ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ, ಹೊಸದಾಗಿ ಆಯ್ಕೆಯಾದಂತ 2021ನೇ ಸಾಲಿನ 7 ಐಪಿಎಸ್ ಅಧಿಕಾರಿಗಳಿಗೆ ಹೊಣೆಗಾರಿಕೆ ನೀಡಿ ಆದೇಶಿಸಿದೆ..
ಈ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, 2021ನೇ ಸಾಲಿನಲ್ಲಿ ಆಯ್ಕೆಯಾದಂತ ಐಪಿಎಸ್ ಅಧಿಕಾರಿ ಸಚಿನ್ ಘೋರ್ಪಡೆಯವರನ್ನು ಕೋಲಾರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ವರ್ಗಾವಣೆ ಮಾಡಿದೆ.
ಅಮಟೆ ವಿಕ್ರಮ್ ಅವರನ್ನು ಶಿವಮೊಗ್ಗ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನೇಮಿಸಿದ್ರೇ, ಸಜೀತ್ ವಿ ಜೆ ಅವರನ್ನು ಮೈಸೂರಿನ ಎಸಿಬಿಯ ಎಸ್ಪಿಯಾಗಿ ನೇಮಿಸಿದೆ. ರಾಮ ಲಕ್ಷಣ ಅರಸಿದ್ದಿ ಅವರನ್ನು ವಿಜಯಪುರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನೇಮಿಸಲಾಗಿದೆ.
ಇನ್ನೂ ಬಬಸಾಬ್ ನೇಮಗೌಡ ಅವರನ್ನು ಬೆಳಗಾವಿಯ ಎಸಿಬಿಯ ಎಸ್ಪಿಯಾಗಿ, ಗೋಪಾಲ್ ಎಂ ಬಾಯಕೋಡ್ ಅವರನ್ನು ಹುಬ್ಬಳ್ಳಿ-ಧಾರವಾಡ ನಗರದ ಕ್ರೈಂ ಮತ್ತು ಸಂಚಾರ ಪೊಲೀಸ್ ಇಲಾಖೆಯ ಡಿಸಿಪಿಯಾಗಿ ನೇಮಿಸಿದ್ರೇ, ಮಹನಿಂಗ ನಂದಗಾನ್ವಿ ಅವರನ್ನು ಬೆಳಗಾವಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನೇಮಿಸಿ ಹೊಣೆಗಾರಿಕೆ ನೀಡಿದೆ.