ದಕ್ಷಿಣ ಕನ್ನಡ: ರಾಜ್ಯ ಸರ್ಕಾರದಿಂದ ಟಿಪ್ಪು ಜಯಂತಿ ಆಚರಣೆಗೆ ಬ್ರೇಕ್ ಹಾಕಿದ ಬಳಿಕ, ಶಾಲಾ ಪಠ್ಯಗಳಲ್ಲಿ ಟಿಪ್ಪು ಪಠ್ಯಕ್ಕೂ ಕೋಕ್ ನೀಡಲಾಗಿತ್ತು. ಇದಷ್ಟೇ ಅಲ್ಲದೇ ಟಿಪ್ಪು ಎಕ್ಸ್ ಪ್ರೆಸ್ ಹೆಸರನ್ನು ಬದಲಾಯಿಸಲಾಗಿತ್ತು. ಇದೀಗ ರಾಜ್ಯದ ದೇಗುಲಗಳಲ್ಲಿನ ಟಿಪ್ಪುವಿನ ಕಾಲದ ದೀವಟಿಗೆ ಸಲಾಂಗೆ ಬ್ರೇಕ್ ಹಾಕಲಾಗಿದೆ.
ಈ ಸಂಬಂಧ ಧಾರ್ಮಿಕ ಪರಿಷತ್ ನಿಂದ ಆದೇಶ ಹೊರಡಿಸಲಾಗಿದ್ದು, ಮಂಡ್ಯ ಜಿಲ್ಲೆಯ ಪ್ರಸಿದ್ಧ ಚಲುವನಾರಾಯಣಸ್ವಾಮಿ ದೇವಾಲಯದಲ್ಲಿ ಪ್ರಾಚೀನ ಕಾಲದಿಂದಲೂ ಆಚರಿಸಿಕೊಂಡು ಬಂದಿರುವಂತ ಸಂಧ್ಯಾ ಕಾಲದ ದೀವಟಿಗೆ ಸಲಾಂಗೆ ಈಗ ನಿಷೇಧಿಸಲಾಗಿದೆ. ಅಲ್ಲದೇ ಇನ್ಮುಂದೆ ದೀವಟಿಗೆ ಸಲಾಂ ಪೂಜೆಯನ್ನು ನಡೆಸದಂತೆ ಸೂಚಿಸಲಾಗಿದೆ.
ಅಂದಹಾಗೇ ದೀವಟಿಗೆ ಸಲಾಂ ಎಂಬುದು ಸಂಧ್ಯಾ ಕಾಲದಲ್ಲಿ ಮೂಲ ದೇವರಿಗೆ ನಡೆಸಲಾಗುತ್ತಿದ್ದಂತ ಆರತಿ ಸೇವೆಯಾಗಿದೆ. ಈ ಸೇವೆಯನ್ನು ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು, ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯ ಸೇರಿದಂತೆ ಕೆಲ ದೇವಾಲಯಗಳಲ್ಲಿ ಇಂದಿಗೂ ನಡೆಸಿಕೊಂಡು ಬರಲಾಗುತ್ತಿದೆ. ಈಗ ಮಂಡ್ಯದ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ನಡೆಸಲಾಗುತ್ತಿದ್ದಂತ ಇಂತಹ ಆಚರಣೆಯನ್ನು ನಿಷೇಧಿಸಲಾಗಿದೆ.
BIG NEWS: ಡಿ.19ರಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನಮಂಡಲದ ಅಧಿವೇಶನ: ಹೀಗಿದೆ ಸಿಎಂ, ಸಚಿವರ ಕೊಠಡಿಗಳ ಸಂಖ್ಯೆ