ಬೆಂಗಳೂರು: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆ ಎಸ್ ಆರ್ ಟಿ ಸಿಯಿಂದ ಬಸ್ ಪಾಸ್ ಅವಧಿಯನ್ನು ( KSRTC Bus Pass ) ವಿಸ್ತರಿಸಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದೆ.
ಈ ಕುರಿತಂತೆ ಸಂಸ್ಥೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ವಿದ್ಯಾರ್ಥಿ ಬಸ್ ( Student Bus Pass ) ಪಾಸುದಾರರಿಗೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ, ಅಂತಿಮ ಸೆಮಿಸ್ಟರ್ ನಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಿಗೆ ದಿನಾಂಕ 31-10-2022ರವರೆಗೆ 2021-22ನೇ ಸಾಲಿನ ಪಾಸು ಅವಧಿ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಕೆ ಎಸ್ ಆರ್ ಟಿ ಸಿ ಬಸ್ ಗಳಲ್ಲಿ ( KSRTC Bus ) 2021-22ನೇ ಸಾಲಿನ ಪಾಸು ಹಾಗೂ ಶಾಲಾ ದಾಖಲೆಯ ರಸೀದಿಯನ್ನು ತೋರಿಸಿ, ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದೆ.
ಇನ್ನುಳಿದ ಇತರೆ ಸಮಿಸ್ಟರ್ ನ ಎಲ್ಲಾ ತರಗತಿಗಳ ವಿದ್ಯಾರ್ಥಿಗಳು ಸೇವಾಸಿಂಧು ಮೂಲಕ ಹೊಸದಾಗಿ ಪಾಸು ಪಡೆಯಲು ಕಾಲಾವಕಾಶ ನೀಡುವಂತೆ ಕೋರಿದ್ದರಿಂದ, ಹೊಸದಾಗಿ ಬಸ್ ಪಾಸ್ ಪಡೆಯಲು ಕಾಲಾವಕಾಶವನ್ನು ಅಂತಿಮವಾಗಿ ದಿನಾಂಕ 30-09-2022ರವರೆಗೆ ನೀಡಲಾಗಿದೆ. ಈ ಅವಧಿಯಲ್ಲಿ ಹಳೆಯ ಪಾಸು ಹಾಗೂ ಅವಧಿ ವಿಸ್ತರಣೆ ಸಮಯದಲ್ಲಿ ನೀಡಿರುವ ರಸೀದಿಯನ್ನು ತೋರಿಸಿ, ಉಚಿತವಾಗಿ ಪ್ರಯಾಣಿಸುವಂತೆ ತಿಳಿಸಿದೆ.
ವರದಿ : ವಸಂತ ಬಿ ಈಶ್ವರಗೆರೆ