ಬೆಂಗಳೂರು: ರಾಜ್ಯ ಕಾಂಗ್ರೆಸ್ ನಿಂದ ( Karnataka Congress ) ಮುಂಬರುವಂತ ವಿಧಾನಸಭಾ ಚುನಾವಣೆಗಾಗಿ ( Karnataka Assembly Election 2023 ) ಭರ್ಜರಿ ತಯಾರಿಯನ್ನು ನಡೆಸಲಾಗಿದೆ. ಈ ಸಂಬಂಧ ಇದೀಗ ಚುನಾವಣಾ ಪ್ರಣಾಳಿಕೆ, ಪಾಲಿಸಿ ಮತ್ತು ವಿಷನ್ ಕಮಿಟಿಯನ್ನು ರಚಿಸಿದೆ.
ಹತ್ಯೆಗೀಡಾದ ಪ್ರವೀಣ್ ನೆಟ್ಟಾರು, ಮಸೂದ್, ಫಾಜಿಲ್ ಮನೆಗೆ ಹೆಚ್.ಡಿ.ಕುಮಾರಸ್ವಾಮಿ ಭೇಟಿ: ಕುಟುಂಬಸ್ಥರಿಗೆ ಸಾಂತ್ವಾನ
ಈ ಸಂಬಂಧ ಎಐಸಿಸಿಯ ಜನರಲ್ ಸೆಕ್ರೇಟರಿ ಕೆ.ಸಿ ವೇಣುಗೋಪಾಲ್ ( KC Venugopal ) ಮಾಹಿತಿ ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ಅಧ್ಯಕ್ಷರ ಸೂಚನೆಯ ಮೇರೆಗೆ 2023ರ ವಿಧಾನಸಭಾ ಚುನಾವಣೆ ಸಲುವಾಗಿ ಚುನಾವಣಾ ಪ್ರಣಾಳಿಕೆ, ಪಾಲಿಸಿ ಮತ್ತು ವಿಷನ್ ಕಮಿಟಿಗೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ತನಿಖೆಗಾಗಿ ಪೊಲೀಸರಿಗೆ ಮುಕ್ತ ಅಧಿಕಾರ ನೀಡಲಾಗಿದೆ – ಸಿಎಂ ಬೊಮ್ಮಾಯಿ
ಅವರ ಆದೇಶದಂತೆ ಕೆಪಿಸಿಸಿಯ ಚುನಾವಣಾ ಪ್ರಣಾಳಿಕೆ ತಯಾರಿಕೆ ಕಮಿಟಿಯ ಅಧ್ಯಕ್ಷರನ್ನಾಗಿ ಡಾ.ಜಿ ಪರಮೇಶ್ವರ್, ಉಪಾಧ್ಯಕ್ಷರನ್ನಾಗಿ ಮಧು ಬಂಗಾರಪ್ಪ ಹಾಗೂ ಪ್ರೊ.ರಾಧಾಕೃಷ್ಣ ಅವರನ್ನು ನೇಮಕ ಮಾಡಲಾಗಿದೆ.