ಒಟ್ಟಾವಾ (ಕೆನಡಾ): ಕೆನಡಾದ ಒಂಟಾರಿಯೊದ ರಿಚ್ಮಂಡ್ ಹಿಲ್ ನಗರದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ(Mahatma Gandhi)ಯವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ. ಈ ವಿಧ್ವಂಸಕ ಕೃತ್ಯಕ್ಕೆ ಭಾರತ ಬುಧವಾರ ತನ್ನ ತೀವ್ರ ದುಃಖವನ್ನು ವ್ಯಕ್ತಪಡಿಸಿದೆ.
ಯೋಂಗ್ ಸ್ಟ್ರೀಟ್ ಮತ್ತು ಗಾರ್ಡನ್ ಅವೆನ್ಯೂ ಪ್ರದೇಶದಲ್ಲಿನ ವಿಷ್ಣು ಮಂದಿರದಲ್ಲಿ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ ಎಂದು ಕೆನಡಾದ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ (ಸಿಬಿಸಿ) ಯಾರ್ಕ್ ಪ್ರಾದೇಶಿಕ ಪೊಲೀಸರನ್ನು ಉಲ್ಲೇಖಿಸಿ ವರದಿ ಮಾಡಿದೆ.
ʻರಿಚ್ಮಂಡ್ ಹಿಲ್ನಲ್ಲಿರುವ ವಿಷ್ಣು ದೇವಾಲಯದಲ್ಲಿ ಮಹಾತ್ಮ ಗಾಂಧಿ ಅವರ ಪ್ರತಿಮೆಯ ಧ್ವಂಸದಿಂದ ನಾವು ದುಃಖಿತರಾಗಿದ್ದೇವೆ. ಈ ಕ್ರಿಮಿನಲ್, ದ್ವೇಷಪೂರಿತ ವಿಧ್ವಂಸಕ ಕೃತ್ಯವು ಕೆನಡಾದ ಭಾರತೀಯ ಸಮುದಾಯದ ಭಾವನೆಗಳನ್ನು ಆಳವಾಗಿ ಘಾಸಿಗೊಳಿಸಿದೆ. ಈ ದ್ವೇಷದ ಅಪರಾಧದ ತನಿಖೆಗಾಗಿ ನಾವು ಕೆನಡಾದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆʼ ಎಂದು ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಟ್ವೀಟ್ ಮಾಡಿದ್ದಾರೆ.
“We are distressed at the desecration of Mahatma Gandhi statue at Vishnu temple in Richmond Hill. This criminal, hateful act of vandalism has deeply hurt the sentiments of the Indian community in Canada,” tweets Consulate General of India in Toronto, Canada pic.twitter.com/VlfgI8jpnZ
— ANI (@ANI) July 14, 2022
ಭಾರತೀಯ ಸಮುದಾಯವನ್ನು ಭಯಭೀತಗೊಳಿಸಲು ಪ್ರಯತ್ನಿಸುತ್ತಿರುವ ಈ ದ್ವೇಷದ ಅಪರಾಧದಿಂದ ಭಾರತವು ತೀವ್ರವಾಗಿ ನೊಂದಿದೆ. ತನಿಖೆ ಮತ್ತು ಅಪರಾಧಿಗಳನ್ನು ತ್ವರಿತವಾಗಿ ನ್ಯಾಯಾಂಗಕ್ಕೆ ತರುವುದನ್ನು ಖಚಿತಪಡಿಸಿಕೊಳ್ಳಲು ಭಾರತವು ಕೆನಡಾ ಸರ್ಕಾರವನ್ನು ಸಂಪರ್ಕಿಸಿದೆ ಎಂದು ಒಟ್ಟಾವಾದಲ್ಲಿನ ಹೈಕಮಿಷನ್ ಹೇಳಿದೆ.
ಈ ವಿಧ್ವಂಸಕ ಕೃತ್ಯದ ಬಗ್ಗೆ ತೀವ್ರ ತನಿಖೆ ನಡೆಸಲಾಗುತ್ತಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
BIGG NEWS : ದ್ವಿತೀಯ ಪಿಯು ಉತ್ತರ ಪತ್ರಿಕೆಗಳ ‘ಸ್ಕ್ಯಾನ್ಡ್ ಪ್ರತಿ’ ಸಮಸ್ಯೆ : ‘PU ಬೋರ್ಟ್’ನಿಂದ ‘ಸಹಾಯವಾಣಿ’ ಆರಂಭ
BIGG BREAKING NEWS : ದೇಶದಲ್ಲಿ ಮತ್ತೆ ದಿಢೀರ್ ಏರಿಕೆ ಕಂಡ ಕೊರೊನಾ : 24 ಗಂಟೆಯಲ್ಲಿ 20,139 ಕೇಸ್ ಪತ್ತೆ