Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ ಜನತೆಯ ಗಮನಕ್ಕೆ : `ಶಾಸಕರ ಅನುದಾನ’ದಲ್ಲಿ ಈ ಎಲ್ಲಾ ಕಾಮಗಾರಿಗಳನ್ನು ಕೈಗೊಳ್ಳಬಹುದು.!

ರೈತರೇ ಗಮನಿಸಿ : ಈ ಬೆಳೆ ಬೆಳೆದರೆ ಕೇವಲ 90 ದಿನಗಳಲ್ಲಿ ಲಕ್ಷಾಂತರ ಆದಾಯ ಗಳಿಸಬಹುದು.!

​ಪಶ್ಚಿಮ ಏಷ್ಯಾ ಬಿಕ್ಕಟ್ಟು: ವಿದ್ಯುತ್ ಸ್ಥಾವರಗಳಿಂದ ‘ಸ್ಪಾಟ್ ಮಾರ್ಕೆಟ್’ ಗ್ಯಾಸ್ ಖರೀದಿಯಲ್ಲಿ ಶೇ. 300ಕ್ಕೂ ಹೆಚ್ಚು ಏರಿಕೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಣ್ಣ ನೀರಾವರಿ ಹಾಗೂ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಕ್ಕೆ ಬಂಪರ್ ಕೊಡುಗೆ: ಬಜೆಟ್ ಸ್ವಾಗತಿಸಿದ ಸಚಿವ ಎನ್.ಎಸ್. ಬೋಸರಾಜು
KARNATAKA

ಸಣ್ಣ ನೀರಾವರಿ ಹಾಗೂ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಕ್ಕೆ ಬಂಪರ್ ಕೊಡುಗೆ: ಬಜೆಟ್ ಸ್ವಾಗತಿಸಿದ ಸಚಿವ ಎನ್.ಎಸ್. ಬೋಸರಾಜು

By ವಸಂತ ಬಿ ಈಶ್ವರಗೆರೆ

ಬೆಂಗಳೂರು: “ಸರ್ವರ ಸಬಲೀಕರಣ, ಅವಕಾಶಗಳ ಅನಾವರಣ, ನವ ಕರ್ನಾಟಕದ ನಿರ್ಮಾಣ” ಎಂಬ ನಮ್ಮ ಸರ್ಕಾರದ ಮೂಲ ಆಶಯಕ್ಕೆ ತಕ್ಕಂತೆ ಅತ್ಯುತ್ತಮ ಬಜೆಟ್‌ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದಾರೆ ಎಂದು ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಅಂತರ್ಜಲ ವೃದ್ಧಿ ಹಾಗೂ ಕೆರೆಗಳ ಮರುಪೂರಣಕ್ಕೆ ಬಜೆಟ್‌ನಲ್ಲಿ ಸಿಂಹಪಾಲು ನೀಡಲಾಗಿದೆ. ರಾಜ್ಯಾದ್ಯಂತ ಏತ ನೀರಾವರಿ, ಚೆಕ್‌ಡ್ಯಾಂ ಹಾಗೂ ಕೆರೆಗಳ ಪುನಶ್ಚೇತನದ ಕಾಮಗಾರಿಗಳಿಗೆ ಬರೋಬ್ಬರಿ 1,793 ಕೋಟಿ ರೂ. ಮೀಸಲಿಟ್ಟಿರುವುದು ಐತಿಹಾಸಿಕ ಹೆಜ್ಜೆ. ಹೆಚ್.ಎನ್. ವ್ಯಾಲಿ ಹಾಗೂ ವೃಷಭಾವತಿ ವ್ಯಾಲಿ ಯೋಜನೆಗಳ ಮೂಲಕ ಶಿಡ್ಲಘಟ್ಟ, ಚಿಂತಾಮಣಿ, ಹೊಸಕೋಟೆ, ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ಭಾಗದ ನೂರಾರು ಕೆರೆಗಳಿಗೆ 1,027 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ನೀರು ತುಂಬಿಸುವ ಮೂಲಕ ಬಯಲುಸೀಮೆಯ ನೀರಿನ ದಾಹ ತೀರಿಸಲಾಗುತ್ತಿದೆ. ಅಲ್ಲದೆ, ಕೆರೆ ಬಳಕೆದಾರರ ಸಂಘಗಳ ಬಲವರ್ಧನೆಗೂ ಸರ್ಕಾರ ಒತ್ತು ನೀಡಿದೆ,” ಎಂದು ತಿಳಿಸಿದ್ದಾರೆ.

“ಮತ್ತೊಂದೆಡೆ, ರಾಜ್ಯದ ಭವಿಷ್ಯದ ತಂತ್ರಜ್ಞಾನಕ್ಕೆ ಪೂರಕವಾಗಿ 10 ಕೋಟಿ ರೂ. ವೆಚ್ಚದಲ್ಲಿ ‘ಕರ್ನಾಟಕ ಕ್ವಾಂಟಮ್ ರೋಡ್‌ಮ್ಯಾಪ್’ ಜಾರಿಗೊಳಿಸಲಾಗುತ್ತಿದೆ. ಬೆಂಗಳೂರಿನ ಆದಿನಾರಾಯಣ ಹೊಸಹಳ್ಳಿಯಲ್ಲಿ 233 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ‘ವಿಜ್ಞಾನ ನಗರ’ (Science City) ಸ್ಥಾಪನೆಗೆ ಡಿಪಿಆರ್ ಸಿದ್ದಪಡಿಸುವ ಘೋಷಣೆ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಸೇರಿದಂತೆ 6 ಜಿಲ್ಲೆಗಳಲ್ಲಿ 24 ಕೋಟಿ ರೂ. ವೆಚ್ಚದಲ್ಲಿ ನೂತನ ತಾರಾಲಯಗಳನ್ನು ನಿರ್ಮಿಸಲಾಗುತ್ತಿದೆ. ಇದು ಗ್ರಾಮೀಣ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಲು ಮಹತ್ವದ ಮೈಲಿಗಲ್ಲಾಗಲಿದೆ. ಒಟ್ಟಾರೆಯಾಗಿ ಈ ಬಜೆಟ್ ‘ಸರ್ವರ ಸಬಲೀಕರಣ, ಅವಕಾಶಗಳ ಅನಾವರಣ, ನವ ಕರ್ನಾಟಕದ ನಿರ್ಮಾಣ’ದ ಕನಸನ್ನು ನನಸು ಮಾಡುವ ಅತ್ಯುತ್ತಮ ದಿಕ್ಸೂಚಿಯಾಗಿದೆ,” ಎಂದು ಸಚಿವ ಎನ್.ಎಸ್. ಬೋಸರಾಜು ಹರ್ಷ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಸಾಲ ₹8.24 ಲಕ್ಷ ಕೋಟಿಗೆ ಏರಿದೆ; ಬಜೆಟ್ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಕಳವಳ

ಸಿಎಂ ಸಿದ್ಧರಾಮಯ್ಯ ಮತ್ತೊಂದು ದಾಖಲೆ: ಸತತ 3 ಗಂಟೆ 30 ನಿಮಿಷ ನಿಂತುಕೊಂಡೇ ಬಜೆಟ್ ಮಂಡನೆ | Karnataka Budget 2026-27

Share. Facebook Twitter LinkedIn WhatsApp Email

Related Posts

ರಾಜ್ಯದ ಜನತೆಯ ಗಮನಕ್ಕೆ : `ಶಾಸಕರ ಅನುದಾನ’ದಲ್ಲಿ ಈ ಎಲ್ಲಾ ಕಾಮಗಾರಿಗಳನ್ನು ಕೈಗೊಳ್ಳಬಹುದು.!

3 Mins Read

ರೈತರೇ ಗಮನಿಸಿ : ಈ ಬೆಳೆ ಬೆಳೆದರೆ ಕೇವಲ 90 ದಿನಗಳಲ್ಲಿ ಲಕ್ಷಾಂತರ ಆದಾಯ ಗಳಿಸಬಹುದು.!

2 Mins Read

ALERT : ಕಿಡ್ನಿ ಹಾಳಾಗುವ ಮುನ್ನ ದೇಹ ನೀಡುವ ಈ 5 ಅಪಾಯಕಾರಿ ಸೂಚನೆಗಳನ್ನು ನಿರ್ಲಕ್ಷಿಸಬೇಡಿ | Kidney Failure Warning

2 Mins Read
Recent News

ರಾಜ್ಯದ ಜನತೆಯ ಗಮನಕ್ಕೆ : `ಶಾಸಕರ ಅನುದಾನ’ದಲ್ಲಿ ಈ ಎಲ್ಲಾ ಕಾಮಗಾರಿಗಳನ್ನು ಕೈಗೊಳ್ಳಬಹುದು.!

ರೈತರೇ ಗಮನಿಸಿ : ಈ ಬೆಳೆ ಬೆಳೆದರೆ ಕೇವಲ 90 ದಿನಗಳಲ್ಲಿ ಲಕ್ಷಾಂತರ ಆದಾಯ ಗಳಿಸಬಹುದು.!

​ಪಶ್ಚಿಮ ಏಷ್ಯಾ ಬಿಕ್ಕಟ್ಟು: ವಿದ್ಯುತ್ ಸ್ಥಾವರಗಳಿಂದ ‘ಸ್ಪಾಟ್ ಮಾರ್ಕೆಟ್’ ಗ್ಯಾಸ್ ಖರೀದಿಯಲ್ಲಿ ಶೇ. 300ಕ್ಕೂ ಹೆಚ್ಚು ಏರಿಕೆ!

​ಇಸ್ರೇಲ್‌ನಲ್ಲಿ ರಾರಾಜಿಸಲಿದ್ದಾನೆ ಶಿವಾಜಿ ಮಹಾರಾಜ: ಮಹಾನ್ ನಾಯಕನ ಪ್ರತಿಮೆ ನಿರ್ಮಿಸಲು ಸಿದ್ಧತೆ!

State News
KARNATAKA

ರಾಜ್ಯದ ಜನತೆಯ ಗಮನಕ್ಕೆ : `ಶಾಸಕರ ಅನುದಾನ’ದಲ್ಲಿ ಈ ಎಲ್ಲಾ ಕಾಮಗಾರಿಗಳನ್ನು ಕೈಗೊಳ್ಳಬಹುದು.!

By kannadanewsnow57 KARNATAKA 3 Mins Read

ಬೆಂಗಳೂರು: ಕರ್ನಾಟಕ ಸರ್ಕಾರದ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (LADS) ಅಡಿಯಲ್ಲಿ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗಾಗಿ ಯಾವೆಲ್ಲಾ ಪ್ರಮುಖ ಕಾಮಗಾರಿಗಳನ್ನು…

ರೈತರೇ ಗಮನಿಸಿ : ಈ ಬೆಳೆ ಬೆಳೆದರೆ ಕೇವಲ 90 ದಿನಗಳಲ್ಲಿ ಲಕ್ಷಾಂತರ ಆದಾಯ ಗಳಿಸಬಹುದು.!

ALERT : ಕಿಡ್ನಿ ಹಾಳಾಗುವ ಮುನ್ನ ದೇಹ ನೀಡುವ ಈ 5 ಅಪಾಯಕಾರಿ ಸೂಚನೆಗಳನ್ನು ನಿರ್ಲಕ್ಷಿಸಬೇಡಿ | Kidney Failure Warning

BIG NEWS: ನಿಮ್ಮ ಬಳಿ ಖಾಲಿ ಜಾಗ ಅಥವಾ ಕಟ್ಟಡವಿದೆಯೇ? ಇಲ್ಲಿದೆ ತಿಂಗಳಿಗೆ ₹1 ಲಕ್ಷದವರೆಗೆ ಆದಾಯ ಗಳಿಸುವ ಅವಕಾಶ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.