ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ವಿವಿಧ ಜಿಲ್ಲೆಗಳಲ್ಲಿ ಅಕಾಲಿಕ ಮಳೆಯಿಂದ ( Heavy Rain ) ಎದುರಾಗಿರುವಂತ ಪ್ರವಾಹ ಪರಿಸ್ಥಿತಿಯನ್ನು ನಿರ್ವಹಿಸೋ ಸಂಬಂಧ, ಮಹತ್ವದ ಸುತ್ತೋಲೆಯನ್ನು ಹೊರಡಿಸಲಾಗಿದೆ.
ರಾಜ್ಯ ಕಂದಾಯ ಇಲಾಖೆಯ ( Revenue Department ) ಸರ್ಕಾರ ಅಪರ ಮುಖ್ಯ ಕಾರ್ಯದರ್ಶಿ ಹೊರಡಿಸಿರುವಂತ ಸುತ್ತೋಲೆಯಲ್ಲಿ, ಮನೆ ಹಾನಿಪರಿಹಾರವನ್ನು ಪಾವತಿಸಲು ದಿನಾಂಕ 02-08-2022ರ ಸರ್ಕಾರಿ ಪತ್ರದಲ್ಲಿ ತಿಳಿಸಿರುವುದನ್ನು ಮಾರ್ಪಡಿಸಿ, 2019, 2020 ಮತ್ತು 2021ನೇ ಸಾಲಿನಲ್ಲಿ ಭಾಗಶ ಹಾನಿಯಾದ ಸಿ ವರ್ಗದಲ್ಲಿ ರೂ.50,000 ದಂತೆ ಮನೆ ಪರಿಹಾರ ಪಡೆದಿರುವ ಮನೆಗಳು ಪುನಹ 2022ನೇ ಸಾಲಿನಲ್ಲಿ ಜಂಟಿ ಸಮೀಕ್ಷೆ ಅನುಸಾರ ಅತಿವೃಷ್ಠಿಯಿಂದ ಎ, ಬಿ ಮತ್ತು ಸಿ ವರ್ಗದಲ್ಲಿ ಹಾನಿಯಾದಲ್ಲಿ ಪರಿಹಾರ ಪಾವತಿಸುವಂತೆ ತಿಳಿಸಿದೆ.
ಅತಿವೃಷ್ಠಿಯಿಂದ ರಾಜ್ಯದ ಬಹುತೇಕ ಕೆರೆ ತುಂಬಿ ಹರಿಯುತ್ತಿವೆ. ಇದರಿಂದ ಕೃಷಿ ಭೂಮಿಯಲ್ಲಿ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿರುವುದು ಕಂಡು ಬಂದಿದೆ. ಇದಕ್ಕೆ ಕೇಂದ್ರ ಸರ್ಕಾರದ ಎನ್ ಡಿ ಆರ್ ಎಫ್ ಮಾರ್ಗಸೂಚಿಯ ಅನ್ವಯ ಪರಿಹಾರ ಪಾವತಿಸಲು ಅವಕಾಶವಿದೆ. ಜಿಲ್ಲಾಧಿಕಾರಿಗಳು ಈ ಪ್ರಕರಣಗಳನ್ನು ಕೂಲಕಂಷವಾಗಿ ಪರೀಶಿಲಿಸಿ, ಪರಿಹಾರ ಪಾವತಿಸುವಂತೆ ಹೇಳಿದೆ.
20219, 2020 ಮತ್ತು 2021ನೇ ಸಾಲಿನಲ್ಲಿ ಎ ಅಥವಾ ಬಿ ವರ್ಗದಲ್ಲಿ ಹಾನಿಯಾದ ಮನೆಗಳು ಈವರೆಗೆ ಮನೆ ನಿರ್ಮಾಣ ಕಾರ್ಯ ಪ್ರಾರಂಭವಾಗದೇ ಇದ್ದರೇ, ಆ ಮನೆಗಳನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿ ರದ್ದುಗೊಳಿಸುವುದು. ಪ್ರಾರಂಭವಾಗಿರುವ ಮನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಮನೆ ಮಾಲೀಕರಿಗೆ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಬೆಂಗಳೂರಿಗರ ಗಮನಕ್ಕೆ: ನಾಳೆ ನಗರದ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut
ಶಿಥಿಲಾವಸ್ಥೆ ತಲುಪಿರುವಂತ ಕೆರೆಗಳನ್ನು ಒಡೆಯದಂತೆ ಕ್ರಮ ಕೈಗೊಳ್ಳುವುದು. ಅವುಗಳ ಸರ್ವೆ ನಡೆಸಬೇಕು. ಪ್ರತಿ ಬಾರಿ ಪ್ರವಾಹ ಎದುರಾಗುತ್ತಿರುವ ಜಲಾನಯನ ಗ್ರಾಮಗಳನ್ನು ಗುರುತಿಸಿ, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದೆ.
ವರದಿ: ವಸಂತ ಬಿ ಈಶ್ವರಗೆರೆ