ಬೆಂಗಳೂರು: ಮದರಸಗಳಿಗಾಗಿ ವಿಶೇಷ ಮಂಡಳಿ ರಚನೆ ವಿಚಾರವಾಗಿ ಅಲ್ಲಿನ ಶಿಕ್ಷಣದ ಬಗ್ಗೆ ಪರಿಶೀಲನೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.
BIGG NEWS: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ; ಇಂದು ಹೈಕೋರ್ಟ್ನಲ್ಲಿ ವಿಚಾರಣೆ!
ನಗದರಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲ.ವಿಜ್ಞಾನ, ಗಣಿತ ವಿಷಯ ಕಲಿಸುತ್ತಿಲ್ಲ.ಮದರಸಗಳ ಮೇಲೆ ಅನೇಕ ಆರೋಪಗಳು ಇಲಾಖೆಗೆ ಬಂದಿತ್ತು.
ಹೀಗಾಗಿ ಮದರಸಗಳ ಬಗ್ಗೆ ಸಭೆ ಆಗಿದೆ.ಮದರಸಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗಿದೆ.ಮದರಸಗಳಲ್ಲಿ ಏನು ಹೇಳಿ ಕೊಡುತ್ತಿದ್ದಾರೆ ಎಂಬ ಮಾಹಿತಿ ಸಂಗ್ರಹ ಮಾಡಲಾಗಿದೆ ಎಂದರು.
ಶಿಕ್ಷಣ ಇಲಾಖೆ ಕಾಯ್ದೆ ಪ್ರಕಾರ ಶಿಕ್ಷಣ ಸಿಗುತ್ತಿದೆಯಾ ಇಲ್ಲವಾ ಅಂತ ಸಭೆಯಲ್ಲಿ ಚರ್ಚೆ ಆಗಿದೆ.ಈ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
BIGG NEWS: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ; ಇಂದು ಹೈಕೋರ್ಟ್ನಲ್ಲಿ ವಿಚಾರಣೆ!
ಮದರಸಗಳ ಮೇಲೆ ದೂರು ಬಂದಿದೆ. ನಮ್ಮ ಅಧಿಕಾರಿಗಳನ್ನ ಒಳಗೆ ಬಿಡೋದಿಲ್ಲ.ಹೀಗಾಗಿ ಪ್ರಾಥಮಿಕ ಮಾಹಿತಿ ಪಡೆಯಲಾಗಿದೆ.ಶಿಕ್ಷಣ ತಜ್ಞರು, ಮದರಸ ನಡೆಸುತ್ತಿರೋ ಜೊತೆ ಸಭೆ ಮಾಡ್ತೀವಿ.ಮುಂದೆ ಹೇಗೆ ಮಾಡಬಹುದು ಅಂತ ಸಭೆ ನಡೆಸುತ್ತೇವೆ. ಮೊದಲು ಅಧಿಕಾರಿಗಳಿಂದ ವರದಿ ತರಿಸಿಕೊಳ್ತೀವಿ.ವರದಿ ಬಂದ ಬಳಿಕ ಮುಂದಿನ ಕ್ರಮ ತಗೋತೀವಿ.15 ದಿನಗಳಲ್ಲಿ ವರದಿ ನೀಡಲು ಸೂಚನೆ ನೀಡಲಾಗಿದೆ.ಕಮೀಷನ್ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಮದರಸಗಳ ಬಗ್ಗೆ ವರದಿ ನೀಡ್ತಾರೆ.ವರದಿ ಬಂದ ಬಳಿಕ ಮಂಡಳಿ ರಚನೆ ಬಗ್ಗೆ ತೀರ್ಮಾನ ಮಾಡ್ತೀವಿ.
BIGG NEWS: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ; ಇಂದು ಹೈಕೋರ್ಟ್ನಲ್ಲಿ ವಿಚಾರಣೆ!
ಮದರಸಗಳ ಕುರಿತು ವರದಿ ನೀಡಲು ಸಚಿವರ ಸೂಚನೆ ನೀಡಲಾಗಿದೆ. ಮದರಸಗಳ ಬಗ್ಗೆ ಸಂಪೂರ್ಣ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
15 ದಿನಗಳಲ್ಲಿ ವರದಿ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.