ ತೆರಿಗೆ ವಸೂಲಾತಿ ಕರ್ತವ್ಯಕ್ಕೆ ಆದೇಶಿಸದಂತೆ ಸರ್ಕಾರ ನಿರ್ದೇಶನ

1 Min Read

BIG NEWS : ರಾಜ್ಯದಲ್ಲಿ ಸರ್ಕಾರದ ಅನುಮತಿ ಇಲ್ಲದೆ ‘ಗ್ರಾಮ ಸಹಾಯಕರ’ ನೇಮಕಾತಿ ಮಾಡುವಂತಿಲ್ಲ: ಸರ್ಕಾರದಿಂದ ಮಹತ್ವದ ಆದೇಶ!

1 Min Read

ಸಾಗರದ ‘ಪ್ರಜ್ವಲ್ ರೇವಣ್ಣ’ನಂತೆ ವರ್ತಿಸುವ ‘ಕಾಮುಕ ಮೇಸ್ತ್ರಿ ನಾಗರಾಜ್’ ಬಂಧಿಸಿ; ಡಿಎಸ್ಎಸ್ ಒತ್ತಾಯ

2 Mins Read
Recent News

JOB ALERT: ಭಾರತೀಯ ರೈಲ್ವೇ ಇಲಾಖೆಯಲ್ಲಿ 6,565 ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ |RRB Recruitment 2026

SHOCKING : ಮಹಿಳೆಯರಿಗಿಂತ ಭಾರತೀಯ ಪುರುಷರೇ `ಕ್ಯಾನ್ಸರ್’ಗೆ ಹೆಚ್ಚು ಬಲಿ : ಆಘಾತಕಾರಿ ವರದಿ ಬಹಿರಂಗ.!

ರಾಜ್ಯದ ಗ್ರಾ. ಪಂ.ಬಿಲ್ ಕಲೆಕ್ಟರ್ ಗಳಿಗೆ ನೆಮ್ಮದಿ ಸುದ್ದಿ : ಸರ್ಕಾರಿ ರಜೆ ದಿನಗಳಲ್ಲಿ ತೆರಿಗೆ ವಸೂಲಾತಿ ಕರ್ತವ್ಯಕ್ಕೆ ಆದೇಶಿಸದಂತೆ ಸರ್ಕಾರ ನಿರ್ದೇಶನ

BIG NEWS : `BBC’ ಉದ್ಯೋಗಿಗಳಿಗೆ ಬಿಗ್ ಶಾಕ್ : ಬರೋಬ್ಬರಿ 2,000 ಸಿಬ್ಬಂದಿಗಳು ವಜಾ | BBC Layoff 2000 Staff

State News
KARNATAKA

ರಾಜ್ಯದ ಗ್ರಾ. ಪಂ.ಬಿಲ್ ಕಲೆಕ್ಟರ್ ಗಳಿಗೆ ನೆಮ್ಮದಿ ಸುದ್ದಿ : ಸರ್ಕಾರಿ ರಜೆ ದಿನಗಳಲ್ಲಿ ತೆರಿಗೆ ವಸೂಲಾತಿ ಕರ್ತವ್ಯಕ್ಕೆ ಆದೇಶಿಸದಂತೆ ಸರ್ಕಾರ ನಿರ್ದೇಶನ

By kannadanewsnow57 KARNATAKA 1 Min Read

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಲ್ ಕಲೆಕ್ಟರ್ (ಕರವಸೂಲಿಗಾರ) ಮತ್ತು ನೌಕರರಿಗೆ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯವು ಮಹತ್ವದ…

BIG NEWS : ರಾಜ್ಯದಲ್ಲಿ ಸರ್ಕಾರದ ಅನುಮತಿ ಇಲ್ಲದೆ ‘ಗ್ರಾಮ ಸಹಾಯಕರ’ ನೇಮಕಾತಿ ಮಾಡುವಂತಿಲ್ಲ: ಸರ್ಕಾರದಿಂದ ಮಹತ್ವದ ಆದೇಶ!

ಸಾಗರದ ‘ಪ್ರಜ್ವಲ್ ರೇವಣ್ಣ’ನಂತೆ ವರ್ತಿಸುವ ‘ಕಾಮುಕ ಮೇಸ್ತ್ರಿ ನಾಗರಾಜ್’ ಬಂಧಿಸಿ; ಡಿಎಸ್ಎಸ್ ಒತ್ತಾಯ

ವಿಜಯಪುರದಲ್ಲಿ ಟಿಪ್ಪರ್ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಇಬ್ಬರು ಸವಾರರು ಸ್ಥಳದಲ್ಲೇ ದುರ್ಮರಣ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.