ಬೆಂಗಳೂರು: ರಾಜ್ಯದಲ್ಲೇ ಮೊದಲ ಝೀಕಾ ವೈರಸ್ ಸೋಂಕಿನ ಪ್ರಕರಣವು ರಾಯಚೂರಿನಲ್ಲಿ ಪತ್ತೆಯಾಗಿದೆ. ಐದು ವರ್ಷದ ಬಾಲಕಿಯಲ್ಲಿ ಝೀಕಾ ವೈರಸ್ ಸೋಂಕು ದೃಢಪಟ್ಟಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂಬುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.
ಪೋಷಕರೇ ಎಚ್ಚರ ; ಮಕ್ಕಳಲ್ಲಿ ಈ ‘ಲಕ್ಷಣ’ಗಳು ಕಾಣಿಸಿಕೊಂಡ್ರೆ, ತಡ ಮಾಡದೇ ತಜ್ಞರ ಸಂಪರ್ಕಿಸಿ.!
ಇಂದು ಆರೋಗ್ಯಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ರಾಯಚೂರಿನ ಐದು ವರ್ಷದ ಬಾಲಕಿಗೆ ಝೀಕಾ ವೈರಸ್ ಸೋಂಕು ದೃಢಪಟ್ಟಿದೆ. ಇದು ರಾಜ್ಯದಲ್ಲಿಯೇ ಪತ್ತೆಯಾದಂತ ಮೊದಲ ಝೀಕಾ ವೈರಸ್ ಸೋಂಕಿನ ಪ್ರಕರಣವಾಗಿದೆ ಎಂದರು.
BREAKING NEWS : ಕಾಬೂಲ್’ನ ‘ಚೈನೀಸ್ ಹೋಟೆಲ್’ನಲ್ಲಿ ಬಾಂಬ್ ಸ್ಫೋಟ, ಚೀನೀ ಪ್ರಜೆಗಳನ್ನ ಒತ್ತೆಯಾಳಾಗಿಸಿಕೊಂಡ ಉಗ್ರರು
ಝೀಕಾ ವೈರಸ್ ಬಗ್ಗೆ ಯಾವುದೇ ಆತಂಕ ಜನರಿಗೆ ಬೇಡ. ಈ ಸೋಂಕಿನ ನಿಯಂತ್ರಣದ ಬಗ್ಗೆ ಇಂದು ಸಂಜೆ ಮಾರ್ಗಸೂಚಿಯನ್ನು ಪ್ರಕಟಿಸಲಾಗುತ್ತದೆ. ರಾಯಚೂರಿನಲ್ಲಿ ಝೀಕಾ ವೈರಸ್ ಸೋಂಕಿನ ಪ್ರಕರಣ ಪತ್ತೆಯಾದ ಹಿನ್ನಲೆಯಲ್ಲಿ ಜಿಲ್ಲೆ ಹಾಗೂ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ಉದ್ಯೋಗಿಗಳಿಗೆ ಗುಡ್ ನ್ಯೂಸ್ ; ಶೀಘ್ರ ‘ತುಟ್ಟಿಭತ್ಯೆ’ ಹೆಚ್ಚಳ, ಸ್ಯಾಲರಿ ಹೈಕ್