ಫಿಲಿಪೈನ್ಸ್: ಉತ್ತರ ಫಿಲಿಪೈನ್ಸ್ನಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಪ್ರಬಲ ಭೂಕಂಪಕ್ಕೆ ನಾಲ್ವರು ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ರಾಜಧಾನಿ ಮನಿಲಾದಲ್ಲಿ 300 ಕಿಲೋಮೀಟರ್ಗಿಂತಲೂ ಹೆಚ್ಚು ದೂರದಲ್ಲಿರುವ ಎತ್ತರದ ಗೋಪುರಗಳನ್ನು ಅಲುಗಾಡಿಸಿದ 7.1 ತೀವ್ರತೆಯ ಪ್ರಬಲ ಭೂಕಂಪವು 8:43 am (0043 GMT) ಲುಜಾನ್ನ ಮುಖ್ಯ ದ್ವೀಪದಲ್ಲಿರುವ ಪರ್ವತ ಪ್ರಾಂತ್ಯದ ಅಬ್ರಾವನ್ನು ಅಪ್ಪಳಿಸಿತು ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ.
ಭೂಕಂಪದಿಂದ ಹಲವಾರು ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕಿಟಗಿಗಳು ಸಹ ಹೊಡೆದಿವೆ. ಇದರಿಂದ ಗಾಬರಿಗೊಂಡ ಜನರು ತಾವು ವಾಸಿಸುತ್ತಿದ್ದ ಕಟ್ಟಡದಿಂದ ಹೊರಗೆ ಓಡಿಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಮನಿಲಾದ ಎರಡು ಆಸ್ಪತ್ರೆಗಳಲ್ಲೂ ಭೂಮಿ ಕಂಪಿಸಿದ ಅನುಭವವಾಗಿದ್ದು, ರೋಗಿಗಳು ಮತ್ತು ವೈದ್ಯಕೀಯ ಸಿಬ್ಬಂದಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.
ಮನೆಗೆ ಬಂದ 3,419 ಕೋಟಿ ರೂ. ವಿದ್ಯುತ್ ಬಿಲ್ ಕಂಡು ವ್ಯಕ್ತಿಗೆ ಆಘಾತ, ಆಸ್ಪತ್ರೆಗೆ ದಾಖಲು!
BIGG NEWS : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಶೀಘ್ರವೇ ಕೊಲೆಗಾರರನ್ನು ಬಂಧಿಸಲಾಗುತ್ತೆ : ಸಚಿವ ಸುಧಾಕರ್
‘ಆಜಾದಿ ಕಾ ಅಮೃತ್ ಮಹೋತ್ಸವ’: 12,000 ಅಡಿ ಎತ್ತರದಲ್ಲಿ ‘ತಿರಂಗ’ ಹಾರಿಸಿದ ITBP ಪಡೆ… ವಿಡಿಯೋ