ಶಿವಮೊಗ್ಗ: ರಾಜ್ಯ ಸರ್ಕಾರದಿಂದ ಶಾಸಕ ಗೋಪಾಲಕೃಷ್ಣ ಬೇಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಮತ್ತೊಂದು ಬಂಫರ್ ಗಿಫ್ಟ್ ನೀಡಿದೆ. ಅದೇ ಹೊಸನಗರದ 8, ಸಾಗರದ 8 ಶಾಲೆಗಳ ಕಟ್ಟಡದ ದುರಸ್ತಿಗಾಗಿ ಲಕ್ಷ ಲಕ್ಷ ಅನುದಾನವನ್ನು ಬಿಡುಗಡೆಗೊಳಿಸಿದೆ.
ಈ ಕುರಿತಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ನಡವಳಿಯನ್ನು ಹೊರಡಿಸಿದ್ದು, 2025-26ನೇ ಸಾಲಿನ ಮುಂದುವರೆದ ಯೋಜನೆಯ ಅಡಿಯಲ್ಲಿ 2819 ಸರ್ಕಾರಿ ಶಾಲೆಗಳ 4163 ತರಗತಿ ಕೊಠಡಿಗಳ ಸಣ್ಣ ಪ್ರಮಾಣದ ದುರಸ್ತಿ ಕಾಮಗಾರಿಗಳಿಗೆ ರೂ.4,430.48 ಲಕ್ಷಗಳು ಮತ್ತು 3130 ತರಗತಿ ಕೊಠಡಿಗಳ ದೊಡ್ಡ ಪ್ರಮಾಣದ ದುರಸ್ತಿ ಕಾಮಗಾರಿಗಳಿಗೆ ರೂ.5,258.41 ಲಕ್ಷಗಳು ಸೇರಿದಂತೆ 7,293 ತರಗತಿ ಕೊಠಡಿಗಳ ದುರಸ್ತಿ ಕಾಮಗಾರಿಗಳ ಕ್ರಿಯಾಯೋಜನೆ ಅನುಷ್ಠಾನಕ್ಕೆ ರೂ.9,688.89 ಲಕ್ಷ ಅನುದಾನವನ್ನು ನಿಬಂಧನೆಗಳು, ಷರತ್ತುಗಳಿಗೆ ಒಳಪಟ್ಟಂತೆ ಯೋಜನೆಯನ್ನು ಸಮರ್ಪಕವಾಗಿ, ಗುಣಮಟ್ಟ ಕಾಪಾಡಿಕೊಂಡು ನಿಗದಿತ ಕಾಲಾವಧಿಯಲ್ಲಿ ಆಯಾ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಮೂಲಕ ಅನುಷ್ಠಾನಗೊಳಿಸಲು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರಿಗೆ ಅನುಮೋದನೆ ನೀಡಿ ಆದೇಶಿಸಿದೆ ಎಂದಿದ್ದಾರೆ.
ಹೊಸನಗರದ 8 ಶಾಲೆಗಳ ದುರಸ್ತಿಗೆ ಅನುದಾನ ಮಂಜೂರು
- ಕರ್ನಾಟಕ ಪಬ್ಲಿಕ್ ಶಾಲೆ ಕಮ್ಮಚಿಯ 1 ಕೊಠಡಿಯ ಸಣ್ಣ ರಿಪೇರಿಗೆ 1.50 ಲಕ್ಷ, 1 ದೊಡ್ಡ ಪ್ರಮಾಣದ ಕೊಠಡಿ ದುರಸ್ತಿಗೆ 2 ಲಕ್ಷ ಸೇರಿದಂತೆ 3.50 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ.
- ಜಿಹೆಚ್ ಪಿಎಸ್ ಮೆಲಿನಬೆಸಿಗೆ ಶಾಲೆಯ 2 ಕೊಠಡಿಗಳ ಸಣ್ಣ ರಿಪೇರಿಗೆ 2.50 ಲಕ್ಷ, 2 ಕೊಠಡಿಗಳ ದೊಡ್ಡ ಪ್ರಮಾಣದ ದುರಸ್ತಿಗೆ 3.93 ಸೇರಿದಂತೆ 5.43 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ.
- ಜಿಹೆಚ್ ಪಿಎಸ್ ಕೋಡೂರು ಶಾಲೆಗೆ ರೂ.5 ಲಕ್ಷ ಮಂಜೂರು
- ಜಿಹೆಚ್ ಪಿ ಸೊನಾಲೆ ಶಾಲೆಗೆ ರೂ.6 ಲಕ್ಷ
- ಜಿಹೆಚ್ಎಸ್ ಹೆದ್ದಾರಿಪುರ ಶಾಲೆಗೆ ರೂ.5.50 ಲಕ್ಷ
- ಜಿಹೆಚ್ ಪಿಜಿಎಸ್ ಹೊಸನಗರ ಶಾಲೆಗೆ ರೂ.5.93 ಲಕ್ಷ
- ಜಿಪಿಯುಸಿ ಪ್ರೌಢಶಾಲೆ ವಿಭಾಗ, ಹೊಸನಗರಕ್ಕೆ ರೂ.4 ಲಕ್ಷ
- ಜಿಎಂ ಹೆಚ್ ಪಿ ಎಸ್ ರಿಪ್ಪನ್ ಪೇಟೆ ಶಾಲೆಗೆ ರೂ.3 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ.
ಸಾಗರ ತಾಲ್ಲೂಕಿನ ಈ 9 ಶಾಲೆಗಳ ದುರಸ್ತಿಗೆ ಅನುದಾನ ಮಂಜೂರು
- ಜಿಎಂ ಹೆಚ್ ಪಿ ಎಸ್ ಬೆಳಲಮಕ್ಕಿ ಶಾಲೆಗೆ ರೂ.5.50 ಲಕ್ಷ
- ಕರ್ನಾಟಕ ಪಬ್ಲಿಕ್ ಶಾಲೆ, ಜಿಹೆಚ್ ಪಿಎಸ್ ಆನಂದಪುರಕ್ಕೆ ರೂ. 5.50 ಲಕ್ಷ
- ಜಿಪಿಯುಸಿ ಸಾಗರಕ್ಕೆ ರೂ.4 ಲಕ್ಷ
- ಜಿಹೆಚ್ ಪಿಎಸ್ ಹೊನ್ನೇಸರ ರೂ.4 ಲಕ್ಷ
- ಜಿಹೆಚ್ ಪಿಎಸ್ ತ್ಯಾಗರ್ತಿಗೆ ರೂ.4 ಲಕ್ಷ
- ಜಿಹೆಚ್ ಪಿಎಸ್ ವಿನೋಭನಗರ ಸಾಗರ ಇಲ್ಲಿನ ಶಾಲೆಗೆ ರೂ.3 ಲಕ್ಷ
- ಜಿಪಿಯುಸಿ ಆವಿನಹಳ್ಳಿ ಶಾಲೆಗೆ ರೂ.3 ಲಕ್ಷ
- ಜಿಹೆಚ್ ಪಿಎಸ್ ಗೌತಮಪುರಕ್ಕೆ ರೂ.2 ಲಕ್ಷವನ್ನು ಶಾಲೆಯ ದುರಸ್ತಿಗಾಗಿ ಅನುದಾನವನ್ನು ಮಂಜೂರು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು










