ಬೆಂಗಳೂರು: 2025ವಿಷಯ: ಸರ್ಕಾರದಿಂದ ನೇರವಾಗಿ/ ಪರೋಕ್ಷವಾಗಿ ನೇಮಕಗೊಂಡಿರುವ ಅಧಿಕಾರಿಗಳು/ ನೌಕರರಿಗೆ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರುವ ಅಥವಾ ವಿಸ್ತರಿಸುವ ಬಗ್ಗೆ.ಉಲ್ಲೇಖ: ಸರ್ಕಾರದ ಆದೇಶ ಸಂಖ್ಯೆ:ಎಫ್-ಸಿ ಎ ಎಂ /1/2025 ದಿನಾಂಕ:21.02.2025.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಪತ್ರದನ್ವಯ, ದಿನಾಂಕ:30.01.2025ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಕರಣ ಸಂಖ್ಯೆ: ಸಿ.80/2025ರಲ್ಲಿ ತಿರ್ಮಾನಿಸಿದಂತೆ, ನೌಕರರ ಮತ್ತು ಅವಲಂಬಿತ ಕುಟುಂಬ ಸದಸ್ಯರ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ವಿವಿಧ ಬ್ಯಾಂಕುಗಳು ಒದಗಿಸುವ “ಸಂಬಳ ಪ್ಯಾಕೇಜ್‌ಗಳ ಅಡಿಯಲ್ಲಿ ಖಾತೆಗಳನ್ನು ತೆರೆಯುವುದು/ಆಯ್ಕೆ ಮಾಡಿಕೊಳ್ಳುವುದನ್ನು ಎಲ್ಲಾ ಅಧಿಕಾರಿ/ನೌಕರರಿಗೆ (ಸರ್ಕಾರಿ / ಸರ್ಕಾರಿ ಸಂಸ್ಥೆಗಳು, ಇತ್ಯಾದಿ) ಕಡ್ಡಾಯಗೊಳಿಸುವ ಬಗ್ಗೆ ಆದೇಶಿಸಲಾಗಿದೆ.
ಉಲ್ಲೇಖಿತ ಪತ್ರದಲ್ಲಿನ ಅಂಶಗಳ ಹಿನ್ನೆಲೆ ಹಾಗೂ ಸಚಿವ ಸಂಪುಟದ ಸಭೆಯಲ್ಲಿ ತಿರ್ಮಾನಿಸಿದಂತೆ, ನೌಕರರ ಮತ್ತು ಅವಲಂಬಿತ ಕುಟುಂಬ ಸದಸ್ಯರ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ಈ ಕೆಳಗಿನಂತೆ ಆದೇಶಿಸಲಾಗಿದೆ:-
a) ವಿವಿಧ ಬ್ಯಾಂಕುಗಳು ಒದಗಿಸುವ “ಸಂಬಳ ಪ್ಯಾಕೇಜ್‌ಗಳ ಅಡಿಯಲ್ಲಿ ಖಾತೆಗಳನ್ನು ತೆರೆಯುವುದು/ಆಯ್ಕೆ ಮಾಡಿಕೊಳ್ಳುವುದನ್ನು ಎಲ್ಲಾ ಅಧಿಕಾರಿ/ನೌಕರರಿಗೆ (ಸರ್ಕಾರಿ / ಸರ್ಕಾರಿ ಸಂಸ್ಥೆಗಳು, ಇತ್ಯಾದಿ) ಕಡ್ಡಾಯಗೊಳಿಸಿದೆ.
b) ಬ್ಯಾಂಕ್‌ಗಳು/ಅಂಚೆ ಕಚೇರಿಗಳು ನೀಡುವ PMJJBY ಮತ್ತು PMSBY ಯೋಜನೆಗಳ ಅಡಿಯಲ್ಲಿ ಸ್ವಯಂಪ್ರೇರಿತ ಆಧಾರದ ಮೇಲೆ ವಿಮಾ ರಕ್ಷಣೆಯನ್ನು ಪಡೆಯಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿ/ನೌಕರರಿಗೆ ಆದೇಶಿಸುವುದು.
c) ಬ್ಯಾಂಕ್‌ಗಳು ನೀಡುವ ವಿವಿಧ ಯೋಜನೆಗಳ ಅಡಿಯಲ್ಲಿ ಸ್ವಯಂಪ್ರೇರಿತ ಆಧಾರದ ಮೇಲೆ ವೈಯಕ್ತಿಕ ಅಪಘಾತ ವಿಮಾ ರಕ್ಷಣೆಯನ್ನು ಪಡೆಯಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿ/ನೌಕರರಿಗೆ ತಿಳಿಸುವುದು.
ಸರ್ಕಾರದ ಅಧಿಕಾರಿ/ನೌಕರರ PMJJBY ಮತ್ತು PMSBY ಯೋಜನೆಗಳ ವಿವರಗಳನ್ನು HRMSನಲ್ಲಿ ನಮೂದಿಸಲು ಈ ಕೆಳಗಿನ ಕ್ರಮವನ್ನು ಅನುಸರಿಸುವುದು ಅಂ ತತಿಳಿಸಿದೆ.
ಇದೇ ವೇಳೆಡ ಎಲ್ಲಾ ಅಧಿಕಾರಿ/ನೌಕರರ PMJJBY ಮತ್ತು PMSBY ಯೋಜನೆಗಳ ವಿವರಗಳನ್ನು ಎಲ್ಲಾ ಇಲಾಖೆಯ ಡಿ.ಡಿ.ಒ.ಗಳು ಈ ಮಾಹಿತಿಯನ್ನು ಹೆಚ್.ಆರ್.ಎಂ.ಎಸ್-1 ರಲ್ಲಿ ನಮೂದಿಸಲು ತಿಳಿಸಿದೆ ಒಂದು ವೇಳೆ ಒಬ್ಬ ನೌಕರನ ವಿವರವನ್ನು ನಮೂದಿಸದಿದಲ್ಲಿ ತಮ್ಮ ಡಿ.ಡಿ.ಒ. ಹಂತದಲ್ಲಿನ ಯಾವ ನೌಕರರಿಗೂ ವೇತನವನ್ನು ಸೆಳೆಯಲು ಸಾಧ್ಯವಾಗುವುದಿಲ್ಲಾ.
ಎಲ್ಲಾ ಅಧಿಕಾರಿ/ನೌಕರರು ತಮ್ಮ ಬ್ಯಾಂಕ್ ಖಾತೆಗಳನ್ನು “ಸಂಬಳ ಪ್ಯಾಕೇಜ್” ಆಗಿ ಪರಿವರ್ತಿಸಿಕೊಳಲು ಹಾಗೂ ಎಲ್ಲಾ ಇಲಾಖೆಯ ಡಿ.ಡಿ.ಒ.ಗಳು ಈ ಮಾಹಿತಿಯನ್ನು ಹೆಚ್.ಆರ್.ಎಂ.ಎಸ್-1 ರಲ್ಲಿ ನಮೂದಿಸಲು ತಿಳಿಸಿದೆ. ಆದ್ದರಿಂದ ಎಲ್ಲಾ ಇಲಾಖೆಗಳು ತಮ್ಮ ಅಧೀನದಲ್ಲಿರುವ ಸಿಬ್ಬಂದಿಯವರಿಗೆ ಈ ಕೂಡಲೇ ಕಡ್ಡಾಯವಾಗಿ ತಮ್ಮ ಚಾಲ್ತಿ ಬ್ಯಾಂಕ್ ಖಾತೆಗಳನ್ನು ಸಂಬಳ ಪ್ಯಾಕೇಜ್
ಖಾತೆಯಾಗಿ ಮಾಡಿಕೊಳಲು / ಮಾರ್ಪಡಿಸಿಕೊಳಲು ಸೂಚಿಸಿದೆ.
“ಸಂಬಳ ಪ್ಯಾಕೇಜ್” ಪ್ರಕ್ರಿಯೆಯನ್ನು ಮಾಡಲು ಈ ಮುಂದಿನ ರೀತಿಯನ್ನು ಈ ಕೆಳಕಂಡಂತೆ ಅನುಸರಿಸುವುದು ಡಿಡಿಓ ಲಾಗಿನ್ ಆದ ತಕ್ಷಣ, ಡಿಡಿಓ ಅಡಿಯಲ್ಲಿ ಬರುವ ಪ್ರತಿಯೊಬ್ಬ ಉದ್ಯೋಗಿ ಬ್ಯಾಂಕ್ ಸಂಬಳ ಪ್ಯಾಕೇಜ್‌ಗಳನ್ನು ಅಳವಡಿಸಿಕೊಂಡಿದ್ದಾರೆಯೇ ಎಂದು ದೃಢೀಕರಿಸುವುದು (ಹೌದು/ಇಲ್ಲಾ) ಆಯ್ಕೆಯನ್ನು ಮಾಡುವುದು.
ಎಲ್ಲಾ ಉದ್ಯೋಗಿಗಳಿಂದ ದೃಢೀಕರಣಗಳನ್ನು ಸ್ವೀಕರಿಸುವವರೆಗೆ, ಸಿಸ್ಟಮ್ ಡಿಡಿಓ ಬಳಕೆದಾರರಿಗೆ ಲಾಗಿನ್ ಆಗಲು ಅನುಮತಿಸುವುದಿಲ್ಲ. ಇದು ಒಂದು ಬಾರಿಯ ಚಟುವಟಿಕೆಯಾಗಿದೆ.
ಆದಾಗ್ಯೂ, ಪ್ರಸ್ತುತ ಸರ್ಕಾರದ ಅಧಿಕಾರಿ/ನೌಕರರ ಬ್ಯಾಂಕಿನಲ್ಲಿ ಈ ಯೋಜನೆಯನ್ನು ಅಳವಡಿಸಿಕೊಂಡಿಲ್ಲದಿದ್ದರೆ, ಉಲ್ಲೇಖಿತ ಆದೇಶದ ಪ್ರಕಾರ, ಮುಂದಿನ ಮೂರು ತಿಂಗಳ ವೇಳೆಗೆ ಇದನ್ನು ಹೌದು ಎಂದು ನವೀಕರಿಸದಿದ್ದರೆ, ಅವರ ವೇತನವನ್ನು ನಿಲ್ಲಿಸಲಾಗುತ್ತದೆ.ಹೆಚ್.ಆರ್.ಎಂ.ಎಸ್-1ರ ತಂತ್ರಾಂಶಕ್ಕೆ ಸಂಬಂಧಿತ ಸ್ಮಿನ್‌ಶಾಟ್‌ಗಳನ್ನು ಕೆಳಗೆ ಲಗತ್ತಿಸಲಾಗಿದೆ: ಅಂ ತತಿಳಿಸಿದೆ.