ಕೇರಳ : ಕೇರಳದಲ್ಲಿ ಬೀದಿ ನಾಯಿಗಳ ಹಾವಳಿ ಮುಂದುವರೆದಿದೆ. ಕೊಲ್ಲಂನಲ್ಲಿ ದೇವಾಲಯದ ಬಳಿ ನಾಯಿಗಳ ದಾಳಿಗೆ 12 ವರ್ಷದ ಬಾಲಕಿ ಸೇರಿದಂತೆ ಏಳು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ನಿನ್ನೆ ಸಂಜೆ ಕೊಲ್ಲಂನಲ್ಲಿ ದೇವಾಲಯದ ಬಳಿ ಘಟನೆ ನಡೆದಿದ್ದು, ಗಾಯಗೊಂಡ 7 ಜನರಲ್ಲಿ ಅಯ್ಯಪ್ಪ ಭಕ್ತರು ಸೇರಿದ್ದಾರೆ. ಎಲ್ಲಾ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡ ಇಜಾಕಿ ಮತ್ತು ಮಣಿಕಂದನ್ ಎಂಬುವವರನ್ನು ಪುನಲುರ ತಾಲ್ಲೂಕು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.
ದೇವಾಲಯದ ಆವರಣದಲ್ಲಿ ಮತ್ತು ರಸ್ತೆಬದಿಯಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮೀಸಲಾತಿ ವಿಚಾರದಲ್ಲಿ ಡಿಕೆಶಿಗೆ ಮಾತನಾಡುವ ನೈತಿಕತೆ ಇಲ್ಲ : ಸಚಿವ ಶ್ರೀರಾಮುಲು
ಬೆಚ್ಚಿಬಿದ್ದ ಬೆಂಗಳೂರು ಜನತೆ: ‘ಏರ್ ಪೋನ್’ಗಾಗಿ ಸ್ನೇಹಿತನ ಮೇಲೆ ಹಲ್ಲೆ ಮಾಡಿ ಕೊಲೆ