ಅಮೇರಿಕಾ: ಮಿಸ್ಸಿಸ್ಸಿಪ್ಪಿಯ ( Mississippi) ಏರ್ಪೋರ್ಟ್ನಿಂದ ನಿನ್ನೆ (ಸ್ಥಳೀಯ ಕಾಲಮಾನ) ಬೆಳಗಿನ ಜಾವ 5 ಗಂಟೆಯಲ್ಲಿ E911 ವಿಮಾನವನ್ನು ವ್ಯಕ್ತಿಯೊಬ್ಬ ಕದ್ದು, ವಿಮಾನವನ್ನು ಸೂಪರ್ ಮಾರ್ಕೆಟ್ಗೆ ಅಪ್ಪಳಿಸುವ ಬೆದರಿಕೆ ಹಾಕಿದ್ದ. ಇದೀಗ ಕೊನೆಗೂ ವಿಮಾನವನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾನೆ.
ಮಿಸ್ಸಿಸ್ಸಿಪ್ಪಿಯ ಬೆದರಿಕೆಯಿಂದಾಗಿ ಆತಂಕಗೊಂಡ ಪೊಲೀಸರು ವಾಲ್ಮಾರ್ಟ್ ಮತ್ತು ಈ ಪ್ರದೇಶದ ಇತರ ಅಂಗಡಿಗಳನ್ನು ಸ್ಥಳಾಂತರಿಸಲಾಗಿತ್ತು.
ಈತ ಗಂಟೆಗಟ್ಟಲೆ ವಿಮಾನವನ್ನು ಗಿರಕಿ ಹೊಡೆಸಿದ ನಂತ್ರ ವಿಮಾನವು ಕೆಳಗಿಳಿದಿದೆ. ಪರಿಸ್ಥಿತಿಯನ್ನು ಪರಿಹರಿಸಲಾಗಿದೆ. ಈ ವೇಳೆ ಯಾರೂ ಗಾಯಗೊಂಡಿಲ್ಲ.
ಈ ಪರಿಸ್ಥಿತಿಯನ್ನು ತೀವ್ರ ವೃತ್ತಿಪರತೆಯಿಂದ ನಿರ್ವಹಿಸಿದ ಸ್ಥಳೀಯ, ರಾಜ್ಯ ಮತ್ತು ಫೆಡರಲ್ ಕಾನೂನು ಜಾರಿ ಸಂಸ್ಥೆಗಳಿಗೆ ಧನ್ಯವಾದಗಳು” ಎಂದು ಗವರ್ನರ್ ರೀವ್ಸ್ ಟ್ವಿಟ್ಟರ್ನಲ್ಲಿ ತಿಳಿಸಿದ್ದಾರೆ.
Currently we have a 29yr old who stole this plane & is threatening to crash it into something. Polices ,ambulances ,& fire trucks are everywhere. Everything is shutdown rn pic.twitter.com/AzebdIa3tP
— City King (@CityKing_Gank_) September 3, 2022
ವಿಮಾನವನ್ನು ಕದ್ದ ಪೈಲಟ್ಅನ್ನು 29 ವರ್ಷದ ಕೋರಿ ಪ್ಯಾಟರ್ಸನ್ (Cory Patterson) ಎಂದು ಗುರುತಿಸಲಾಗಿದ್ದು, ಈತ ಟುಪೆಲೋ ಪ್ರಾದೇಶಿಕ ವಿಮಾನ ನಿಲ್ದಾಣದ ಉದ್ಯೋಗಿ ಎಂದು ಪೊಲೀಸರು ತಿಳಿಸಿದ್ದಾರೆ.
ಹಠಾತ್ ಮದ್ಯಪಾನ ತ್ಯಜಿಸಿದಾಗ ನಿಮ್ಮ ದೇಹದಲ್ಲಾಗೋ ಬದಲಾವಣೆಗಳಿವು…? ಅದೇನೆಂದು ತಿಳಿಯಿರಿ
BIG NEWS: ಕಾಂಗ್ರೆಸ್ಗೆ ಮತ್ತೊಂದು ಆಘಾತ: ಜಮ್ಮು & ಕಾಶ್ಮೀರದ ಮತ್ತೊಬ್ಬ ಹಿರಿಯ ʻಕೈʼ ನಾಯಕ ಪಕ್ಷಕ್ಕೆ ರಾಜೀನಾಮೆ