ಬೆಂಗಳೂರು: ರಾಜ್ಯಾಧ್ಯಂತ ಕೆಲ ದಿನಗಳಿಂದ ಸುರಿದಂತ ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಹಲವೆಡೆ ರಸ್ತೆ, ಸೇತುವೆ ಕುಸಿತಗೊಂಡು ಸಂಪರ್ಕ ಕಡಿತಗೊಂಡು ಮೂಲ ಸೌಕರ್ಯ ಸಿಗದಂತೆ ಜನರು ಒದ್ದಾಡುವಂತೆ ಆಗಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದಿಂದ ಮೂಲಭೂತ ಸೌಕರ್ಯ ಮರುಸ್ಥಾಪಿಸುವ ಕಾಮಗಾರಿಗೆ 500 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.
BIG NEWS: ರಾಜ್ಯದಲ್ಲಿ ‘ನೆರೆ ಪರಿಹಾರ’ಕ್ಕಾಗಿ ‘ವಾಸದ ಮನೆ’ ಕೆಡವುತ್ತಿರುವ ಜನರು: ಸರ್ಕಾರದಿಂದ ಈ ಖಡಕ್ ಎಚ್ಚರಿಕೆ
ಈ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಸತತವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಹಲವಾರು ಜಿಲ್ಲೆಗಳಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆಗಳು, ಸೇತುವೆ, ಶಾಲೆ, ಅಂಗನವಾಡಿ, ವಿದ್ಯುತ್ ಕಂಬಗಳು, ಸರ್ಕಾರ ಆಸ್ಪತ್ರೆಗಳು ಸೇರಿದಂತೆ ಇತರೆ ಹಾನಿಯಾಗಿರುವುದನ್ನು ಜಿಲ್ಲಾಧಿಕಾರಿಗಳು ವರದಿ ಮಾಡಿದ್ದಾರೆ.
BREAKING NEWS: ‘ಆಲ್ಟ್ ನ್ಯೂಸ್’ನ ಸಹ ಸಂಸ್ಥಾಪಕ ‘ಮೊಹಮ್ಮದ್ ಜುಬೈರ್’ಗೆ ಜಾಮೀನು | Mohammed Zubair granted bail
ಕೆಲವು ದಿನಗಳ ಹಿಂದೆ ನಾನು ಪ್ರವಾಸ ಮಾಡಿದ ಸಂದರ್ಭದಲ್ಲಿ ಜಿಲ್ಲೆಗಳಲ್ಲಿ ಹಾನಿಯನ್ನು ಸ್ವತಹ ವೀಕ್ಷಿಸಿರುತ್ತೇನೆ. ಈ ಹಿನ್ನಲೆಯಲ್ಲಿ ತ್ವರಿತಗತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಯಥಾಸ್ಥಿತಿಗೆ ತರಲು ಕಾಮಾಗಿರಿಗಳನ್ನು ಕೈಗೊಳ್ಳಲು ಕೂಡಲೇ 500 ಕೋಟಿ ರೂಗಳನ್ನು ಬಿಡುಗಡೆಗೊಳಿಸಲು ಸಿಎಂ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ.