ರಾಯಚೂರು: ವಿದ್ಶಾರ್ಥಿ ಮಕ್ಕಳ ( School Children ) ಮೇಲೆ ಬಿಸಿನೀರು ಎರಚಿದ ಪ್ರಕರಣದ ಸಂಬಂಧ ಎಚ್ಚೆತ್ತುಕೊಂಡಿರುವಂತ ರಾಜ್ಯ ಮಕ್ಕಳ ಹಕ್ಕುಗಳ ಆಯೋವು, ಶಿಕ್ಷಣ ಇಲಾಖೆಗೆ ಒಂದು ವಾರದೊಳಗೆ ಘಟನೆ ಬಗ್ಗೆ ವರದಿ ನೀಡುವಂತೆ ನೋಟಿಸ್ ನೀಡಿದೆ. ಅಲ್ಲದೇ ತಲೆ ಮರೆಸಿಕೊಂಡಿರುವಂತ ಶಿಕ್ಷಕ ಹುಲಿಗೆಪ್ಪನನ್ನು ಬಂಧಿಸುವಂತೆ ತಿಳಿಸಿದೆ.
BIG ALEART: ಸಿಲಿಂಡರ್ ಡೆಲಿವರಿ ಶುಲ್ಕ ನೀಡುವಂತಿಲ್ಲ, ಹೆಚ್ಚಿನ ಹಣ ಕೇಳಿದ್ರೆ ಇಲ್ಲಿ ದೂರು ಸಲ್ಲಿಸಿ
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಸಂತೆಕಲ್ಲೂರಿನಲ್ಲಿರುವಂತ ಶಅರೀ ಘನಮಠೇಶ್ವರ ಶಾಲೆಯಲ್ಲಿ ಶಿಕ್ಷಕ ಹುಲಿಗೆಪ್ಪ ಎಂಬಾತ, ಸಮವಸ್ತ್ರದಲ್ಲಿ ಮಲ ವಿಸರ್ಜಿಸಲು ನಿರಾಕರಿಸಿದಂತ ವಿದ್ಯಾರ್ಥಿಯ ಮೇಲೆ ಬಿಸಿನೀರು ಎರಚಿದ್ದನು. ಈ ಸಂಬಂಧ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದಿಂದ ಶಿಕ್ಷಣ ಇಲಾಖೆಗೆ ನೋಟಿಸ್ ನೀಡಲಾಗಿದ್ದು, 1 ವಾರದೊಗಳೆಗೆ ಘಟನೆ ಸಂಬಂಧ ವರದಿ ಸಲ್ಲಿಸಬೇಕು. ಈ ಘಟನೆಗೆ ಕಾರಣವಾಗಿರುವಂತ ಶಿಕ್ಷಕ ಹುಲಿಗೆಪ್ಪನನ್ನು ಬಂಧಿಸಬೇಕು ಎಂಬುದಾಗಿ ಸೂಚಿಸಿದೆ.
ವಾರ್ಷಿಕ ಫ್ಲೂ ಲಸಿಕೆಯು ಪಾರ್ಶ್ವವಾಯುವಿನ ಅಪಾಯವನ್ನು ಕಡಿಮೆ ಮಾಡುತ್ತದೆ – ಅಧ್ಯಯನ | risk of stroke
ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ನೋಟಿಸ್ ಬೆನ್ನಲ್ಲೇ ಪೊಲೀಸ್ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈ ಘಟನೆ ಸಂಬಂಧ ಮಾಹಿತಿ ಪಡೆದು, ಮಸ್ಕಿ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದಷ್ಟೇ ಅಲ್ಲದೇ ಸಿಡಿಪಿಒ ಮನ್ಸೂರ್ ಅಹ್ಮದ್ ನೇತೃತ್ವದಲ್ಲಿ ಘಟನೆ ನಡೆದಂತ ಸಂತೆಕೆಲ್ಲೂರಿನ ಶ್ರೀಘನಮಠೇಶ್ವರ ಶಾಲೆಗೆ ತೆರಳಿ ಸ್ಥಳ ಮಹಜರ್ ಕೂಡ ನಡೆಸಿದ್ದಾರೆ. ತಲೆ ಮರೆಸಿಕೊಂಡಿರುವಂತ ಶಿಕ್ಷಕ ಹುಲಿಗೆಪ್ಪ ಪತ್ತೆಗೆ ತನಿಖೆ ಮುಂದುವರೆಸಲಾಗಿದೆ.